ಮತ್ತೆ ಮತ್ತೆ ಅದೇ ತಪ್ಪು ಮಾಡ್ತಿದ್ದಾರೆ ವೈಭವ್ ಸೂರ್ಯವಂಶಿ! ಈ 3 ತಪ್ಪು ತಿದ್ದಿಕೊಳ್ಳದಿದ್ರೆ, ಟೀಂ ಇಂಡಿಯಾದಿಂದ ಗೇಟ್‌ಪಾಸ್ ಗ್ಯಾರಂಟಿ!

Published : Jul 11, 2026, 05:13 PM IST

ಬೆಂಗಳೂರು: 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಬಿಹಾರ ಮೂಲದ ವೈಭವ್ ಸೂರ್ಯವಂಶಿ, ಮೊದಲ ಮೂರು ಟಿ20 ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. 

PREV
16
ವೈಭವ್ ಸೂರ್ಯವಂಶಿಗೆ ಎಚ್ಚರಿಕೆಯ ಕಿವಿ ಮಾತು

ಒಂದು ವೇಳೆ ವೈಭವ್ ಸೂರ್ಯವಂಶಿ, ಮುಂಬರುವ ಪಂದ್ಯಗಳಲ್ಲಿ ಈ ಮೂರು ತಪ್ಪುಗಳನ್ನು ಸುಧಾರಿಸಿಕೊಳ್ಳದೇ ಹೋದರೇ, ಬಂದಷ್ಟೇ ವೇಗದಲ್ಲಿ ಕ್ರಿಕೆಟ್‌ನಲ್ಲಿ ಮಾಯವಾದರೂ ಅಚ್ಚರಿಯಿಲ್ಲ. ಮೊದಲನೆಯದಾಗಿ ವೈಭವ್ ಸೂರ್ಯವಂಶಿಗೆ ಇದು ಐಪಿಎಲ್ ಅಲ್ಲ, ತಾನೀಗ ಆಡುತ್ತಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಎನ್ನುವುದು ಮರೆಯಬಾರದು. ವೈಭವ್ ಸೂರ್ಯವಂಶಿ ತಾವು ನಿರೀಕ್ಷಿಸಿದಂತ ಆರಂಭ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಗಲಿಲ್ಲ.

26
ಮೊದಲ 3 ಪಂದ್ಯಗಳಲ್ಲಿ ವೈಭವ್ ಗಳಿಸಿದ್ದು ಕೇವಲ 42 ರನ್ ಮಾತ್ರ

ಟೀಂ ಇಂಡಿಯಾ ಪರ ವೈಭವ್ ಸೂರ್ಯವಂಶಿ ಕ್ರಮವಾಗಿ 14,13 ಹಾಗೂ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಮೂರು ಪಂದ್ಯಗಳಿಂದ ವೈಭವ್ ಕೇವಲ 42 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ವೈಭವ್ ಬೌಂಡರಿ ಸಿಕ್ಸರ್ ಸಿಡಿಸಿದ್ದರೂ ದೊಡ್ಡ ಇಂಪ್ಯಾಕ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. ವೈಭವ್‌ ಐಪಿಎಲ್‌ನಲ್ಲಿ ಮಾಡಿದ ಮ್ಯಾಜಿಕ್ ಇಂಗ್ಲೆಂಡ್ ನೆಲದಲ್ಲಿ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವೈಭವ್ ಸೂರ್ಯವಂಶಿ ಪದೇ ಪದೇ ಎಡವುತ್ತಿದ್ದಾರೆ. ವೈಭವ್ ಸೂರ್ಯವಂಶಿ ಈ ಕೆಳಗಿನ ಐದು ತಪ್ಪುಗಳಿಂದ ಪಾಠ ಕಲಿಯಲೇಬೇಕಿದೆ. ಯಾವುದವು ಎನ್ನುವುದನ್ನು ನೋಡೋಣ ಬನ್ನಿ.

