CJ Roy Tragedy: ಸಾವಿಗೆ ಶರಣಾದ ಸಿಜೆ ರಾಯ್ ಇನ್‌ಸ್ಟಾಗ್ರಾಂ ಪೋಸ್ಟ್ ಈಗ ಭಾರೀ ವೈರಲ್; ಏನಿದೆ ಅಂತದ್ದು ಅದ್ರಲ್ಲಿ..?

Published : Jan 31, 2026, 11:42 AM IST

ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯುವಜನತೆಯನ್ನು ಉದ್ದೇಶಿಸಿ ಒಂದು ಪೋಸ್ಟ್ ಮಾಡಿದ್ದರು- ಜೀವನ ಮತ್ತು ವ್ಯವಹಾರದಲ್ಲಿ ಗೆಲ್ಲಲು ಒಂದು ಅದ್ಭುತವಾದ 'ಸಕ್ಸಸ್ ಮಂತ್ರ'ವನ್ನು ಹಂಚಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಣವೇನು? 

PREV
17

ಬೇರೆಯವರನ್ನ ಕಾಪಿ ಮಾಡ್ಬೇಡಿ!

ಕೇರಳ ಮೂಲದ ಕರ್ನಾಟಲದ ಉದ್ಯಮಿ ಸಿಜೆ ರಾಯ್ (CJ Roy) ಅವರು ಆತ್ಮ*ಹತ್ಯೆ ಮಾಡಿಕೊಂಡಿರುವ ಸಂಗತಿ ಈಗ ಇಡೀ ಭಾರತವನ್ನು ಬೆಚ್ಚಿ ಬೀಳಿಸಿದೆ. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಹಲವು ಪೋಸ್ಟ್‌ಗಳು ಇದೀಗ ವೈರಲ್ ಅಗುತ್ತಿವೆ. ತಮ್ಮ ಸಂಸ್ಥೆಗೆ 'ಕಾನ್ಫಿಡೆಂಟ್' ಎಂದು ಹೆಸರು ಇಟ್ಟುಕೊಂಡಿದ್ದ, ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ಯುವಜನತೆಗೆ ಸಂದೇಶ ಕೊಡುತ್ತಿದ್ದ ವಿಐಪಿ ವ್ಯಕ್ತಿ ಸಿಜೆ ರಾಯ್ ಸಾವಿಗೆ ಶರಣಾಗಿದ್ದಾರೆ.

27

ಹಾಗಿದ್ದರೆ ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಏನಂತ ಸಂದೇಶ ಕೊಟ್ಟಿದ್ದರು ನೋಡಿ.. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಯಶಸ್ಸಿನ ಬೆನ್ನತ್ತಿ ಓಡುತ್ತಿದ್ದಾರೆ. ಆದರೆ ನಿಜವಾದ ಯಶಸ್ಸು ಸಿಗುವುದು ಯಾರಿಗೆ? ಯಾರು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ನಿರ್ಮಿಸಿಕೊಳ್ಳುತ್ತಾರೋ ಅವರಿಗೆ ಮಾತ್ರ ಜಯ ಲಭಿಸುತ್ತದೆ. ಸಿಜೆ ರಾಯ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯುವಜನತೆಯನ್ನು ಉದ್ದೇಶಿಸಿ ಒಂದು ಪೋಸ್ಟ್ ಮಾಡಿದ್ದರು- ಜೀವನ ಮತ್ತು ವ್ಯವಹಾರದಲ್ಲಿ ಗೆಲ್ಲಲು ಒಂದು ಅದ್ಭುತವಾದ 'ಸಕ್ಸಸ್ ಮಂತ್ರ'ವನ್ನು ಹಂಚಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

37

ನನ್ನ ನಿಯಮಗಳೇ ನನಗೆ ದಾರಿ:

"ನಾನು ಯಾವಾಗಲೂ ನನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳುತ್ತೇನೆ. ನನ್ನ ಜೀವನದ ದಾರಿಯನ್ನು ನಾನೇ ನಿರ್ಧರಿಸುತ್ತೇನೆ" ಎಂದು ಹೇಳುವ ಮೂಲಕ ಅವರು ತಮ್ಮ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅಂದರೆ, ಬೇರೆಯವರು ಹಾಕಿಕೊಟ್ಟ ಹಳೆಯ ಮಾದರಿಗಳಿಗಿಂತ, ಸ್ವಂತ ಆಲೋಚನೆ ಮತ್ತು ಶ್ರಮದ ಮೇಲೆ ನಂಬಿಕೆ ಇಡುವುದು ಮುಖ್ಯ ಎಂಬುದು ಇವರ ವಾದ. ಕೇವಲ ಸಿನಿಮಾ ರಂಗ ಮಾತ್ರವಲ್ಲದೆ, ವ್ಯವಹಾರದಲ್ಲೂ (Business) ಅಪ್ರತಿಮ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಯುವಕರಿಗೆ ಇದು ದೊಡ್ಡ ಪ್ರೇರಣೆಯಾಗಿದೆ.

