ಬೆಂಗಳೂರು(ಸೆ.24): ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು 2020ರ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿವೆ. ಟೀಂ ಇಂಡಿಯಾ ತಯಾರಿಗೆ ಹೊಸ ಹುರುಪು ಸಿಕ್ಕಿದೆ. ಇದಕ್ಕೆ ಕಾರಣ 2007ರ ಟಿ20 ವಿಶ್ವಕಪ್ ಗೆಲವು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ 12 ವರ್ಷ. ಇದೇ 24 ಸೆಪ್ಟೆಂಬರ್, 2007ರಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಈ ಸಂಭ್ರಮವನ್ನು ಸುವರ್ಣನ್ಯೂಸ್.ಕಾಂ ಫೋಟೋಗಳಲ್ಲಿ ಮೆಲುಕು ಹಾಕಿದೆ.