2 ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಕ್ರಿಕೆಟಿಗರಿವರು

First Published | Aug 7, 2019, 6:23 PM IST

ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ತಮ್ಮ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಕನಸಿರುತ್ತದೆ. ಇದಕ್ಕಾಗಿ ವರ್ಷಗಳ ಕಾಲ ಬೆವರು ಹರಿಸಿರುತ್ತಾರೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನದಂತಹ ದೇಶಗಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಎಲ್ಲರಿಗೂ ದೇಶದ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ಸುಲಭದ ಮಾತಾಗಿರುವುದಿಲ್ಲ.

ಒಂದು ದೇಶದ ಪರವೇ ಆಡಲು ಕಷ್ಟ ಎನ್ನುವಾಗುವಾಗ ಇನ್ನೂ ಕೆಲವು ಕ್ರಿಕೆಟಿಗರು ಎರಡೆರಡು ದೇಶಗಳನ್ನು ಪ್ರತಿನಿಧಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಎರಡೆರಡು ದೇಶಗಳನ್ನು ಪ್ರತಿನಿಧಿಸಿದ ಟಾಪ್ 5 ಆಟಗಾರರ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ.

1. ಇಯಾನ್ ಮಾರ್ಗನ್[ಐರ್ಲೆಂಡ್&ಇಂಗ್ಲೆಂಡ್]
undefined
ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ, ಆಂಗ್ಲರ ತಂಡವನ್ನು ಪ್ರತಿನಿಧಿಸುವ ಮುನ್ನ ಐರ್ಲೆಂಡ್ ಪರ ಅಂಡರ್ 17 ಹಾಗೂ ಅಂಡರ್ 19 ತಂಡದ ನಾಯಕರಾಗಿದ್ದರು. 2004ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ತಂಡವನ್ನು ಮುನ್ನಡೆಸಿದ್ದರು.
undefined

Latest Videos


2. ಜೋಫ್ರಾ ಆರ್ಚರ್[ವೆಸ್ಟ್ ಇಂಡೀಸ್&ಇಂಗ್ಲೆಂಡ್]
undefined
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಚೊಚ್ಚಲ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲಿ ಜೋಫ್ರಾ ಆರ್ಚರ್ ಕೂಡಾ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಮುನ್ನ ಆರ್ಚರ್ ವೆಸ್ಟ್ ಇಂಡೀಸ್ ಪರ ಅಂಡರ್ 19 ತಂಡವನ್ನು ಪ್ರತಿನಿಧಿಸಿದ್ದರು. ಬಿಗ್ ಬ್ಯಾಷ್ ಲೀಗ್, ಕೌಂಟಿ ಕ್ರಿಕೆಟ್’ನಲ್ಲಿ ಮಿಂಚಿದ ಆರ್ಚರ್ ಅವರನ್ನು ವಿಶ್ವಕಪ್ ಟೂರ್ನಿಗೆ ಕೆಲವೇ ವಾರಗಳು ಬಾಕಿ ಇದ್ದಾಗ ಇಂಗ್ಲೆಂಡ್ ತಂಡ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
undefined
3. ಡರ್ಕ್ ನ್ಯಾನ್ಸ್[ನೆದರ್‌ಲ್ಯಾಂಡ್&ಆಸ್ಟ್ರೇಲಿಯಾ]
undefined
ಐಪಿಎಲ್ ಟೂರ್ನಿಯಲ್ಲಿ ತಮ್ಮ ವಿನೂತನ ಶೈಲಿಯ ರನ್ನಿಂಗ್ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಉಳಿದಿರುವ ಡರ್ಕ್ ನ್ಯಾನ್ಸ್ ನೆದರ್’ಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರು ಎನಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ನ್ಯಾನ್ಸ್, 2010 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
undefined
4. ಲೂಕಿ ರೋಂಚಿ[ಆಸ್ಟ್ರೇಲಿಯಾ&ನ್ಯೂಜಿಲೆಂಡ್]
undefined
ನ್ಯೂಜಿಲೆಂಡ್’ನಲ್ಲಿ ಜನಿಸಿದ ಬಲಗೈ ಬ್ಯಾಟ್ಸ್’ಮನ್ ಲೂಕಿ ರೋಂಚಿ ಮೊದಲಿಗೆ ಅಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ ಕಳಫೆ ಫಾರ್ಮ್’ನಿಂದ ಹೊರಬಿದ್ದ ರೋಂಚಿ, 2013ರಲ್ಲಿ ನ್ಯೂಜಿಲೆಂಡ್ ತಂಡದ ಪರ ಪದಾರ್ಪಣೆ ಮಾಡಿದರು. ಇನ್ನು 2015ರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದ ರೋಂಚಿ, ಇದೀಗ ಕಿವೀಸ್ ಪರ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
undefined
5. ಇಮ್ರಾನ್ ತಾಹಿರ್[ಪಾಕಿಸ್ತಾನ&ದಕ್ಷಿಣ ಆಫ್ರಿಕ]
undefined
ಸಂಭ್ರಮಾಚರಣೆಯಲ್ಲಿ ವೇಗಿ ಉಸೇನ್ ಬೋಲ್ಟ್ ಅವರನ್ನು ಮೀರಿಸುವಂತೆ ವಿಕೆಟ್ ಪಡೆದಾಗಲೆಲ್ಲಾ ಸಂಭ್ರಮಿಸುವ ದಕ್ಷಿಣ ಆಫ್ರಿಕಾ ಲೆಗ್ ಸ್ಪಿನ್ನರ್ ತಾಹಿರ್, ಮೊದಲು ಪಾಕಿಸ್ತಾನ ಪರ ಅಂಡರ್ 19 ಹಾಗೂ ಪಾಕಿಸ್ತಾನ ’ಎ’ ತಂಡದ ಪರ ಆಡಿದ್ದರು. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ್ದರು.
undefined
click me!