ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್

First Published | Jun 18, 2020, 11:24 AM IST

ಇಂದು ಮಾಸ್ಕ್ ಡೇ ಎಂದು ಆಚರಿಸಲಾಗುತ್ತಿದ್ದು, ಸಿಎಂ ಬಿ. ಎಸ್ ಯಡಿಯೂರಪ್ಪ ಅವರ ಜೊತೆ ಕ್ರಿಕೆಟರ್ಸ್, ಸಿನಿಮಾ ತಾರೆಯರು ಭಾಗವಹಿಸಿದ್ದಾರೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ರಾಗಿಣಿ, ಸಂಸದ ಪಿಸಿ ಮೋಹನ್, ಸಂಸದ ತೇಜಸ್ವಿ ಸೂರ್ಯ  ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿವೆ ಫೋಟೋಸ್

ಇಂದು ಮಾಸ್ಕ್ ಡೇ ಎಂದು ಆಚರಿಸಲಾಗುತ್ತಿದ್ದು, ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಕ್ರಿಕೆಟರ್ಸ್, ಸಿನಿಮಾ ತಾರೆಯರು ಸಾಥ್ ನೀಡಿದ್ದಾರೆ.
undefined
ಮಾಸ್ಕ್ ಡೇ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಜನ ಇರಬಾರದು ಎಂದು ಸರ್ಕಾರವೇ ಆದೇಶ ಹೊರಡಿಸಿದೆ.
undefined

Latest Videos


ಆದರೂ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
undefined
ಈ ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
undefined
ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.
undefined
ಸಿಎಂ ಯಡಿಯೂರಪ್ಪ ವಿಧಾನಸೌಧದ ಕೆ.ಆರ್. ಸರ್ಕಲ್ ವರೆಗೂ ಪಾದಯಾತ್ರೆ ಹೊರಟಿದ್ದರು.
undefined
ನಟ ಪುನೀತ್ ರಾಜ್ ಕುಮಾರ್ ಸಹ ಆಗಮಿಸಿದ್ದರು.
undefined
ಮಾಸ್ಕ್ ಡೇ ಉದ್ದೇಶ ಜಾಗೃತಿ ಮೂಡಿಸುವುದಾಗಿದೆ. ರಾಜ್ಯಾದ್ಯಂತ ಇವತ್ತು ಮಾಸ್ಕ್ ಡೇ ಆಚರಿಸಲಾಗುತ್ತಿದೆ ಎಂದಿದ್ದಾರೆ.
undefined
ಸಿಎಂ ಕಬ್ಬನ್ ಪಾರ್ಕ್ ನಲ್ಲಿ ವಾಯು ವಿಹಾರಿಗಳಿಗೆ ಮಾಸ್ಕ್ ವಿತರಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
undefined
ಸಿನಿಮಾ ಶೂಟಿಂಗ್‌ಗೆ ಅನುಮತಿ ವಿಚಾರವಾಗಿ ಪುನೀತ್ ರಾಜ್ ಕುಮಾರ್ ಹೇಳಿಕೆ ನೀಡಿದ್ದು, ಸರ್ಕಾರದಿಂದ ಸೀರಿಯಲ್ಸ್ ಮತ್ತು ಸಿನಿಮಾ ಶೂಟಿಂಗ್ ಗೆ ಅನುಮತಿ ಸಿಕ್ಕಿದೆ. ಆದಷ್ಟು ಬೇಗ ಶೂಟಿಂಗ್ ಗಳು ಶುರುವಾಗುತ್ತವೆ. ಆದರೆ ಸಿನಿಮಾ ಥಿಯೇಟರ್ ಗಳಿಗೂ ಆದಷ್ಟು ಬೇಗ ಅನುಮತಿ ಕೊಡಲಿ ಎಂದಿದ್ದಾರೆ.
undefined
ಸಚಿವರು, ಕ್ರೀಡೆ, ಸಿನಿಮಾ ಗಣ್ಯರು ಭಾಗವಹಿಸಿದ್ದರು. ಮಾಸ್ಕ್ ಡೇ ಮುಂದೆ ಯಾವಾಗ ಆಚರಿಸಬೇಕೆಂದು ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ. ಸದ್ಯಕ್ಕೆ ಇವತ್ತು ಮಾಸ್ಕ್ ಡೇ ಮಾಡಿದ್ದೇವೆ. ಮುಂದೆ ಯಾವಾಗ ಆಚರಣೆ ಎಂಬುದನ್ನು ಆಲೋಚಿಸುತ್ತೇವೆ ಎಂದಿದ್ದಾರೆ.
undefined
ನಟಿ ರಾಗಿಣಿ ಮಾತನಾಡಿ, ಜನ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಮ್ಮಿ ಮಾಡಿದ್ದಾರೆ. ಎಲ್ಲರೂ ಸೀರಿಯಸ್ಸಾಗಿ ಮಾಸ್ಕ್ ಹಾಕಬೇಕು, ಸಾಮಾಜಿಕ ಅಂತರ ಪಾಲಿಸಬೇಕು. ಹೋಮ್ ಮೇಡ್ ಮಾಸ್ಕ್ ಉತ್ತಮ. ಮಾಸ್ಕ್ ಬದುಕಿನ ಭಾಗವಾಗಬೇಕು. ಮಾಸ್ಕ್ ಹಾಕೋದ್ರಿಂದ ನಮಗೂ ಒಳ್ಳೇದು ಬೇರೆಯವರಿಗೂ ಒಳ್ಳೇದು ಎಂದಿದ್ದಾರೆ.
undefined
ಲಾಕ್‌ಡೌನ್ ಸಂದರ್ಭ ಆಸ್ಪತ್ರೆಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದ ವೈದ್ಯರಿಗೆ ನಾಗಿಣಿ ಆಹಾರ ಒದಗಿಸುವ ಕೆಲಸವನ್ನೂ ಮಾಡಿದ್ದರು.
undefined
click me!