ಹತ್ತು ಮುಳುಗಿದ ಹೊತ್ತು; ದಶಕದ ಪ್ರಮುಖ ನೆನಪುಗಳಿವು!

First Published Jan 1, 2020, 1:10 PM IST

2010- 2019 ರ ದಶಕಕ್ಕೆ ವಿದಾಯ ಹೇಳಿ 2020 ಎಂಬ ನೂತನ ವರ್ಷಕ್ಕೆ ಪ್ರವೇಶ, 21 ನೇ ಶತಮಾನ ಟೀನೇಜ್ ಮುಗಿಸಿ ಪ್ರೌಢಾವಸ್ಥೆಗೆ ಹೊರಳುತ್ತಿರುವ ಸಮಯವಿದು. ಕಳೆದ ಹತ್ತು ವರ್ಷಗಳಲ್ಲಿ ನಡೆದ ಪ್ರಮುಖ ಘಟನೆಗಳಿವು! 

ನರ್ಮದಾ ನದಿಯ ದಂಡೆಯ ಮೇಲೆ ನಿರ್ಮಿಸಲಾದ ‘ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಕೇವಡಿಯದಲ್ಲಿ 2018 ರ ಅ. 31 ರಂದು ಲೋಕಾರ್ಪಣೆ ಮಾಡಿದರು. 182 ಮೀ. ಎತ್ತರದ ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ದಾಖಲೆ ಬರೆಯಿತು.
undefined
ಅಯೋಧ್ಯೆಯಲ್ಲಿ ದಶಕಗಳಿಂದ ವಿವಾದಕ್ಕೀಡಾಗಿದ್ದ 2.77 ಎಕರೆ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ 2019 ರ ನ.9 ರಂದು ತೀರ್ಪು ನೀಡಿತು. ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತು.
undefined
ಅಪರೂಪದ ಖಗೋಳ ವಿದ್ಯಮಾನ ಬ್ಲೂ ಬ್ಲಡ್ ಮೂನ್‌ಗೆ 2018 ರ ಜ. 31 ರಂದು ವಿಶ್ವ ಸಾಕ್ಷಿಯಾಯಿತು.
undefined
2016 ರ ನವೆಂಬರ್ 8 ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಟೀವಿಯಲ್ಲಿ ಭಾಷಣ ಮಾಡಿ 500, 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದರು. ಇದು ದೇಶಾದ್ಯಂತ ತಲ್ಲಣಕ್ಕೆ ಕಾರಣವಾಯಿತು.
undefined
1990 ರಲ್ಲಿ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ ಸರಬ್ಜಿತ್ ಸಿಂಗ್ ಮೇಲೆ ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ಮಾಡಿದರು. ಲಾಹೋರ್ ಆಸ್ಪತ್ರೆಯಲ್ಲಿ ಆರು ದಿನಗಳ ಚಿಕಿತ್ಸೆ ಪಡೆದ ಅವರು 2013 ರ ಮೇ 2 ರಂದು ಕೊನೆಯುಸಿರೆಳೆದರು.
undefined
ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆ ಮೇಲೆ ಪಾಕಿಸ್ತಾನದ ಉಗ್ರರು 2016 ರ ಸೆ.18 ರಂದು ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಸೆ. 29 ರಂದು ಭಾರತೀಯ ಯೋಧರು ಪಾಕಿಸ್ತಾನದ ಉಗ್ರರ ಸದೆಬಡಿದರು. ಈ ರೋಚಕ ಕಾರ್ಯಾಚರಣೆ ಬಗ್ಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಯಿತು.
undefined
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ 2019 ರ ಫೆ. 26 ರಂದು ಭಾರತ ವಾಯು ದಾಳಿ ನಡೆಸಿ ಉಗ್ರ ಶಿಬಿರಗಳನ್ನು ನಾಶಪಡಿಸಿತು. ಕೆರಳಿದ ಪಾಕಿಸ್ತಾನ ಮರುದಿನ ಭಾರತದ ಮೇಲೆ ದಂಡೆತ್ತಿ ಬಂತು. ಅದರ ವಿಮಾನವನ್ನು ಹೊಡೆದುರುಳಿಸಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಆ ದೇಶದ ಕೈಗೆ ಸೆರೆ ಸಿಕ್ಕಿ ಹಿಂಸೆಗೆ ಒಳಗಾದರು. ಬಳಿಕ ಬಿಡುಗಡೆಯಾದರು.
undefined
ದೇಶದ ಭದ್ರತಾ ಪಡೆಗಳ ಮೇಲಿನ ಈವರೆಗಿನ ಅತಿ ದೊಡ್ಡದೆನ್ನಲಾದ ಭಯೋತ್ಪಾದಕ ದಾಳಿ ಕಾಶ್ಮೀರದ ಪುಲ್ವಾಮಾದಲ್ಲಿ ೨೦೧೯ರ ಫೆ.೧೪ರಂದು ಸಂಭವಿಸಿತು. ಮಂಡ್ಯ ಜಿಲ್ಲೆ ಯೋಧ ಗುರು ಸೇರಿ ಸಿಆರ್‌ಪಿಎಫ್‌ನ ೪೦ ಸೈನಿಕರು ಹುತಾತ್ಮರಾದರು. ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದ ವಾಹನಕ್ಕೆ ಸ್ಫೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಿ ನಡೆಸಿದ ದಾಳಿ ಇದಾಗಿತ್ತು
