'ಆಹಾರದಲ್ಲಿ ಹುಳ, ಕೊಳಕು ತಲೆದಿಂಬು..ಇನ್ನೆಂದೂ ಭಾರತಕ್ಕೆ ಭೇಟಿ ನೀಡೋದಿಲ್ಲ' ಎಂದ ಸೆರ್ಬಿಯಾ ಟೆನಿಸ್‌ ತಾರೆ!

First Published | Feb 10, 2024, 4:31 PM IST

ಸೆರ್ಬಿಯಾದ ಟೆನಿಸ್‌ ತಾರೆ ಎಜಾನಾ ರಾಡಾನೋವಿಕ್ ಭಾರತದ ಕುರಿತಾಗಿ ನೀಡಿದ ಹೇಳಿಕೆಯಿಂದ ವಿವಾದಕ್ಕೆ ತುತ್ತಾಗಿದ್ದಾರೆ. ಇನ್ನೆಂದೂ ಭಾರತಕ್ಕೆ ಬರೋದಿಲ್ಲ ಎಂದು ಅವರು ತಮ್ಮ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತದ ಕುರಿತಾಗಿ ಮಾಡಿದ ಅವಹೇಳನಕಾರಿ ಪೋಸ್ಟ್‌ನ ಕಾರಣದಿಂದಾಗಿ ಸೆರ್ಬಿಯಾ ಮೂಲದ ಟೆನಿಸ್‌ ತಾರೆಯ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಭಾರತದ ಕುರಿತಾಗಿ ಸಾಲು ಸಾಲು ಪೋಸ್ಟ್‌ ಮಾಡಿರುವ ಎಜಾನಾ ರಾಡಾನೋವಿಕ್, ದೇಶದ ಆಹಾರ, ಸ್ವಚ್ಛತೆ ಹಾಗೂ ಟ್ರಾಫಿಕ್‌ನ ಬಗ್ಗೆ ಟೀಕೆ ಮಾಡಿದ್ದಾರೆ.

Tap to resize

ಭಾರತದಲ್ಲಿ ಅಂದಾಜು  ಎರಡು ವಾರ ಕಾಲ ಕಳೆದಿದ್ದ ರಾಡಾನೋವಿಕ್‌ ಒಂದು ಪೋಸ್ಟ್‌ನಲ್ಲಿಯಂತೂ 'ವಿದಾಯ ಭಾರತ, ಇನ್ನೆಂದೂ, ಇನ್ನೆಂದಿಗೂ ನಾನು ಮತ್ತೆ ಈ ದೇಶಕ್ಕೆ ಬರೋದಿಲ್ಲ' ಎಂದು ವಿಮಾನ ನಿಲ್ದಾಣದ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

ಮ್ಯೂನಿಚ್ ತಲುಪಿದ ನಂತರ ಮತ್ತೊಂದು ಪೋಸ್ಟ್‌ ಮಾಡಿದ ರಾಡಾನೋವಿಕ್, 'ನಾಗರೀಕತೆಗೆ ಹಲೋ. 3 ವಾರಗಳ ಕಾಲ ಭಾರತದಂಥ ದೇಶದಲ್ಲಿ ಇದ್ದು ಅನುಭವಿಸಿದವರು  ಮಾತ್ರ ಈ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.
 

ಭಾರತದ ಟ್ರಾಫಿಕ್‌ ಬಗ್ಗೆ ಬರೆದಿರುವ ಆಕೆ, ಒಂದಂತೂ ಒಪ್ಪಿಕೊಳ್ಳಬೇಕು ಏನೆಂದರೆ, ಭಾರತದಲ್ಲಿ ಇರುವವರು ಅದ್ಭುತವಾದ ಡ್ರೈವರ್‌ಗಳು. ಇನ್ನೂ ಟ್ರಾಫಿಕ್‌ ಕೆಲವೊಮ್ಮೆ ಇಂಟ್ರಸ್ಟಿಂಗ್‌ ಅನಿಸುತ್ತಿತ್ತು ಎಂದಿದ್ದಾರೆ.

ಟ್ರಾಫಿಕ್‌ನಲ್ಲಿ ನಿಮ್ಮ ದಿನ ಹೇಗಿರುತ್ತದೆ ಎನ್ನುವ ಅರಿವೂ ಇರುವುದಿಲ್ಲ. ಏಕಕಾಲಕ್ಕೆ ಎಲ್ಲರೂ ಹಾರ್ನ್‌ ಮಾಡುತ್ತಿರುತ್ತಾರೆ. ಟ್ರಾಫಿಕ್‌ ಒಳ್ಳೆ ರಶ್‌ ಗೇಮ್‌ನಂತೆ ಇರುತ್ತದೆ ಎಂದಿದ್ದಾರೆ.

ಇವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಗಳಲ್ಲಿ ಕೆಲವೊಂದು ಅಪ್‌ಡೇಟ್‌ಗಳನ್ನು ನೀಡಿದ್ದು, ಭಾರತದಲ್ಲಿ ಆದ ಅನುಭವದ ಬಗ್ಗೆ ತಿಳಿಸಿದ್ದಾರೆ.

