50 ಸಾವಿರ ಪಿಯೋನ್ ಕೆಲಸಕ್ಕೆ ಬಿಟೆಕ್, ಎಂಬಿಎ ಪದವೀದರು ಸೇರಿ 27 ಲಕ್ಷ ಮಂದಿ ಅರ್ಜಿ

Published : Apr 30, 2025, 07:41 PM ISTUpdated : Apr 30, 2025, 07:45 PM IST

ಸರ್ಕಾರಿ ಪಿಯೋನ್ ಕೆಲಸ. ಹುದ್ದೆ 50 ಸಾವಿರ. ಆದರೆ ಅರ್ಜಿ ಹಾಕಿದವರ ಸಂಖ್ಯೆ ಬರೋಬ್ಬರಿ 27 ಲಕ್ಷ. ಇಷ್ಟೇ ಅಲ್ಲ ಎಂಬಿಎ, ಬಿಟೆಕ್, ಸೇರಿದಂತೆ ಡಬಲ್ ಡಿಗ್ರಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.  

PREV
17
50 ಸಾವಿರ ಪಿಯೋನ್ ಕೆಲಸಕ್ಕೆ ಬಿಟೆಕ್, ಎಂಬಿಎ ಪದವೀದರು ಸೇರಿ 27 ಲಕ್ಷ ಮಂದಿ ಅರ್ಜಿ

ಸರ್ಕಾರಿ ಉದ್ಯೋಗಕ್ಕಿರುವ ಬೇಡಿಕೆ ಇನ್ಯಾವುದಕ್ಕೂ ಇಲ್ಲ. ಜೊತೆಗೆ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅತೀ ದೊಡ್ಡ ಸವಾಲು. ಇದೀಗ 50 ಸಾವಿರ ಪಿಯೋನ್ ಕೆಲಸಕ್ಕೆ ಬರೋಬ್ಬರಿ 27 ಲಕ್ಷ ಮಂದಿ ಅರ್ಜಿ ಹಾಕಿದ ಘಟನೆ ನಡೆದಿದೆ. ವಿಶೇಷ ಅಂದರೆ ಎಂಬಿಎಂ, ಬಿಟೆಕ್ ಸೇರಿದಂತೆ ಹಲವು ಪದವಿ ಪಡೆದವರು ಈ ಪಿಯೋನ್ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ.

27

ಇತ್ತೀಚೆಗೆ ರಾಜಸ್ಥಾನ ಸರ್ಕಾರದ ಡಿ ದರ್ಜೆಯ ಗುಮಾಸ್ತೆ ಹುದ್ದೆಗೆ ನೇಮಕಾತಿ ಪ್ರತ್ರಿಯೆ ಆರಂಭಿಸಿದೆ. 53,749 ಪಿಯೋನ್ ಹುದ್ದೆಗಳು ಖಾಲಿಯಾಗಿತ್ತು. ಇದನ್ನು ಭರ್ತಿ ಮಾಡಲು ಸರ್ಕಾರ ನೇಮಕಾತಿ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿತ್ತು. ಜೊತೆಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಆರಂಭಿಸಿತ್ತು. ಆದರೆ ಅರ್ಜಿ ಸಲ್ಲಿಕೆ ಅಂತ್ಯಗೊಂಡಾಗ ಬರೋಬ್ಬರಿ 27.76 ಲಕ್ಷ ಅರ್ಜಿಗಳು ಬಂದಿತ್ತು.
 

37

ಪಿಹೆಚ್‌ಡಿ, ಎಂಇಡಿ, ಎಂಬಿಎ, ಎಂಎಸ್‌ಸಿ ಸೇರಿದಂತೆ ಸ್ನಾತೋಕತ್ತರ ಪದವಿ ಪಡೆದ ಲಕ್ಷ ಲಕ್ಷ ಮಂದಿ ಪಿಯೋನ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದು ರಾಜಸ್ಥಾನದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ಹಲವರು ಹೇಳಿದ್ದಾರೆ. ಜೈಪುರದ ಹಲವು ಕೋಟಿಂಗ್ ಸೆಂಟರ್‌ಗಳಲ್ಲಿ ಪಿಯೋನ್ ಕೆಲಸ ಗಿಟ್ಟಿಸಿಕೊಳ್ಳಲು ಕೋಚಿಂಗ್ ಕೂಡ ನೀಡಲಾಗುತ್ತಿದೆ.

47

ವಿಶೇಷ ಅಂದರೆ ಕೆಲ ಅಭ್ಯರ್ಥಿಗಳ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಉದ್ಯೋಗ ಬೇಕು ಎಂದು ಪಿಯೋನ್ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ. ಖಾಸಗಿ ಉದ್ಯೋಗ ಟಾರ್ಗೆಟ್ ಸೇರಿದಂತೆ ಇತರ ತಲೆನೋವಿಗಿಂತ ನೆಮ್ಮದಿಯ ಪಿಯೋನ್ ಕೆಲಸ ಸಾಕು ಎಂದು ಅರ್ಜಿ ಹಾಕಿದ ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಇದು ರಾಜಸ್ಥಾನ ನೇಮಕಾತಿ ವಿಭಾಗಕ್ಕೆ ತೆಲನೋವಾಗಿ ಪರಿಣಿಮಿಸಿದೆ.

57

ಪಿಯೋನ್ ಕೆಲಸಕ್ಕೆ ಅರ್ಜಿ ಹಾಕಿದ ಬಹುತೇಕರು ಈಗಷ್ಟೇ ತಮ್ಮ ಪದವಿ ಮುಗಿಸಿದವರಾಗಿದ್ದಾರೆ. ಇದು ರಾಜಸ್ಥಾನದಲ್ಲಿನ ಉದ್ಯೋಗ ಸಮಸ್ಯೆಗೆ ಹಿಡಿದ ಕನ್ನಡಿ ಎಂದು ಆರೋಪಗಳು ಕೇಳಿಬರುತ್ತಿದೆ. 27 ಲಕ್ಷ ಮಂದಿ ಅರ್ಜಿಯನ್ನು ಅಂತಿಮಗೊಳಿಸಿ ಲಿಖಿತ ಪರೀಕ್ಷೆಗೆ ಆಹ್ವಾನಿಸುವ ದೊಡ್ಡ ಸವಾಲು ಇದೀಗ ಸರ್ಕಾರದ ಮುಂದಿದೆ. 

67

ಪಿಯೋನ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆರಂಭಗೊಂಡ ದಿನಾಂಕದಿಂದಲೇ ಲಕ್ಷ ಲಕ್ಷ ಅರ್ಜಿಗಳು ಆಗಮಿಸಿದೆ. ಆದರೆ ಕೊನೆಯ ದಿನದ ಅಂತಿಮ ಘಳಿಗೆಯಲ್ಲಿ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ಗೆ ಮುಗಿಬಿದ್ದಿದ್ದಾರೆ. ಇದರಿಂದ ಅರ್ಜಿ ಸಲ್ಲಿಕೆ ವೆಬ್‌ಸೈಟ್ ಕ್ರಾಶ್ ಆಗಿ ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಹಲವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

77

ರಾಜಸ್ಥಾನದಲ್ಲಿ 18 ಲಕ್ಷ ನೋಂದಣಿ ಮಾಡಿದ ನಿರುದ್ಯೋಗಿಗಳಿದ್ದಾರೆ ಎಂದು ಮೂಲಗಳು ಹೇಳುತ್ತಿದೆ. ಆದರೆ ನಿಖರ ದಾಖಲೆ ಪ್ರಕಾರ ಈ ನಿರುದ್ಯೋಗಿಗಳ ಸಂಖ್ಯೆ 30 ಲಕ್ಷಕ್ಕೂ ಹಚ್ಚಿದೆ ಎಂದು ವರದಿಗಳು ಹೇಳುತ್ತಿದೆ. ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ನೇಮಕಾತಿ ಆರಂಭಿಸುತ್ತಿದೆ. ಆದರೆ ಈ ಪಾಟಿ ಅರ್ಜಿಗಳು ಬಂದರೆ ನಿಭಾಯಿಸುವುದು ಹೇಗೆ ಅನ್ನೋದೆ ದೊಡ್ಡಸಮಸ್ಯೆಯಾಗಿ ಪರಿಣಮಿಸಿದೆ.

Read more Photos on
click me!

Recommended Stories