ವಿಮಾನದಲ್ಲಿ ಕ್ರೀಡಾ ಪರಿಕರ ಕಳೆದುಕೊಂಡ ಮನಿಕಾ ಬಾತ್ರಾ; ಕೇಂದ್ರ ಸರ್ಕಾರದ ಮೊರೆ ಹೋದ ಟೇಬಲ್ ಟೆನಿಸ್ ತಾರೆ

First Published | Aug 9, 2023, 3:53 PM IST

ನವದೆಹಲಿ: ಭಾರತದ ತಾರಾ ಟೇಬಲ್ ಟೆನಿಸ್ ಪಟು, ಒಲಿಂಪಿಯನ್‌ ಮನಿಕಾ ಬಾತ್ರಾ, ಇದೀಗ ವಿಮಾನದಲ್ಲಿ ತಮ್ಮ ಕ್ರೀಡಾ ಪರಿಕರಗಳನ್ನು ಕಳೆದುಕೊಂಡು ಸುದ್ದಿಯಾಗಿದ್ದಾರೆ. ಸರ್ಕಾರವು ತಮ್ಮ ನೆರವಿಗೆ ಧಾವಿಸಬೇಕೆಂದು ಮನಿಕಾ ಬಾತ್ರಾ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಭಾರತದ ಪ್ರಮುಖ ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಪೆರುವಿನಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡು ತವರಿಗೆ ವಾಪಾಸ್ಸಾಗುವ ವೇಳೆಯಲ್ಲಿ ಒಂದು ಶಾಕ್ ಎದುರಾಗಿದೆ.

ಹೌದು, KLM ಏರ್‌ಲೈನ್ಸ್‌ ಮೂಲಕ ಮನಿಕಾ ಬಾತ್ರಾ ತವರಿಗೆ ವಾಪಸ್ಸಾಗಿದ್ದಾರೆ. ಆದರೆ ಅವರ ಜತೆ ವಿಮಾನದಲ್ಲಿ ಬಂದಿದ್ದ ಬ್ಯಾಗೇಜ್‌ನಲ್ಲಿದ್ದ ಪ್ರಮುಖ ಕ್ರೀಡಾಪರಿಕರಗಳು ನಾಪತ್ತೆಯಾಗಿವೆ. ಇದು ಮನೀಕಾ ಬಾತ್ರಾ ತಬ್ಬಿಬ್ಬಾಗುವಂತೆ ಮಾಡಿದೆ.

Latest Videos


ತಮ್ಮ ಕ್ರೀಡಾ ಪರಿಕರಗಳು ನಾಪತ್ತೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮನಿಕಾ ಬಾತ್ರಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. KLM ಏರ್‌ಲೈನ್ಸ್ ಮಾಡಿದ ಬೇಸರವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಬ್ಯುಸಿನೆಸ್ ಕ್ಲಾಸ್ ವಿಮಾನದಲ್ಲಿ ಪ್ರೈಯಾರಿಟಿ ಟ್ಯಾಗ್ ಹೊಂದಿದ್ದ ಬ್ಯಾಗೇಜ್‌ ಕಳೆದು ಹೋಗಿದೆ. ಇದರಲ್ಲಿ ನನ್ನ ಮುಂಬರುವ ಟೂರ್ನಿಗೆ ಅಗತ್ಯವಾಗಿ ಬೇಕಾಗಿದ್ದ ಕ್ರೀಡಾ ಪರಿಕರಗಳು ಸೇರಿದ್ದವು. 

ಏರ್‌ಪೋರ್ಟ್‌ ಸಿಬ್ಬಂದಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಯಾವುದೇ ಉತ್ತರವನ್ನಾಗಲಿ ಅಥವಾ ಪರಿಹಾರವನ್ನಾಗಲಿ ನೀಡಿಲ್ಲ. ನನ್ನ ಆ ಬ್ಯಾಗ್ ಎಲ್ಲಿದೆ ಎಂದು ಅವರಿಗೂ ಕೂಡಾ ಗೊತ್ತಿಲ್ಲ. ಹೀಗಾಗಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಾಗರಿಕ ಪ್ರಯಾಣಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ ಅವರಲ್ಲಿ ಮನಿಕಾ ಬಾತ್ರಾ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ವೈಯುಕ್ತಿಕ ವಿಭಾಗದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿರುವ ಮನಿಕಾ ಬಾತ್ರಾ, ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರಂದು ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪರ ಪದಕ ಗೆಲ್ಲಬಲ್ಲ ನೆಚ್ಚಿನ ಅಥ್ಲೀಟ್ ಎನಿಸಿದ್ದಾರೆ.

ಇನ್ನು ಇದಷ್ಟೇ ಅಲ್ಲದೇ ಟೇಬಲ್‌ ಟೆನಿಸ್‌ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮನಿಕಾ ಬಾತ್ರಾ ಹಾಗೂ ಜಿ ಸತ್ಯನ್‌ 7 ಶ್ರೇಯಾಂಕವನ್ನು ಹೊಂದಿದ್ದು, ಈ ಜೋಡಿ ಕೂಡಾ ಪದಕದ ಭರವಸೆ ಮೂಡಿಸಿದ್ದಾರೆ. ಇದೆಲ್ಲದರ ನಡುವೆ ಮನಿಕಾ ಬಾತ್ರಾಗೆ ಶಾಕ್ ಎದುರಾಗಿದೆ.

click me!