Published : Sep 07, 2019, 09:32 PM ISTUpdated : Sep 07, 2019, 09:33 PM IST
ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.