ಕೈಗೆ ಕೋಳ, ಕೂಲಿಂಗ್ ಗ್ಲಾಸ್ ಸಮೇತ ಬಳ್ಳಾರಿ ಜೈಲಿಗೆ ಬಂದ ದರ್ಶನ್‌ಗೆ ಮತ್ತೊಂದು ಸಂಕಷ್ಟ!

First Published | Aug 29, 2024, 12:05 PM IST

ನಟನಾಗಿ ತೆರಮೇಲೆ ಅಬ್ಬರಿಸಿದ ನಟ ದರ್ಶನ್‌ನ್ನು ಇದೀಗ ಪೊಲೀಸರು ಕೈಗೆ ಕೋಳ ತೊಡಿಸಿ ಬಳ್ಳಾರಿ ಜೈಲಿಗೆ ತರೆತಂದಿದ್ದಾರೆ. ಆದರೆ ಜೈಲಿಗೆ ಆಗಮಿಸುವ ವೇಳೆ ದರ್ಶನ್ ಬ್ರಾಂಡೆಟ್ ಟಿ ಶರ್ಟ್, ಜೊತೆಗೆ ಕೂಲಿಂಗ್ ಸಮೇತ ಆಗಮಿಸಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
 

ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ರಾಜಾತಿಥ್ಯ ಹಾಗೂ ಅಶಿಸ್ತಿನಿಂದ ಇದೀಗ ಡಿಗ್ಯಾಂಗ್ ದಿಕ್ಕಾಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇಂದು(ಆ.29) ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್‌ನನ್ನು ಸ್ಥಳಾಂತರ ಮಾಡಲಾಗಿದೆ. ನಟ ದರ್ಶನ್ ಕೈಗೆ ಕೋಳ ತೊಡಿಸಿ ಪೊಲೀಸರು ಜೈಲಿಗೆ ಕರೆ ತಂದಿದ್ದಾರೆ. 

Tap to resize

ಕೋಳ ಕಾಣದಂತೆ ದರ್ಶನ್ ಕೈಗೆ ಬಟ್ಟೆ ಸುತ್ತಿಕೊಂಡು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಬ್ರಾಂಡೆಟ್ ಟಿಶರ್ಟ್ ಹಾಗೂ ಅದರ ಮೇಲೆ ಕೂಲಿಂಗ್ ಹಾಕಿ ದರ್ಶನ್ ಜೈಲಿಗೆ ಬಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಬಳಕೆ, ಸಿಗರೇಟು ಸೇರಿದಂತೆ ರಾಜಾತಿಥ್ಯ ವಿಚಾರಕ್ಕೆ ಇದೀಗ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.ಆದರೆ ಬಳ್ಳಾರಿ ಆಗಮಿಸುವಾಗಲೇ ನಿಯಮ ಉಲ್ಲಂಘನೆಯಾಗಿದೆ. 

ದರ್ಶನ್ ಬಳ್ಳಾರಿ ಜೈಲು ಪ್ರವೇಶದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಮಾಧ್ಯಮಗಳಲ್ಲಿ ದರ್ಶನ್ ಕೂಲಿಂಗ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಗ್ರ್ಯಾಂಡ್ ಎಂಟ್ರಿಗೆ ನೋಟಿಸ್ ನೀಡಲು  ಡಿಐಜಿ ಟಿ‌.ಪಿ ಶೇಷಾ ಮುಂದಾಗಿದ್ದಾರೆ.

ಜೈಲಿನಲ್ಲಿ ಕೂಲಿಂಗ್ ಗ್ಲಾಸ್ ಸೇರಿದಂತೆ ಇತರ ಕೆಲ ವಸ್ತುಗಳಿಗೆ ನಿರ್ಬಂಧವಿದೆ. ಆದರೆ ದರ್ಶನ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದಾರೆ. ಹೀಗಾಗಿ ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಹಾಕಲು ಅವಕಾಶ ನೀಡಿದ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಶೇಷಾ ಮುಂದಾಗಿದ್ದಾರೆ.

ಬೆಂಗಾವಲು ಪಡೆ ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಬೆಂಗಾವಲು ಪಡೆಗೆ ನೋಟಿಸ್ ನೀಡಲು ಶೇಷಾ ತಯಾರಿಗಿದ್ದಾರೆ. ದರ್ಶನ್ ಆಗಮಿಸುತ್ತಿದ್ದಂತೆ ಇದೀಗ ಬಳ್ಳಾರಿ ಜೈಲಿನಲ್ಲಿ ಸಂಕಷ್ಟಗಳು ಹೆಚ್ಚಾಗಿದೆ.

ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಬಂದ ದರ್ಶನ್‌ಗೆ ಖೈದಿ ಸಂಖ್ಯೆ 511 ನೀಡಲಾಗಿದೆ. ಬಳ್ಳಾರಿಯ ಹೈಸೆಕ್ಯೂರಿಟಿ ಜೈಲಿಗೆ ನಟ ದರ್ಶನ್‌ನ್ನು ಸ್ಥಳಾಂತರಿಸಲಾಗಿದೆ. 

ಬಳ್ಳಾರಿ ಜೈಲಿನಲ್ಲಿ ಸಹಿ ಹಾಕಿದ ದರ್ಶನ್ ಒಳ ಪ್ರವೇಶಿಸಿದ್ದಾರೆ. ಇದೇ ವೇಳೆ ದರ್ಶನ್ ತಂದಿರುವ 2 ಬ್ಯಾಗ್‌ಗಳನ್ನು ಜೈಲು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. 

Latest Videos

click me!