Commonwealth games 2022- ಭಾರತೀಯ ಸ್ವರ್ಧಿಗಳು ಪದಕಗಳನ್ನು ಗೆದ್ದ ಕ್ಷಣಗಳು

First Published Aug 6, 2022, 4:39 PM IST

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth games 2022) ರಲ್ಲಿ ಭಾರತೀಯ ಕುಸ್ತಿಪಟುಗಳು ಈವೆಂಟ್‌ನ ಮೊದಲ ದಿನವೇ ಪ್ರಾಬಲ್ಯ ಸಾಧಿಸಿದರು. ಒಂದೇ ದಿನದಲ್ಲಿ 3 ಚಿನ್ನದ ಪದಕ ಸೇರಿದಂತೆ 6 ಪದಕಗಳನ್ನು ಗೆಲ್ಲುವ ಮೂಲಕ ಭಾರತ ವಿಶ್ವದಲ್ಲೇ ಭಾರತ  ಪ್ರಮುಖ ಸ್ಪರ್ಧಿ ಎಂದು ಸಾಬೀತುಪಡಿಸಿದೆ. ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ದೀಪಕ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಅಂಶು ಮಲಿಕ್ ಬೆಳ್ಳಿ ಗೆದ್ದರೆ, ದಿವ್ಯಾ ಕಕ್ರಾನ್ ಮತ್ತು ಮೋಹಿತ್ ಗ್ರೆವಾಲ್ ಕಂಚಿನ ಪದಕ ಗೆದ್ದಿದ್ದಾರೆ.ಭಾರತೀಯ ಸ್ವರ್ಧಿಗಳು ಪದಕಗಳನ್ನು ಗೆದ್ದ ಕ್ಷಣಗಳ ಫೋಟೋಗಳು ಇಲ್ಲಿವೆ.

ಬಜರಂಗ್ ಪುನಿಯಾ -ಚಿನ್ನ:

ಕಾಮನ್‌ವೆಲ್ತ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾ ಸೆಮಿಫೈನಲ್ ಪಂದ್ಯವನ್ನು 10-0 ಅಂತರದಿಂದ ಗೆದ್ದುಕೊಂಡರು. ಅಂತಿಮ ಪಂದ್ಯದಲ್ಲಿ ಕೆನಡಾದ ಕುಸ್ತಿಪಟುವನ್ನು 9-2 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಇದಕ್ಕೂ ಮುನ್ನ 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬಜರಂಗ್‌ ಬೆಳ್ಳಿ ಜಯಿಸಿದ್ದರು.

ಸಾಕ್ಷಿ ಮಲಿಕ್ -ಚಿನ್ನ:

ಕುಸ್ತಿ ಪಟು ಸಾಕ್ಷಿ ಮಲಿಕ್ 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸಾಕ್ಷಿ ಕೆನಡಾದ ಕುಸ್ತಿಪಟುವನ್ನು ಸೋಲಿಸುವ ಮೂಲಕ ಕಾಮನ್‌ವೆಲ್ತ್‌ನಲ್ಲಿ ಮೊದಲ ಚಿನ್ನ ಗೆಲ್ಲುವ ಗುರಿಯನ್ನು ಪೂರ್ಣಗೊಳಿಸಿದರು. ಈ ಹಿಂದೆ 2018ರಲ್ಲಿ ಬೆಳ್ಳಿ ಹಾಗೂ 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು.

ದೀಪಕ್ ಪೂನಿಯಾ- ಚಿನ್ನ:

ಕುಸ್ತಿಪಟು ದೀಪಕ್ ಪೂನಿಯಾ ಫ್ರೀಸ್ಟೈಲ್ ಕುಸ್ತಿಯ 86 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ದೀಪಕ್ ಪಾಕಿಸ್ತಾನದ ಕುಸ್ತಿಪಟುವನ್ನು 3-0 ಅಂತರದಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿದ್ದು ವಿಶೇಷ.

ಅಂಶು ಮಲಿಕ್ - ಬೆಳ್ಳಿ:

ಕುಸ್ತಿಪಟು ಅಂಶು ಮಲಿಕ್ ಕಾಮನ್‌ವೆಲ್ತ್ ಗೇಮ್ಸ್‌ನ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅಂಶು ನೈಜೀರಿಯಾದ ಕುಸ್ತಿಪಟು ವಿರುದ್ಧ ಸೋತರು ಆದರೆ ಅಂಶು ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದರು.

ದಿವ್ಯಾ ಕಕ್ರಾನ್-ಕಂಚು:

ಕುಸ್ತಿ ಪಟ್ಟು  ದಿವ್ಯಾ ಕಕ್ರಾನ್ ಅವರು ಕಂಚಿನ ಪದಕವನ್ನು ಕೇವಲ 30 ಸೆಕೆಂಡುಗಳಲ್ಲಿ ಗೆದ್ದರು. ದಿವ್ಯಾ 2-0 ಗೋಲುಗಳಿಂದ ಟಾಂಗಾದ ಲಿಲಿ ಕಾಕರ್ ಅವರನ್ನು ಸೋಲಿಸಿದರು.

ಮೋಹಿತ್ ಗ್ರೆವಾಲ್‌-ಕಂಚು:

ಕಾಮನ್‌ವೆಲ್ತ್ ರೈಲಿಂಗ್‌ನ 125 ಕೆಜಿ ತೂಕ ವಿಭಾಗದಲ್ಲಿ ಮೋಹಿತ್ ಗ್ರೆವಾಲ್ ಕಂಚಿನ ಪಂದ್ಯದಲ್ಲಿ ಪ್ರದಿದ್ವಿನಿ ಅವರನ್ನು 6-0 ಅಂತರದಿಂದ ಸೋಲಿಸಿ ಪದಕ ಗೆದ್ದರು. ಕಾಮನ್‌ವೆಲ್ತ್‌ನಲ್ಲಿ ಮೋಹಿತ್ ಗ್ರೆವಾಲ್‌ಗೆ ಇದು ಮೊದಲ ಪದಕವಾಗಿದೆ.

click me!