ಬಿಎಸ್‌ವೈ ಮನೆಯಲ್ಲಿ ಆಯುಧ ಪೂಜಾ ಸಂಭ್ರಮ

Suvarna News   | Asianet News
Published : Oct 14, 2021, 03:32 PM ISTUpdated : Oct 14, 2021, 03:43 PM IST

 ಬಿಜೆಪಿ ಮುಖಂಡ ಹಾಗು  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಆಯುಧ ಪೂಜೆ ಆಚರಿಸಿದರು. ಈ ವೇಳೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆದವು  

PREV
19
ಬಿಎಸ್‌ವೈ ಮನೆಯಲ್ಲಿ ಆಯುಧ ಪೂಜಾ ಸಂಭ್ರಮ
BS Yediyurappa

ಇಂದು ವಿಜಯದಶಮಿಯ ಆಯುಧಾ ಪೂಜಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಎಂ ಅಧಿಕೃತ ನಿವಾಸದಲ್ಲಿ ಅದ್ದೂರಿಯಾಗಿ ಆಯುಧ ಪೂಜೆಯನ್ನು ಮಾಡಲಾಯಿತು. 
 

29
BS Yediyurappa

ರಾಜ್ಯದ ಮಾಜಿ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸದಲ್ಲಿ ವಿವಿಧ ಕಾರುಗಳಿಗೆ ಪೂಜೆ ಸಲ್ಲಿಸಲಾಯಿತು. ಬಿಎಸ್‌ವೈ ಹಾಗು ಕುಟುಂಬದ ಎಲ್ಲಾ ಕಾರುಗಳ ಪೂಜಾ ಕಾರ್ಯ ನೆರವೇರಿತು

39
BS Yediyurappa


ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದ ಬಳಿಕ ಪೊಲೀಸ್ ಸಿಬ್ಬಂದಿಗೆ  ಬಿ ಎಸ್‌ ವೈ ಹಾಗು ಪುತ್ರಿ ಸಿಹಿ ಹಂಚಿಕೆ ಮಾಡಿದರು.

49
BS Yediyurappa

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಬಿ ಎಸ್ ವೈ ಪುತ್ರಿ ಅರುಣಾ ದೇವಿ ಅವರು ಪಾಲ್ಗೊಂಡು ಪೂಜೆ ನೆರವೇರಿಸಿದರು. ವಿವಿಧ ಅಯುಧಗಳಿಗೆ ಪೂಜೆ ಸಲ್ಲಿಸಿದರು. 

59
BS Yediyurappa

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಗಳೂರಿ ನಿವಾಸದಲ್ಲಿ ವಿಜಯ ದಶಮಿ ಆಚರಣೆಯ ಅಯುಧ ಪೂಜೆಯಲ್ಲಿ ಕುಟುಂಬದ ಕೆಲ ಸದಸ್ಯರು ಪಾಲ್ಗೊಂಡಿದ್ದರು. ಹಾಗು ಬಿ ಎಸ್‌ವೈ ಆಪ್ತರು ಇದ್ದರು.

69
BS Yediyurappa

ವಿಜಯ ದಶಮಿಯ ಆಯುಧ ಪೂಜೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪೂಜೆಯ ಬಳಿಕ ಮಂಗಳಾರತಿಯನ್ನು ನೆರವೇರಿಸಿದರು. ವಿವಿಧ ಗನ್‌ಗಳು, ರಕ್ಷಣಾ ಉಪ ಕರಣಗಳನ್ನು ಪೂಜಿಸಲಾಯಿತು. 

79
BS Yediyurappa

ಮಾಜಿ ಸಿಎಂ ಯಡಿಯೂರಪ್ಪ, ರಕ್ಷಣಾ ಸಿಬ್ಬಂದಿ ಹಾಗೂ ಅವರ ಪುತ್ರಿ ಅರುಣಾ ದೇವಿ ಹಾಗು ಅನೇಕರು ಆಯುಧ ಪೂಜಾ ಕಾರ್ಯದ ಬಳಿಕ ಮಂತ್ರಾಕ್ಷತೆ ಹಾಕಿ ಪ್ರಾರ್ಥಿಸಿದರು. 

89
BS Yediyurappa

ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ವಿವಿಧ ಆಯುಧಗಳು ಹಾಗು ವಾಹನಗಳಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪುಜಾ ಕಾರ್ಯ ನೆರವೇರಿಸಿದರು.

99
BS Yediyurappa


ನಾಡಿನ ಸಮಸ್ತ ಜನತೆಗೆ ಮಹಾನವಮಿಯ ಭಕ್ತಿಪೂರ್ವಕ ಶುಭಾಶಯಗಳು. ನವರಾತ್ರಿಯ ಪರ್ವಕಾಲದ ಈ ಸಂದರ್ಭದಲ್ಲಿ, ಜಗನ್ಮಾತೆಯ ಆರಾಧನೆಯ ಜೊತೆಗೆ, ನಮ್ಮನ್ನು ಸಲಹುವ, ನೆರವು ನೀಡುವ, ರಕ್ಷಿಸುವ ವಸ್ತುವಿಶೇಷಗಳಲ್ಲಿ ದೇವರನ್ನು ಪೂಜಿಸುವ 'ಆಯುಧಪೂಜೆ'ಯ ಈ ದಿನವು ಎಲ್ಲರ ಬಾಳಿನಲ್ಲಿ ಮಂಗಳವನ್ನು ತರಲಿ ಎಂದು ಶುಭ ಕೋರಿದರು. 

click me!

Recommended Stories