ಡೇಲ್ ಸ್ಟೇನ್-ಹಾಶೀಂ ಆಮ್ಲಾ: ಪದಾರ್ಪಣೆಯಿಂದ ನಿವೃತ್ತಿವರೆಗಿನ ಅಪರೂಪದ ಜರ್ನಿ

First Published | Aug 9, 2019, 6:56 PM IST

ದಕ್ಷಿಣ ಆಫ್ರಿಕಾ ತಂಡದ ಅನುಭವಿ ಕ್ರಿಕೆಟಿಗರಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ಹಾಗೂ ಹಾಶೀಂ ಆಮ್ಲಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಾರದ ಅಂತರದಲ್ಲಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

2004ರಲ್ಲಿ ಇಬ್ಬರು ಹರಿಣಗಳ ಪಡೆಗೆ ಪದಾರ್ಪಣೆ ಮಾಡಿದ್ದರು, ಇದೀಗ 15 ವರ್ಷಗಳ ಬಳಿಕ ಮತ್ತೆ ಒಂದೇ ವರ್ಷದಲ್ಲಿ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ಟೇನ್ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರೆ, ಆಮ್ಲಾ ಹರಿಣಗಳ ಪರ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಎನ್ನುವ ದಾಖಲೆಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವಿನ ಸಾಮ್ಯತೆ ಹಾಗೂ ಕುತೂಹಲಕಾರಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದೆ.
 

1. ಹಾಶೀಂ ಆಮ್ಲಾ ನವೆಂಬರ್ 2004ರಲ್ಲಿ ಭಾರತ ವಿರುದ್ಧ ಪದಾರ್ಪಣೆ ಮಾಡಿದರೆ, ಡೇಲ್ ಸ್ಟೇನ್ ಅದೇ ವರ್ಷ ಡಿಸೆಂಬರ್’ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದರು.
undefined
2. ಡೇಲ್ ಸ್ಟೇನ್ 2006ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಬಾರಿಗೆ 5 ವಿಕೆಟ್ ಪಡೆದರೆ, ಅದೇ ವರ್ಷ ಆಮ್ಲಾ ನ್ಯೂಜಿಲೆಂಡ್ ವಿರುದ್ದ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದರು.
undefined

Latest Videos


3. ಡೇಲ್ ಸ್ಟೇನ್ 2008ರ ಏಪ್ರಿಲ್’ನಲ್ಲಿ ಮೊದಲ ಬಾರಿಸಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದರೆ, ಆಮ್ಲಾ 2013ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್’ನಲ್ಲಿ ಅಗ್ರಸ್ಥಾನಕ್ಕೇರಿದ್ದರು.
undefined
4. ಸ್ಟೇನ್ ನಂ.1 ಸ್ಥಾನದಲ್ಲಿ ಸತತ 263 ವಾರಗಳ ಕಾಲ ನಂ.1 ಸ್ಥಾನದಲ್ಲೇ ಮುಂದುವರೆದಿದ್ದರು. ಇನ್ನು ಆಮ್ಲಾ ಏಕದಿನ ಕ್ರಿಕೆಟ್’ನಲ್ಲಿ ಅತಿವೇಗವಾಗಿ 2000 to 7000 ರನ್ ಬಾರಿಸಿದ ಕ್ರಿಕೆಟಿಗ ಎನ್ನುವ ದಾಖಲೆ ಬರೆದಿದ್ದಾರೆ.
undefined
5. ಕಾಕತಾಳೀಯವೆಂಬಂತೆ ಸ್ಟೇನ್ 2019ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರೆ, ಆಮ್ಲಾ ಏಕದಿನ ವಿಶ್ವಕಪ್’ನಲ್ಲಿ ಲಂಕಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
undefined
6. ಸ್ಟೇನ್ ಟೆಸ್ಟ್ ಕ್ರಿಕೆಟ್’ನಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್[439] ಎನ್ನುವ ದಾಖಲೆಯೊಂದಿಗೆ ನಿವೃತ್ತಿ ಷೋಷಿಸಿದರೆ, ಆಮ್ಲಾ 58 ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ಗರಿಷ್ಠ ಶತಕ ಬಾರಿಸಿದ ದಾಖಲೆಯೊಂದಿಗೆ ಬ್ಯಾಟ್ ಕೆಳಗಿರಿಸಿದ್ದಾರೆ.
undefined
7. ಒಟ್ಟಿಗೆ ಕ್ರಿಕೆಟ್ ಜರ್ನಿ ಆರಂಭಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಕ್ರಿಕೆಟಿಗರು ಕೇವಲ 2 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.
undefined
click me!