36
1. ಪರಿಸ್ಥಿತಿಗೆ ತಕ್ಕಂತೆ ಆಡಬೇಕಿದೆ 15ರ ಪೋರ:

ವೈಭವ್ ಸೂರ್ಯವಂಶಿ ಪರಿಸ್ಥಿತಿಗೆ ತಕ್ಕಂತೆ ಆಡುತ್ತಿಲ್ಲ ಎನ್ನುವುದು ಹಲವು ಕ್ರಿಕೆಟ್ ವಿಶ್ಲೇಷಕರ ಆರೋಪವಾಗಿದೆ. ಯಾವ ವಾತಾವರಣದಲ್ಲಿ ಹೆಚ್ಚು ಆಡಿದ ಅನುಭವ ಇಲ್ಲವೋ ಅಲ್ಲಿ ಕೆಲವು ಎಸೆತಗಳನ್ನು ಎದುರಿಸಿದ ಬಳಿಕ ಆಕ್ರಮಣಕಾರಿ ಆಟವಾಡಬೇಕು. ಇಲ್ಲದಿದ್ದರೇ ವೈಭವ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಈ ತಪ್ಪನ್ನು ವೈಭವ್ ಗಮನದಲ್ಲಿಟ್ಟುಕೊಂಡು ಆಡಬೇಕಿದೆ.

46
2. ಶಾಟ್‌ ಬಾಲ್‌ಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು:

ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವೇಗಿಗಳು ಶಾಟ್‌ ಬಾಲ್‌ಗಳನ್ನು ಹಾಕುವ ಮೂಲಕ ಪದೇ ಪದೇ ಕೆಣಕುತ್ತಿದ್ದಾರೆ. ಇಂತಹ ಎಸೆತಗಳನ್ನು ವೈಭವ್ ಎಚ್ಚರಿಕೆಯಿಂದ ಎದುರಿಸಬೇಕಾಗುತ್ತದೆ. ಈಗಾಗಲೇ ಜೋಫ್ರಾ ಆರ್ಚರ್, ಪದೇ ಪದೇ ಬೌನ್ಸರ್ ಎಸೆಯುವ ಮೂಲಕ ಎರಡು ಸಲ ವೈಭವ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಹೀಗಾಗಿ ವೈಭವ್ ಸೂರ್ಯವಂಶಿ ಶಾಟ್ ಬಾಲ್ ಎದುರಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

56
3. ಅಗತ್ಯಕ್ಕಿಂತ ಮಿಗಿಲಾಗಿ ಆಕ್ರಮಣಕಾರಿ ಆಟವಾಡಬಾರದು:

ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಿಂದಲೇ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಮುಂದಾಗುತ್ತಿದ್ದರು. ಆದರೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌. ಇಲ್ಲಿ ಪರಿಸ್ಥಿತಿಗೆ ತಕ್ಕಂತೆ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅಗತ್ಯವಿಲ್ಲದಿದ್ದಾಗ ಸ್ಪೋಟಕ ಆಟವಾಡುವ ಬದಲು ಎಚ್ಚರಿಕೆಯ ಆಟಕ್ಕೆ ವೈಭವ್ ಮುಂದಾಗಬೇಕಿದೆ.

66
ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ ಹಲವು ಕ್ರಿಕೆಟಿಗರು

ಈಗಾಗಲೇ ಟಿ20 ಕ್ರಿಕೆಟ್‌ಗೆ ಟೀಂ ಇಂಡಿಯಾ ಆರಂಭಿಕರಾಗಲು ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅವರಂತಹ ಆಟಗಾರರು ದೊಡ್ಡ ಪೈಪೋಟಿ ನಡೆಸುತ್ತಿದ್ದಾರೆ. ಇವರೆಲ್ಲರ ನಡುವೆ ವೈಭವ್ ಸೂರ್ಯವಂಶಿ ತನ್ನ ತಪ್ಪು ತಿದ್ದಿಕೊಳ್ಳದೇ ಪದೇ ಪದೇ ಪುನರಾವರ್ತನೆ ಭಾರತ ತಂಡದಿಂದ ಹೊರಬೀಳೋದು ಗ್ಯಾರಂಟಿ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories