ವೈಭವ್ 14, 13, 15 ಹೊಡೆದರೂ ಕೈಬಿಟ್ಟು, 5, 0, 1 ಫೇಲ್ಯೂರ್ ಸಂಜುಗೆ ಚಾನ್ಸ್; ಇಂಗ್ಲೆಂಡ್ ಆಟಗಾರರ ಅಸಮಾಧಾನ!

Published : Jul 11, 2026, 11:18 PM IST

ಇಂಗ್ಲೆಂಡ್ ಟಿ20 ಸರಣಿಯಿಂದ ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟಿದ್ದಕ್ಕೆ ಇಂಗ್ಲೆಂಡ್ ಆಟಗಾರ ಟೀಕಿಸಿದ್ದಾರೆ. ವೈಭವ್ 3  ಪಂದ್ಯಗಳಲ್ಲಿ 14, 13 ಹಾಗೂ 15 ರನ್ ಗಳಿಸಿದ್ದಾನೆ. ಆದರೆ, ಯುವ ಆಟಗಾರನ ಕೈಬಿಟ್ಟು  5, 0, 1 ಹೊಡೆದು ಫೇಲ್ಯೂರ್ ಆಗಿರುವ ಸಂಜು ಸ್ಯಾಮ್ಸನ್‌ಗೆ ಚಾನ್ಸ್ ಸರಿಯಲ್ಲ ಎಂದಿದ್ದಾರೆ.

PREV
15

ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಿಂದ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟ ಟೀಂ ಇಂಡಿಯಾ ನಿರ್ಧಾರಕ್ಕೆ ಇಂಗ್ಲೆಂಡ್‌ನ ಮಾಜಿ ಆಟಗಾರ ಗ್ರೇಮ್ ಸ್ವಾನ್ ಕಿಡಿಕಾರಿದ್ದಾರೆ. ವೈಭವ್ ನಿಜಕ್ಕೂ ಮುಂದಿನ ಪೀಳಿಗೆಯ ದೊಡ್ಡ ಪ್ರತಿಭೆ ಅಂತ ನೀವು ಅಂದುಕೊಂಡಿದ್ದರೆ, ಅವನಿಗೆ ಕೇವಲ ಮೂರು ಮ್ಯಾಚ್‌ಗಳಿಗಿಂತ ಹೆಚ್ಚು ಅವಕಾಶ ಕೊಡಬೇಕಿತ್ತು ಎಂದು ಸ್ವಾನ್ ವಾದಿಸಿದ್ದಾರೆ.

25

ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬಗ್ಗೆ ಸ್ವಾನ್ ಹೀಗೆ ಮಾತನಾಡಿದ್ದಾರೆ... ‘’ತಾನು ಆಡಿದ ಮೂರು ಮ್ಯಾಚ್‌ಗಳಲ್ಲಿ ಆ ಹುಡುಗ ತಾನೇನು ಮಾಡಬಲ್ಲೆ ಅಂತ ತೋರಿಸಿದ್ದ. ಒಂದು ವೇಳೆ ಆ ಮೂರೂ ಪಂದ್ಯಗಳಲ್ಲಿ ಅವನು ಸಂಪೂರ್ಣ ಫೇಲ್ ಆಗಿದ್ರೆ, ನಿಮ್ಮ ನಿರ್ಧಾರವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ನೀವು ವಾಪಸ್ ಕರೆತಂದಿದ್ದು ಯಾರನ್ನ? 5, 0, 1 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್‌ರನ್ನು.

35

ಆದರೆ 'ಈ ಹುಡುಗ ಕನಿಷ್ಠ 13, 14, 15 ರನ್‌ ಆದ್ರೂ ಗಳಿಸಿದ್ದ. ಅವನಿಗೆ ಇನ್ನೂ 15 ವರ್ಷ ಅಷ್ಟೇ. ಅವನು ಮಾನಸಿಕವಾಗಿ ಇನ್ನೂ ಬೆಳೆಯುತ್ತಿದ್ದಾನೆ. ಈ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ನಿಮ್ಮ ಈ ನಿರ್ಧಾರ ಅವನ ವೃತ್ತಿಜೀವನವನ್ನು ಮೂರ್ನಾಲ್ಕು ತಿಂಗಳು ಹಿಂದಕ್ಕೆ ತಳ್ಳಬಹುದು'' ಎಂದು ಸ್ವಾನ್ ಹೇಳಿದ್ದಾರೆ.

45

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾತು ಮುಂದುವರಿಸುತ್ತಾ, 'ಮುಂದೊಂದು ದಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬನಾಗಬಲ್ಲ ಆಟಗಾರ ನಿಮಗೆ ಬೇಕಿದ್ದರೆ, ನೀವು ಅವನನ್ನು ಸರಿಯಾಗಿ ಬೆಳೆಸಬೇಕು. ಈಗ ಇಡೀ ತಂಡದ ಕಳಪೆ ಪ್ರದರ್ಶನಕ್ಕೆ ಅವನು ಬಲಿಯಾಗಿದ್ದಾನೆ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಸರಣಿ ಮುಗಿದರೂ, ವೈಭವ್ ಸೂರ್ಯವಂಶಿಯನ್ನು ಟೀಂ ಇಂಡಿಯಾ ನಡೆಸಿಕೊಂಡ ರೀತಿ ಬಗ್ಗೆ ಚರ್ಚೆಗಳು ಮುಂದುವರಿಯುವ ಸಾಧ್ಯತೆ ಇದೆ.

55

ಅಂತಿಮ ಪಂದ್ಯದಲ್ಲಿ ಅನುಭವಿ ಆಟಗಾರರಿಗೆ ಮಣೆ ಹಾಕಲು ಟೀಂ ಮ್ಯಾನೇಜ್‌ಮೆಂಟ್ ನಿರ್ಧರಿಸಿತ್ತು. ಆದರೆ, 15 ವರ್ಷದ ಆಟಗಾರನನ್ನು ಕೇವಲ ಮೂರು ಪಂದ್ಯಗಳ ನಂತರ ಕೈಬಿಟ್ಟಿದ್ದು, ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಆಯ್ಕೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಇನ್ನು, ಸೂರ್ಯವಂಶಿ ಬದಲಿಗೆ ತಂಡಕ್ಕೆ ವಾಪಸಾದ ಸಂಜು ಸ್ಯಾಮ್ಸನ್, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಭಾರತದ ಈ ಓಪನರ್ ಕೇವಲ 14 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು. ಸಂಜು ಅವರ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿದ್ದವು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories