ಟೈರ್‌ ಪಂಕ್ಚರ್‌ ಹಾಕ್ತಿದ್ದೋರು ಈಗ ನ್ಯಾಯಾಧೀಶರಾದ್ರು: ಜೀವನ ನೀಡಿದ ಯೂ ಟರ್ನ್‌ ಬಗ್ಗೆ ಪೋಷಕರ ಹೆಮ್ಮೆ!

First Published | Sep 24, 2023, 6:32 PM IST

ತಂದೆ ಗುಡಿಸಲಿನಲ್ಲಿ ಟೈರ್‌ ರಿಪೇರಿ ಮಾಡುತ್ತಾರೆ ಹಾಗೂ ಅಹದ್‌ ಆಗಾಗ್ಗೆ ಅಪ್ಪನಿಗೆ ಸಹಾಯ ಮಾಡ್ತಿದ್ರು. ಇದೇ ಅಹಾದ್‌ ಈಗ ಸಿವಿಲ್‌ ನ್ಯಾಯಾಧೀಶರಾಗ್ತಿದ್ದಾರೆ.

ಟೈರ್‌ ಪಂಕ್ಚರ್‌ ಹಾಕ್ತಿದ್ದ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನ ಅಹಾದ್‌  ಅಹ್ಮದ್‌ ಈಗ ಸಿವಿಲ್‌ ನ್ಯಾಯಾಧೀಶರಾಗ್ತಿದ್ದಾರೆ. ಇವರ ತಂದೆ ಗುಡಿಸಲಿನಲ್ಲಿ ಟೈರ್‌ ರಿಪೇರಿ ಮಾಡುತ್ತಾರೆ ಹಾಗೂ ಅಹದ್‌ ಆಗಾಗ್ಗೆ ಅಪ್ಪನಿಗೆ ಸಹಾಯ ಮಾಡ್ತಿದ್ರು. ಆದರೀಗ, ಅವರು ರಿಪೇರಿ ಮಾಡಿದ ಯಾವುದೇ ಟೈರ್‌ಗಿಂತ ಅವರ ಜೀವನ ದೊಡ್ಡ ಯೂ - ಟರ್ನ್‌ ತೆಗೆದುಕೊಂಡಿದೆ.

ಶೀಘ್ರದಲ್ಲೇ ಅವರು ನ್ಯಾಯಾಂಗ ಕೋಣೆಗಳಿಂದ ನೊಂದವರಿಗೆ ನ್ಯಾಯ ನೀಡಲಿದ್ದು, ಈ ಹಿನ್ನೆಲೆ  ತಮ್ಮ ಆರಾಮದಾಯಕ, ಅಧಿಕೃತ ನಿವಾಸಕ್ಕೆ ತನ್ನ ತಾಯಿ ಮತ್ತು ತಂದೆಯನ್ನು ಸ್ಥಳಾಂತರಿಸುವ ದಿನಕ್ಕಾಗಿ ಕಾಯುತ್ತಿದ್ದಾರೆ.

Tap to resize

ಅಹಾದ್‌  ಅಹ್ಮದ್‌ ಟೈರ್ ರಿಪೇರಿ ಅವರ ತಂದೆ ಶೆಹಜಾದ್ ಅಹ್ಮದ್ (50) ಅಂಗಡಿ ಹೊಂದಿದ್ದರೆ, ತಾಯಿ ಅಫ್ಸಾನಾ ಬೇಗಂ (47) ಅವರು ತಮ್ಮ ನೆರೆಹೊರೆಯ ಮಹಿಳೆಯರಿಗೆ ಬಟ್ಟೆ ಹೊಲಿಯುತ್ತಾರೆ. ಈ ದಂಪತಿ ಪ್ರಯಾಗ್‌ರಾಜ್‌ನ ಶೃಂಗವೇರಪುರ ಬ್ಲಾಕ್‌ನ ಬರೈ ಹರಖ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಕಠಿಣ ಜೀವನದ ಸವಾಲುಗಳನ್ನು ಧಿಕ್ಕರಿಸಿ, ಮೊದಲು ವಕೀಲರಾದರು ಮತ್ತು ನಂತರ ಪ್ರಾಂತೀಯ ನಾಗರಿಕ ಸೇವೆಗಳ (ನ್ಯಾಯಾಂಗ) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಗನ ಹೆಮ್ಮೆಯ ಪೋಷಕರು. ಇನ್ನು, ಅಹದ್ ಅಹ್ಮದ್‌ ಡಿಸೆಂಬರ್‌ನಲ್ಲಿ ತನ್ನ ವರ್ಷಾವಧಿಯ ತರಬೇತಿಯನ್ನು ಪ್ರಾರಂಭಿಸುವ ಸಾಧ್ಯತೆ ಇದ್ದು, ಅವರು ಸಿವಿಲ್ ನ್ಯಾಯಾಧೀಶರಾಗುತ್ತಾರೆ (ಜೂನಿಯರ್ ವಿಭಾಗ).

ಶೆಹಜಾದ್ ಅಹ್ಮದ್‌ರ ಮನೆಯು ಎಷ್ಟು ಸಾಧಾರಣವಾಗಿದೆಯೋ ಅವರ ನಿರ್ಣಯವು ಅಷ್ಟೇ ಅಸಾಧಾರಣವಾಗಿದೆ. ಅವರು ತಮ್ಮ ಮೂವರು ಗಂಡು ಮಕ್ಕಳನ್ನು ಶಾಲೆ ಮತ್ತು ಕಾಲೇಜುಗಳಿಗೆ ಸೇರಿಸಿದರು, ಮತ್ತು ಯುವಕರು ಶಿಕ್ಷಣದ ಜೀವನವನ್ನು ಬದಲಾಯಿಸುವ ಪ್ರಭಾವದ ಜೀವಂತ ಉದಾಹರಣೆಯಾಗಿದ್ದಾರೆ. ಹಿರಿಯ ಮಗ ಸಮದ್ (30) ಸಾಫ್ಟ್‌ವೇರ್ ಇಂಜಿನಿಯರ್. ಕಿರಿಯ ಪುತ್ರ ವಜಾಹತ್ (24) ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ. 
 

ಎರಡನೇ ಮಗನಾದ ಅಹಾದ್ 2019 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಸಮಗ್ರ ಕಾನೂನು ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರ ಬಳಿ ಕಿರಿಯ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮಹತ್ವಾಕಾಂಕ್ಷೆ, ಬಾರ್‌ನಿಂದ ಬೆಂಚ್‌ಗೆ ಹೋಗುವುದು.

"ಲಾಕ್‌ಡೌನ್ ಸಮಯದಲ್ಲಿ ನ್ಯಾಯಾಧೀಶರ ಪರೀಕ್ಷೆಗೆ ನನ್ನ ಸಿದ್ಧತೆಗಳು ಪ್ರಾರಂಭವಾದವು. ನಮ್ಮ ಆರ್ಥಿಕ ಸ್ಥಿತಿಯು ನನಗೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಸೇರಲು ಅವಕಾಶ ನೀಡದ ಕಾರಣ ನಾನು ಉಚಿತ ಆನ್‌ಲೈನ್ ಕೋಚಿಂಗ್ ತರಗತಿಗಳಿಂದ ಸಹಾಯ ಪಡೆದುಕೊಂಡೆ" ಎಂದು ಅಹಾದ್ ಹೇಳುತ್ತಾರೆ. 303 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 157ನೇ ರ್ಯಾಂಕ್ ಪಡೆದಿದ್ದರು. ಅಹಾದ್‌ ತಾಯಿ ಸಹ ಮಗನ ಬಗ್ಗೆ ಹೆಮ್ಮೆ ಪಡುತ್ತಾರೆ.

Latest Videos

click me!