Image credit: Getty
1. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದರು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟವಾಡಬೇಕಿದೆ.
Suryakumar Yadav
2. ಸೂರ್ಯಕುಮಾರ್ ಯಾದವ್: ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಮತ್ತೊಮ್ಮೆ ಟೀಂ ಇಂಡಿಯಾ ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೂರ್ಯ ಮೊದಲೆರಡು ಟಿ20 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ತೋರಿದ್ದರೂ ಸಹಾ ಇಂದು ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
3. ದೀಪಕ್ ಹೂಡಾ: ಪ್ರತಿಭಾನ್ವಿತ ಬ್ಯಾಟರ್ ದೀಪಕ್ ಹೂಡಾ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಇದೇ ವೇಳೆ ಶ್ರೇಯಸ್ ಅಯ್ಯರ್ ಮೊದಲೆರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಇಂದು ಹೂಡಾಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
4. ರಿಷಭ್ ಪಂತ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 14 ಹಾಗೂ 24 ರನ್ ಬಾರಿಸಿದ್ದರು. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಬೇಕಿದ್ದರೇ ಮಧ್ಯಮ ಕ್ರಮಾಂಕದಲ್ಲಿ ಪಂತ್ ಅಬ್ಬರಿಸಬೇಕಿದೆ.
5. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಇದೀಗ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ ಪಾಂಡ್ಯ.
Image credit: PTI
6. ದಿನೇಶ್ ಕಾರ್ತಿಕ್: ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಮೇಲೆ ಟೀಂ ಇಂಡಿಯಾ ಡೆತ್ ಓವರ್ ಬ್ಯಾಟಿಂಗ್‌ನಲ್ಲಿ ಹೆಚ್ಚು ಅವಲಂಬಿತವಾಗಿದೆ. ಡಿಕೆ ಅಬ್ಬರಿಸಿದರೇ ಎಷ್ಟು ದೊಡ್ಡ ಸವಾಲನ್ನು ಬೇಕಿದ್ದರೂ ಮೆಟ್ಟಿ ನಿಲ್ಲಬಹುದು.
Ravindra Jadeja
7. ರವೀಂದ್ರ ಜಡೇಜಾ: ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟರ್ ಜಡೇಜಾ, ವಿಂಡೀಸ್ ಎದುರಿನ ಏಕದಿನ ಸರಣಿಗೆ ಫಿಟ್ನೆಸ್ ಸಮಸ್ಯೆಯಿಂದ ಹೊರಗುಳಿದ್ದರು. ಆದರೆ ಜಡ್ಡು ಟಿ20 ಸರಣಿಯಲ್ಲಿ ಉತ್ತಮ ಆಲ್ರೌಂಡ್ ಪ್ರದರ್ಶನ ತೋರುತ್ತಿದ್ದಾರೆ.
8. ರವಿಚಂದ್ರನ್ ಅಶ್ವಿನ್; ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಪಂದ್ಯದಲ್ಲಿ 2 ಹಾಗೂ ಎರಡನೇ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದ್ದರು. ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲೂ ನೆರವಾಗಬಲ್ಲ ಅಶ್ವಿನ್, ಇಂದೂ ಕಣಕ್ಕಿಳಿಯುವುದು ಬಹುತೇಕ ಖಚಿತ.
9. ಭುವನೇಶ್ವರ್ ಕುಮಾರ್: ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದ್ದ ಭುವಿ, ಎರಡನೇ ಪಂದ್ಯದಲ್ಲಿ ವಿಕೆಟ್ ಗಳಿಸಲು ವಿಫಲವಾಗಿದ್ದರು. ಹೀಗಿದ್ದೂ ಬುಮ್ರಾ ಅನುಪಸ್ಥಿತಿಯಲ್ಲಿ ಭುವಿ ಟೀಂ ಇಂಡಿಯಾ, ವೇಗದ ಬೌಲಿಂಗ್ ಸಾರಥ್ಯ ಮುಂದುವರೆಸಲಿದ್ದಾರೆ.
10. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಯುವ ವೇಗಿ ಆರ್ಶದೀಪ್ ಸಿಂಗ್ ಮೊದಲೆರಡು ಟಿ20 ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ತೋರಿ ಮಿಂಚಿದ್ದಾರೆ. ಯುವ ವೇಗಿ ಡೆತ್ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದ್ದಾರೆ.
11. ರವಿ ಬಿಷ್ಣೋಯಿ: ಎರಡನೇ ಪಂದ್ಯದಲ್ಲಿ ಬಿಷ್ಣೋಯಿ ಬದಲಿಗೆ ಆವೇಶ್ ಖಾನ್ ಕಣಕ್ಕಿಳಿದಿದ್ದರು. ಆದರೆ ಆವೇಶ್ ಖಾನ್ ಕೊಂಚ ದುಬಾರಿಯಾಗಿದ್ದರು. ಇದೀಗ ಮೂರನೇ ಪಂದ್ಯಕ್ಕೆ ಬಿಷ್ಣೋಯಿ ಸಂಪೂರ್ಣ ಫಿಟ್ ಆದರೆ ತಂಡಕೂಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.