undefined
ವಿಶ್ವದ ಅತಿದೊಡ್ಡ ಸೌರೋದ್ಯಾನವನ್ನು ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ 2018 ರ ಮಾ.1 ರಂದು ಲೋಕಾರ್ಪಣೆ ಮಾಡಲಾಯಿತು. 13000 ಎಕರೆ ಪ್ರದೇಶದಲ್ಲಿ ಸೌರ ಪಾರ್ಕ್ ನಿರ್ಮಿಸಲಾಗಿದೆ. ಇದರ ಉತ್ಪಾದನಾ ಸಾಮರ್ಥ್ಯ 2000 ಮೆಗಾವ್ಯಾಟ್ ಆಗಿದ್ದು, ಈ ಯೋಜನೆಗೆ 15 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ.
undefined
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಯಾವ ವಯಸ್ಸಿನ ಮಹಿಳೆಯರು ಬೇಕಾದರೂ ಪ್ರವೇಶಿಸಬಹುದು ಎಂದು 2018 ರ ಸೆ. 28 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಈ ನಡುವೆ, 2019 ರ ಜ.2 ರಂದು ಶಬರಿಮಲೆಗೆ ಇಬ್ಬರು ಮಹಿಳೆಯರು ಪ್ರವೇಶಿಸಿ ಇತಿಹಾಸ ಸೃಷ್ಟಿಸಿದರು. ವ್ಯಾಪಕ ಪ್ರತಿಭಟನೆ ನಡೆದವು. ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ವಿಚಾರಣೆ ಬಾಕಿ ಇದೆ.
undefined
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಒಲಿಂಪಿಕ್ ಕ್ರೀಡಾಕೂಟದಲ್ಲಿ 2016 ರ ಆ. 19 ರಂದು ನಡೆದ ಫೈನಲ್‌ನಲ್ಲಿ ಸೋತರೂ ಬೆಳ್ಳಿ ಪದಕ ಗೆದ್ದು ಭಾರತೀಯ ಬ್ಯಾಡ್ಮಿಂಟನ್‌ನಲ್ಲಿ ಇತಿಹಾಸ ನಿರ್ಮಿಸಿದರು. ಒಲಿಂಪಿಕ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.
undefined
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, 45 ನೇ ಅಧ್ಯಕ್ಷರಾಗಿ 2017 ರ ಜ. 20 ರಂದು ಅಧಿಕಾರ ವಹಿಸಿಕೊಂಡರು. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ, ಅಮೆರಿಕನ್ನರಿಗಾಗಿ ಉದ್ಯೋಗ ಸೃಷ್ಟಿಗೆ ಕಠಿಣ ಕ್ರಮ, ವಿವಾದಿತ ಹೇಳಿಕೆಗಳೊಂದಿಗೆ ಟ್ರಂಪ್ ಗಮನ ಸೆಳೆದರು
undefined
ಜಮ್ಮು-ಕಾಶ್ಮೀರಕ್ಕೆ 70 ವರ್ಷಗಳಿಂದ ಲಭ್ಯವಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ 2019 ರ ಆ.5 ರಂದು ನಿಷ್ಕ್ರಿಯಗೊಳಿಸಿತು. ಆ ರಾಜ್ಯವನ್ನು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ಮಾಡಿತು. ಈ ಸಂಬಂಧ ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಿತು.
undefined
‘ತಲಾಖ್’ ಎಂದು ಮೂರು ಬಾರಿ ಹೇಳಿ ವಿಚ್ಛೇದನ ನೀಡುವ ಮುಸಲ್ಮಾನರ ಪದ್ಧತಿ ‘ತಲಾಖ್ ಎ ಬಿದ್ದತ್’ ಕ್ರಿಮಿನಲ್ ಅಪರಾಧ ಎಂದು ಸಾರುವ ಐತಿಹಾಸಿಕ ಮಸೂದೆಯನ್ನು 2019 ರ ಜು. 30 ರಂದು ಸಂಸತ್ ಅಂಗೀಕರಿಸಿತು. ಮುಸ್ಲಿಮರು ದಶಕಗಳ ಕಾಲ ಅನುಸರಿಸಿಕೊಂಡು ಬಂದಿದ್ದ ಪದ್ಧತಿಗೆ ತೆರೆ ಬಿದ್ದಿತು.
undefined
ಮಂಗಳೂರು ಸಮೀಪದ ನೇತ್ರಾವತಿ ಸೇತುವೆ ಬಳಿ 2019 ರ ಜು. 29 ರ ರಾತ್ರಿಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಖ್ಯಾತ ಉದ್ಯಮಿ, ಕೆಫೆ ಕಾಫಿ ಡೇ ಕಂಪನಿ ಮಾಲೀಕ ವಿ.ಜಿ ಸಿದ್ಧಾರ್ಥ ಹೆಗ್ಡೆ (60) 2019 ರ ಜು. 31 ರಂದು ಶವವಾಗಿ ಪತ್ತೆಯಾದರು.
undefined
ಹಾಸನ ಜಿಲ್ಲೆ ಶ್ರವಣಬೆಳಗೊಳದ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಫೆಬ್ರವರಿಯಲ್ಲಿ ನೆರವೇರಿತು. ಫೆ.17 ರಿಂದ 25 ರವರೆಗೆ ಲಕ್ಷಾಂತರ ಮಂದಿ ಮಜ್ಜನವನ್ನು ವೀಕ್ಷಿಸಿದರು
undefined
click me!