ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ

First Published Aug 12, 2020, 7:52 AM IST

ಆನೇಕಲ್‌(ಆ.12):  ರೌಡಿಗಳು ಲಾಂಗು, ಮಚ್ಚುಗಳಿಗೆ ಕೆಲಸ ಕೊಟ್ಟರೆ, ನಾವು ಅನಿವಾರ್ಯವಾಗಿ ಪಿಸ್ತೂಲ್‌ಗೆ ಕೆಲಸ ಕೊಡಬೇಕಾಗುತ್ತದೆ ಎಂದು ರೌಡಿಶೀಟರ್‌ಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್‌ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ನಡೆದ ರೌಡಿಗಳ ಪೆರೇಡ್‌ನಲ್ಲಿ ಮಾತನಾಡಿದ ಅವರು, ಇಲ್ಲಸಲ್ಲದ ವ್ಯವಹಾರಗಳಿಗೆ ಕೈ ಹಾಕುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದು, ಏಕಪಕ್ಷೀಯವಾಗಿ ವರ್ತಿಸುವುದೂ ಸೇರಿದಂತೆ ಸಣ್ಣ ಪ್ರಮಾಣದ ಪ್ರಮಾದ ಕಂಡು ಬಂದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ: ಚನ್ನಣ್ಣನವರ್‌
undefined
ಪ್ರಭಾವಿಗಳು, ರಾಜಕಾರಣಿಗಳು ನಮ್ಮ ಬೆನ್ನಿಗಿದ್ದಾರೆ. ಪೋಲಿಸರು ಏನು ಮಾಡುವುದಕ್ಕೆ ಆಗಲ್ಲ ಎಂಬ ಭ್ರಮೆಯಲ್ಲಿದ್ದರೆ ಅದರಿಂದ ಆಚೆ ಬನ್ನಿ. ಮುಲಾಜಿಲ್ಲದೇ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ ಎಸ್ಪಿ
undefined
ಬೇರೆಯವರ ಹಣದಲ್ಲಿ ತುಂಡು-ಗುಂಡು ಸೇವಿಸಿ, ಗಾಂಜಾ ಹೊಡೆದು ಅಕ್ರಮ ನಡೆಸುವ ನಿಮಗೇ ಕಾನೂನು ಮೀರುವಷ್ಟು ಕೊಬ್ಬಿರಬೇಕಾದರೆ, ಸರ್ಕಾರದಿಂದ ಪಿಸ್ತೂಲ್‌ ಪಡೆದು ಕಾನೂನುಗಳನ್ನು ರಕ್ಷಣೆಗಾಗಿ ನಿಯುಕ್ತಿಯಾಗಿರುವ ನಮಗೆ ಎಷ್ಟಿರ ಬೇಡ. ಯಾರಾದರೂ ಬಾಲ ಬಿಚ್ಚಿದರೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಸಾರ್ವಜನಿಕರಿಗೆ ಧಮಕಿ ಹಾಕುವುದು ಸೇರಿದಂತೆ ಯಾವುದೇ ದೂರು ಕೇಳಿಬಂದರೂ ಗೂಂಡಾ ಕಾಯ್ದೆಯಡಿ ಬಂಧಿಸಿ, ಗಡಿಪಾರು ಮಾಡಲಾಗುವುದು ಹುಷಾರ್‌ ಎಂದರು.
undefined
ಡಿವೈಎಸ್ಪಿ ನಂಜುಂಡೇಗೌಡ, ವೃತ್ತ ನಿರೀಕ್ಷಕರಾದ ಕೃಷ್ಣ, ಕೆ.ವಿಶ್ವನಾಥ್‌, ಬಿ.ಕೆ. ಶೇಖರ್‌, ನಾಗರಾಜ್‌, ಉಪನಿರೀಕ್ಷಕರಾದ ನವೀನ್‌, ಗೋವಿಂದ್‌, ಹರೀಶ್‌ ರೆಡ್ಡಿ ಇದ್ದರು.
undefined
click me!