47

ಸಿಜೆ ರಾಯ್ ಸೋಷಿಯಲ್ ಮೀಡಿಯಾ ಫೊಸ್ಟ್ ಹೀಗೆದೆ:-

ನಾನು ನನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳುತ್ತೇನೆ. ವ್ಯವಹಾರದಲ್ಲಿ ಯಶಸ್ವಿಯಾಗಲು ನಿಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಿ ಎಂಬುದು ಯುವಜನತೆಗೆ ನಾನು ನೀಡುವ ಸಂದೇಶ. ಗುಂಪನ್ನು ಅನುಸರಿಸಬೇಡಿ. (I write my own rules. My Message to youngsters is make your own rules to be Successful in Business. Do not follow the crowd)

57

ಗುಂಪನ್ನು ಅನುಸರಿಸಬೇಡಿ (Do not follow the crowd):

ಸಾಮಾನ್ಯವಾಗಿ ಎಲ್ಲರೂ ಮಾಡುವ ಕೆಲಸವನ್ನೇ ಮಾಡುವುದು ಸುಲಭ. ಆದರೆ, "ಗುಂಪನ್ನು ಅನುಸರಿಸಬೇಡಿ" ಎನ್ನುವ ಇವರ ಮಾತು ಇಂದು ಬಹಳ ಪ್ರಸ್ತುತವಾಗಿದೆ. ಇನ್ನೊಬ್ಬರು ಮಾಡಿದ್ದನ್ನೇ ಕಾಪಿ ಮಾಡುವುದರಿಂದ ನೀವು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗುತ್ತೀರಿ. ಆದರೆ ನಿಮ್ಮದೇ ಆದ ಹೊಸ ಆಲೋಚನೆಗಳನ್ನು ಜಾರಿಗೆ ತಂದಾಗ ಮಾತ್ರ ನೀವು ಒಬ್ಬ 'ಬ್ರಾಂಡ್' ಆಗಿ ಬೆಳೆಯಲು ಸಾಧ್ಯ. ಕುರಿಗಳಂತೆ ಗುಂಪಿನ ಹಿಂದೆ ಹೋಗುವ ಬದಲು, ಸಿಂಹದಂತೆ ನಿಮ್ಮದೇ ಹಾದಿಯನ್ನು ಕಂಡುಕೊಳ್ಳಿ ಎಂಬ ಕಿವಿಮಾತು ಈ ಸಂದೇಶದಲ್ಲಿದೆ.

67

ಯುವಜನತೆಗೆ ಖಡಕ್ ಸಂದೇಶ:

"ವ್ಯವಹಾರದಲ್ಲಿ ನೀವು ಉತ್ತುಂಗಕ್ಕೆ ಏರಬೇಕಾದರೆ, ಅಲ್ಲಿರುವ ಹಳೆಯ ನಿಯಮಗಳನ್ನು ಪಾಲಿಸುವ ಬದಲು, ನಿಮ್ಮದೇ ಆದ ಹೊಸ ಮತ್ತು ಪರಿಣಾಮಕಾರಿ ನಿಯಮಗಳನ್ನು ರೂಪಿಸಿಕೊಳ್ಳಿ" ಎಂಬುದು ಇವರು ಯುವಜನತೆಗೆ ನೀಡಿದ ಪ್ರಮುಖ ಸಂದೇಶ. ನಿಮ್ಮಲ್ಲಿರುವ ವಿಶಿಷ್ಟತೆ ಅಥವಾ 'ಯುನಿಕ್ ಐಡಿಯಾ'ಗಳೇ ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡುತ್ತವೆ.

77

ಒಟ್ಟಿನಲ್ಲಿ, ಯಶಸ್ಸು ಎನ್ನುವುದು ಬೇರೆಯವರ ಹೆಜ್ಜೆಗುರುತನ್ನು ಅನುಸರಿಸುವುದರಲ್ಲಿ ಇಲ್ಲ, ಬದಲಾಗಿ ನಮ್ಮದೇ ಆದ ಹೊಸ ಹೆಜ್ಜೆಗುರುತನ್ನು ಮೂಡಿಸುವುದರಲ್ಲಿ ಇದೆ. ಈ ಸ್ಪೂರ್ತಿದಾಯಕ ಮಾತುಗಳು ಈಗ ಸಾವಿರಾರು ಯುವ ಮನಸ್ಸುಗಳಲ್ಲಿ ಹೊಸ ಚೈತನ್ಯ ತುಂಬಿವೆ. ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ, ತನ್ನತನವನ್ನು ಬಿಟ್ಟುಕೊಡದೆ ಸಾಗುವವನೇ ನಿಜವಾದ ವಿಜೇತ ಎಂಬ ಸತ್ಯ ಈ ಮಾತಿನಿಂದ ಮತ್ತೊಮ್ಮೆ ಸಾಬೀತಾಗಿದೆ. ಆದರೆ, ಈ ಮಾತು ಹೇಳಿದ್ದ ವ್ಯಕ್ತಿಯೇ ಈಗ ಸಮಸ್ಯೆಯನ್ನು ಎದುರಿಸಲಾಗದೇ ಸಾವಿಗೆ ಶರಣಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories