1. ಶುಭ್‌ಮನ್ ಗಿಲ್:
ಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಗಿಲ್, ಇದೀಗ ವೆಸ್ಟ್ ಇಂಡೀಸ್ ಎದುರು ಘರ್ಜಿಸಲು ವೈಫಲ್ಯ ಅನುಭವಿಸಿದ್ದಾರೆ. ಹೀಗಿದ್ದೂ ಮೂರನೇ ಪಂದ್ಯದಲ್ಲಿ ಗಿಲ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
2. ಯಶಸ್ವಿ ಜೈಸ್ವಾಲ್:
ಏಕದಿನ ಸರಣಿಯಲ್ಲಿ ಮಿಂಚಿದ್ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಟಿ20 ಕ್ರಿಕೆಟ್‌ನಲ್ಲಿ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಕಿಶನ್‌ಗೆ ವಿಶ್ರಾಂತಿ ನೀಡಿ ಎಡಗೈ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
3. ಸೂರ್ಯಕುಮಾರ್ ಯಾದವ್:
ಭಾರತದ ಮಿಸ್ಟರ್ 360 ಖ್ಯಾತಿಯ ಸ್ಪೋಟಕ ಬ್ಯಾಟರ್ ಸೂರ್ಯ, ಇಂದಿನ ಪಂದ್ಯದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಾಗಿದೆ. ಸೂರ್ಯ ಸಿಡಿದರೆ, ವಿಂಡೀಸ್ ಬೌಲರ್‌ಗಳಿಗೆ ಉಳಿಗಾಲವಿಲ್ಲ.
4. ಸಂಜು ಸ್ಯಾಮ್ಸನ್:
ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟರ್‌ಗಳ ದಯಾನೀಯ ವೈಫಲ್ಯದಿಂದಾಗಿ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
5. ತಿಲಕ್ ವರ್ಮಾ:
ಭಾರತ ಪರ ಮೊದಲೆರಡು ಪಂದ್ಯಗಳಲ್ಲಿ ನಂಬಿಕೆ ಉಳಿಸಿಕೊಳ್ಳುವಂತ ಪ್ರದರ್ಶನ ತೋರಿದ ಬ್ಯಾಟರ್ ಎಂದರೆ ಅದು ತಿಲಕ್ ವರ್ಮಾ. ಉತ್ತಮ ಲಯದಲ್ಲಿರುವ ತಿಲಕ್ ವರ್ಮಾ ಮತ್ತೊಂದು ಉತ್ತಮ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.
6. ಹಾರ್ದಿಕ್ ಪಾಂಡ್ಯ:
ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯ ಸೋತಿದ್ದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಇದೀಗ ಆಟಗಾರನಾಗಿ ಹಾಗೂ ನಾಯಕನಾಗಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಾದ ಒತ್ತಡ ಪಾಂಡ್ಯ ಮೇಲಿದೆ.
7. ಅಕ್ಷರ್ ಪಟೇಲ್:
ಕಳೆದ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ 14 ರನ್ ಬಾರಿಸಿದ್ದರು. ಆದರೆ ಬೌಲಿಂಗ್ ಮಾಡಿರಲಿಲ್ಲ. ಇಂದು ಪಂದ್ಯ ಗೆಲ್ಲಬೇಕಿದ್ದರೇ ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಬೇಕಿದೆ.
8. ಕುಲ್ದೀಪ್ ಯಾದವ್:
ಎರಡನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ ಯಾವುದೇ ವಿಕೆಟ್ ಕಬಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರವಿ ಬಿಷ್ಣೋಯ್ ಬದಲಿಗೆ ಕುಲ್ದೀಪ್ ಯಾದವ್ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
9. ಯುಜುವೇಂದ್ರ ಚಹಲ್:
ಕಳೆದ ಪಂದ್ಯದಲ್ಲಿ ಪಂದ್ಯದ ದಿಕ್ಕನ್ನೇ ತಿರುವಂತಹ ಪ್ರದರ್ಶನ ತೋರಿದ್ದ ಚಹಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಚಹಲ್ ಹಾಗೂ ಕುಲ್ದೀಪ್ ಜೋಡಿ ವಿಂಡೀಸ್ ಬ್ಯಾಟರ್‌ಗಳನ್ನು ಕಾಡುವ ಸಾಧ್ಯತೆಯಿದೆ.
10. ಮುಕೇಶ್ ಕುಮಾರ್:
27 ವರ್ಷದ ವೇಗಿ ಮುಕೇಶ್ ಕುಮಾರ್ ಕಳೆದ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದ್ದು, ಆದರೆ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿದ್ದರು. ಇಂದಿನ ಪಂದ್ಯದಲ್ಲಿ ಮುಕೇಶ್ ಕುಮಾರ್ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
11. ಆರ್ಶದೀಪ್ ಸಿಂಗ್:
ಭಾರತದ ಡೆತ್ ಓವರ್ ಸ್ಪೆಷಲಿಸ್ಟ್ ಆರ್ಶದೀಪ್ ಸಿಂಗ್, ಇತ್ತೀಚೆಗೆ ಕೊಂಚ ದುಬಾರಿಯಾಗುತ್ತಿದ್ದಾರೆ. ಹೀಗಿದ್ದು, ಮೂರನೇ ಟಿ20 ಪಂದ್ಯದಲ್ಲಿ ಎಡಗೈ ವೇಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.