ವೇಗವಾಗಿ ಚಲಿಸುತ್ತಿದ್ದ ಬಸ್ ಮಧ್ಯೆ ಸಿಲುಕಿದ ಬೈಕ್ ಸವಾರರನ್ನು ರಕ್ಷಿಸಲು ಬಸ್ ಪಲ್ಟಿ ಮಾಡಿದ ಪ್ರಯಾಣಿಕರು!

First Published | Jul 4, 2023, 3:47 PM IST

ಯಾದಗಿರಿ (ಜು.4): ವೇಗವಾಗಿ ಸಲಿಸುತ್ತಿದ್ದ ಬಸ್ ನ ಮಧ್ಯೆ ಸಿಲುಕಿದ ಬೈಕ್ ಸವಾರರು, ಬೈಕ್ ಸವಾರರನ್ನು ರಕ್ಷಿಸಲು ಬಸ್ ಪಲ್ಟಿ ಮಾಡಿದ ಪ್ರಯಾಣಿಕರು. ಈ ಮೂಲಕ ಗಾಯಾಳುಗಳನ್ನು ರಕ್ಷಿಸಿದ ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯಲ್ಲಿ.
 

ಬಸ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಬಸ್ ನ ಮಧ್ಯೆ ಸಿಲುಕಿದರು. ಪ್ರಯಾಣಿಕರನ್ನ ಕೆಳಗಿಳಿಸಿ ಬಸ್ ಪಲ್ಟಿ ಮಾಡಿ ಬೈಕ್ ಸವಾರರನ್ನ ಸ್ಥಳೀಯರು ಹೊರತೆಗೆದರು.

ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಬಾಣತಿಹಾಳ್ ಬಳಿ ಘಟನೆ ನಡೆದಿದ್ದು, ಗಾಯಾಳು‌ ಇಬ್ಬರು ಬೈಕ್ ಸವಾರರನ್ನ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Tap to resize

ಬಸ್ ಶಹಾಪುರದಿಂದ ಸೊಲ್ಲಾಪುರಕ್ಕೆ ಹೋಗುತ್ತಿತ್ತು. ಈ ವೇಳೆ ಬಾಣತಿಹಾಳ್ ಗ್ರಾಮದ ರಸ್ತೆಯಿಂದ ಮುಖ್ಯ ರಸ್ತೆಗೆ ಬೈಕ್ ಸವಾರರು ಬರುತ್ತಿದ್ದರು.

ಈ ವೇಳೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಬಸ್ ಮಧ್ಯೆ ಬೈಕ್ ಸವಾರರು ಸಿಲುಕಿದ್ದಾರೆ. ರಕ್ಷಣ ಎಚ್ಚೆತ್ತ ಸ್ಥಳೀಯರು ಕ್ರೇನ್ ತರಿಸಿ ಬಸ್ ಪಲ್ಟಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

ಕಲ್ಯಾಣ ಕರ್ನಾಟಕ  ಸಾರಿಗೆ ಬಸ್ ಆಗಿದ್ದು, ಗೋಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

Latest Videos

click me!