ಇದ್ದರೆ ಸಿದ್ದರಾಮಯ್ಯನಂಥ ರಾಜನಿರಬೇಕು..., ಸಿಎಂ ಆಗಿ ಮುಂದುವರಿಯುವಂತೆ ಆಶೀರ್ವಾದಿಸಿದ ಬೋವಿ ಶ್ರೀಗಳು!

First Published | Jan 5, 2025, 6:39 PM IST

 'ಇದ್ದರೆ ಸಿದ್ದರಾಮಯ್ಯನಂತೆ ರಾಜನಿರಬೇಕು, ನಿರಂಜನಾನಂದಪುರಿ ಸ್ವಾಮೀಜಿಯವರಂಥ ರಾಜಗುರು ಇರಬೇಕು' ಎಂದು ಬೋವಿ ಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಡಿಹೊಗಳಿದರು.
 

ಹರಿಹರ ಜಿಲ್ಲಾ ಕುರುಬ ಸಮಾಜ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯುತ್ಸವವನ್ನು ಉದ್ಘಾಟಿಸಿದರು.
 

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಕುರುಬ ಸಮುದಾಯ ಮತ್ತು ಅಹಿಂದ ಸಮುದಾಯದಿಂದ ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಅನ್ನ ನೀಡಿದಾತನಿಗೆ ಅಧಿಕಾರ ಯಾವಾಗಲೂ ಇರಬೇಕು, ಆಗ ಮಾತ್ರ ನಾವೆಲ್ಲ ನೆಮ್ಮದಿಯಿಂದ ಇರಲು ಸಾಧ್ಯ

Tap to resize

 ಅನ್ನದಾತೋ ನನ್ನು ಬದಲಿಸಿ ನಾವು ಅಧಿಕಾರಭವೋ ಎಂದು ಹೇಳಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮುಂದೆಯೂ ಅಧಿಕಾರದಲ್ಲಿ ಮುಂದುವರಿಯಲಿ ಎಂದರು.

ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದಿರುವ ಹೊತ್ತಲ್ಲಿ ಬೋವಿ ಗುರುಪೀಠದ ಶ್ರೀಗಳು ಸಿಎಂ ಸಿದ್ದರಾಮಯ್ಯನವರು ಮುಂದಿನ ಅವಧಿವರೆಗೆ  ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದ ಆಶೀರ್ವಾದಿಸಿರುವುದು ವಿಶೇಷ;

Latest Videos

click me!