ಮೋದಿ 75ನೇ ಬರ್ತಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಫುಟ್ಬಾಲ್ ಲೆಜೆಂಡ್ ಮೆಸ್ಸಿ!

Published : Sep 18, 2025, 10:01 AM IST

ನವದೆಹಲಿ: ಫುಟ್ಬಾಲ್ ಲೆಜೆಂಡ್ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ 75ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
15
ಮೋದಿಗೆ ಮೆಸ್ಸಿ ಗಿಫ್ಟ್

ಬುಧವಾರ 75ನೇ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಜೆಂಟಿನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ 2022ರ ಫಿಫಾ ವಿಶ್ವಕಪ್ ಗೆದ್ದ ಜೆರ್ಸಿಗೆ ಸಹಿ ಹಾಕಿ ಉಡುಗೊರೆಯಾಗಿ ಕಳುಹಿಸಿ ಕೊಟ್ಟಿದ್ದಾರೆ.

25
ಭಾರತಗೆ ಭಾರತ ಭೇಟಿ

ಈ ವರ್ಷದ ಅಂತ್ಯಕ್ಕೆ ಮೆಸ್ಸಿ ಭಾರತಕ್ಕೆ ಭೇಟಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಉದ್ಯಮಿ ಸತಾದ್ರು ದತ್ತಾ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

35
ಗೋಟ್ ಟೂರ್ ಆಫ್ ಇಂಡಿಯಾ ಕಾರ್ಯಕ್ರಮ

ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರು 'ಗೋಟ್ ಟೂರ್ ಆಫ್ ಇಂಡಿಯಾ' ಕಾರ್ಯಕ್ರಮದ ಭಾಗವಾಗಿ ಡಿಸೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

45
ಮೋದಿ 75ನೇ ಹುಟ್ಟುಹಬ್ಬ

'ಭಾರತ ಭೇಟಿಯ ಬಗ್ಗೆ ಚರ್ಚಿಸಲು ನಾನು ಫೆಬ್ರವರಿಯಲ್ಲಿ ಲಿಯೋನಲ್ ಮೆಸ್ಸಿಯನ್ನು ಭೇಟಿಯಾದಾಗ ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬದ ಬಗ್ಗೆ ಹೇಳಿದ್ದೆ ಎಂದಿದ್ದರು.

55
ಮೆಸ್ಸಿ ಆಟೋಗ್ರಾಫ್ ಜೆರ್ಸಿ

ಆಗ ಅವರು ಸಹಿ ಮಾಡಿದ ಜೆರ್ಸಿಯನ್ನು ಕಳುಹಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ಈಗ ಜೆರ್ಸಿಯನ್ನು ಕಳುಹಿಸಿದ್ದು, ದಿನಗಳಲ್ಲಿ ಮುಂದಿನ 2-3 ಪ್ರಧಾನಿ ಮೋದಿ ಅವರಿಗೆ ಜೆರ್ಸಿ ಯನ್ನು ತಲುಪಿಸಲಾಗುವುದು' ಎಂದಿದ್ದಾರೆ.

Read more Photos on
click me!

Recommended Stories