ಎಲ್ಲರೂ ಭಾರತೀಯರ ಬಗ್ಗೆ ನಾನು ಮಾತನಾಡಿಲ್ಲ. ಆದರೆ, ಭಾರತ ಎನ್ನುವ ದೇಶದ ಬಗ್ಗೆ ಹಾಗೂ ಅದು ಇರುವ ರೀತಿ ಬಗ್ಗೆ ಮಾತನಾಡಿದ್ದೇನೆ. ಆ ಕಾರಣಕ್ಕಾಗಿ ಇದನ್ನು ಜನಾಂಗೀಯ ನಿಂದನೆ ಎನ್ನುವಂತಿಲ್ಲ ಎಂದು ತಿಳಿಸಿದ್ದಾರೆ.

ನಿಜವಾಗಿಯೂ ನಾನು ಯಾವುದರ ಬಗ್ಗೆ ಮಾತನಾಡಬೇಕು ಅನ್ನೋದೇ ಗೊತ್ತಿಲ್ಲ. ನನಗೆ ಭಾರತ ಒಂದು ದೇಶವಾಗಿ ನನಗೆ ಒಂಚೂರು ಇಷ್ಟವಾಗಿಲ್ಲ ಎಂದು ಆಕೆ ಬರೆದುಕೊಂಡಿದ್ದಾರೆ.

ಭಾರತದ ಆಹಾರ, ಟ್ರಾಫಿಕ್‌ ಹಾಗೂ ಹೈಜಿನ್‌ (ಆಹಾರದಲ್ಲಿ ಹುಳುಗಳು, ಹಳದಿ ಬಣ್ಣಕ್ಕೆ ತಿರುಗಿದ ತಲೆದಿಂಬುಗಳು, ಕೆಟ್ಟದಾದ ಬೆಡ್‌ಶೀಟ್‌ಗಳು, ರೌಂಡಾಬೌಟ್‌ಅನ್ನು ಬೇಗೆ ಬಳಸಬೇಕು ಅನ್ನೋದೇ ಗೊತ್ತಿಲ್ಲ ) ಕೆಟ್ಟದಾಗಿದೆ ಎಂದು ಅವರಿ ಬರೆದಿದ್ದಾರೆ.

ಅದರೊಂದಿಗೆ ಎಜಾನಾ ರಾಡಾನೋವಿಕ್‌ ಎಲ್ಲರಿಗೂ ತಮ್ಮ ದೇಶಕ್ಕೆ ಬರುವಂತೆ ಅವರು ಆಹ್ವಾನವನ್ನೂ ನೀಡಿದ್ದಾರೆ.ಇಂಥ ಯಾವ ಅನುಭವಗಳೂ ನಿಮಗೆ ಆಗೋದಿಲ್ಲ ಎಂದಿದ್ದಾರೆ.

ನೀವು ನನ್ನ ದೇಶವಾದ ಸೆರ್ಬಿಯಾಗೆ ಬಂದಲ್ಲಿ, ನಿಮಗೆ ಇಂಥ ಯಾವ ಅಂಶಗಳೂ ಕೂಡ ಕಾಣ ಸಿಗೋದಿಲ್ಲ. ಹಾಗೆಂದ ಮಾತ್ರಕ್ಕೆ ನೀವು ರಾಸಿಸ್ಟ್‌ ಅಲ್ಲ.


ನಾನು ಹೇಳಿದ ವಿಚಾರಕ್ಕೂ ಜನಾಂಗೀಯ ನಿಂದನೆಗೂ ಏನು ಸಂಬಂಧ ಎಂದು ರಾಡಾನೋವಿಕ್‌ ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಕಾಮೆಂಟ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

27 ವರ್ಷದ ಎಜಾನಾ ರಾಡೋನಿವಿಕ್‌, ಕಳೆದ ವಾರ ಇಂಡಿಯಾ ಟೂರ್‌ನಲ್ಲಿ ಪುಣೆ, ಬೆಂಗಳೂರು ಹಾಗೂ ಇಂದೋರ್‌ನಲ್ಲಿ ನಡೆದ ಡಬ್ಲ್ಯು50 ಟೆನಿಸ್‌ ಟೂರ್ನಿಯಲ್ಲಿ ಭಾಗಿಯಾಗಿದ್ದರು.

ರಾಡೋನಿವಿಕ್‌ ಅವರ ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಜನಾಂಗೀಯ ನಿಂದನೆಯಾಗಿದೆ ಈ ಬಗ್ಗೆ ಆಕೆ ಕ್ಷಮೆ ಕೇಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಸೆರ್ಬಿಯಾದ ಟೆನಿಸ್‌ ತಾರೆ ತಮ್ಮ ಪೋಸ್ಟ್‌ಗೆ ಕ್ಷಮೆ ಕೇಳಬೇಕು. ಆಕೆ ಇಡೀ ಭಾರತೀಯರಿಗೆ ಮಾಡಿದ ಅವಮಾನ. ಈ ಬಗ್ಗೆ ರಾಡೋವಿಕ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿಯೇ ಸ್ಪಷ್ಟನೆ ನೀಡಿದ್ದಾರೆ.

Latest Videos

click me!