ಟೀಮ್ ಇಂಡಿಯಾದಲ್ಲಿ ನಡೀತಿದೆಯಾ ನೆಪೋಟಿಸಂ? ಇಬ್ಬರು ಪ್ಲೇಯರ್ಸ್, ಆ 3 ತಪ್ಪುಗಳೇನು?

Published : Jul 09, 2026, 08:39 PM IST

ಟೀಮ್ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ನಡೆ ನೆಪೋಟಿಸಂ ಚರ್ಚೆಗೆ ಕಾರಣವಾಗಿದೆ. ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರಿಗೆ ಮಣೆ ಹಾಕುತ್ತಿರುವುದು ತಂಡದ ಸೋಲಿಗೆ ಕಾರಣವಾಗಬಹುದೇ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಈ ಕುರಿತು

PREV
14
ನಡಿತಿದೆಯಾ ನೆಪೋಟಿಸಂ!

ಟೀಮ್ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈ ಸರಣಿ ನಾಲ್ಕನೇ ಟಿ20 ಪಂದ್ಯ ಬ್ರಿಸ್ಟಲ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಸಮಯದಲ್ಲಿ ಟೀಮ್ ಇಂಡಿಯಾದ ಹೆಡ್‌ ಕೋಚ್‌ಗಳು ಇಬ್ಬರು ಆಟಗಾರರ ಮೇಲಿನ ಪ್ರೀತಿ ನೋಡಿದರೆ, ಇಲ್ಲಿ ನೆಪೋಟಿಸಂ ನಡಿತಿದೆಯಾ? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಕಾಣಸಿಗುತ್ತದೆ. ಈ ಆಟಗಾರರು ನಿಜವಾಗಿಯೂ ಯಾರು? ಮತ್ತು ಅವರು ಯಾವ ತಪ್ಪು ಮಾಡಿದರು? ಎನ್ನುವುದನ್ನು ನೋಡೋಣ ಬನ್ನಿ.

24
ಗಂಭೀರ್‌ ಮಾಡಿದ್ದೇನು?

ಗೌತಮ್ ಗಂಭೀರ್ ಅವರ ಮೊದಲ ನೆಚ್ಚಿನ ಆಟಗಾರ ಹರ್ಷಿತ್ ರಾಣಾ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹರ್ಷಿತ್ ರಾಣಾ ಗಾಯಗೊಂಡಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ, ಅವರು ದೇಶೀಯ ಕ್ರಿಕೆಟ್‌ನಲ್ಲಿ ಕನಿಷ್ಠ ಒಂದು ಪಂದ್ಯ ಆಡಬೇಕಾಗಿತ್ತು. ಆದರೆ ಗಂಭೀರ್ ಎಲ್ಲಾ ನಿಯಮಗಳನ್ನು ಮುರಿದು ಇಂಗ್ಲೆಂಡ್ ವಿರುದ್ಧ ಆಡಲು ಅವಕಾಶ ನೀಡಿದರು. ಅವಕಾಶ ನೀಡಿದ ನಂತರವೂ ಗಂಭೀರ್ ಸುಮ್ಮನಾಗಲಿಲ್ಲ. ಎರಡು ಬಾರಿ ಅಗ್ರ ಸ್ಥಾನದಲ್ಲಿ ಆಡಲು ಅವಕಾಶ ಸಹ ನೀಡಿ ಹರ್ಷಿತ್ ರಾಣಾಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿದ್ದಾರೆ.

34
ಅಭಿಮಾನಿಗಳ ಯಕ್ಷ ಪ್ರಶ್ನೆ ಏನು?

ಗಂಭೀರ್ ಅವರ ಮತ್ತೊಬ್ಬ ನೆಚ್ಚಿನ ಆಟಗಾರ ವರುಣ್ ಚಕ್ರವರ್ತಿ. ಇಂಗ್ಲೆಂಡ್ ವಿರುದ್ಧ ವರುಣ್ ಚಕ್ರವರ್ತಿ ಅತ್ಯಂತ ಕಳಪೆ ಮಟ್ಟದ ಬೌಲಿಂಗ್ ಮಾಡಿದ್ದಾರೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಟೀಮ್ ಇಂಡಿಯಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಟಿ20ಯಲ್ಲಿ ವರುಣ್ ಚಕ್ರವರ್ತಿ ನಾಲ್ಕು ಓವರ್‌ಗಳಲ್ಲಿ 37ರನ್ ಮತ್ತು ಒಂದು ವಿಕೆಟ್ ಪಡೆದಿದ್ದಾರೆ. ಆದರೆ ಮೂರನೇ ಟಿ20ಯಲ್ಲಿ ಅವರು ಮೂರು ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಇಷ್ಟು ನಿರಸ ಪ್ರದರ್ಶನ ತೋರಿದ್ದರು, ಅವರಿಗೆ ಅವಕಾಶ ಲಭಿಸುತ್ತಿವೆ ಎಂದರೆ ಏನು ಅರ್ಥ? ಎನ್ನುವುದೇ ಅಭಿಮಾನಿಗಳಲ್ಲಿ ಮೂಡಿದ ಯಕ್ಷ ಪ್ರಶ್ನೆಯಾಗಿದೆ.

44
ಎಲ್ಲಿ ಆಗುತ್ತಿದೆ ವಿಫಲತೆ?

ಇಷ್ಟೆಲ್ಲಾ ತಪ್ಪುಗಳನ್ನು ಮಾಡಿದರೂ, ಆಟಗಾರರು ವಿಫಲರಾಗುತ್ತಿದ್ದರೂ ಸಹ, ಗಂಭೀರ್ ಈ ಆಟಗಾರರನ್ನು ಬೆಂಬಲಿಸುತ್ತಿದ್ದಾರೆ. ಅವರಿಗೆ ಅವಕಾಶಗಳನ್ನು ನೀಡುತ್ತಾರೆ. ಆದ್ದರಿಂದ, ಗಂಭೀರ್ ಅವರ ತಪ್ಪುಗಳಿಂದ ಟೀಮ್ ಇಂಡಿಯಾ ಈ ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆಯಾ? ಅಥವಾ ಸೋತರೇ ಅವರ ನಿರ್ಧಾರವೇ ಕಾರಣವಾಗುತ್ತಾ? ಎನ್ನುವ ಮಾತು ಈಗ ಕ್ರೀಡಾವಲಯದಲ್ಲಿ ಸದ್ದು ಮಾಡುತ್ತಿದೆ. ಇದನ್ನು ಯಾವ ರೀತಿ ಟೀಂ ಇಂಡಿಯಾ ಎದುರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories