ಜಡೆ ತಾಗಿಸಿದ್ರೆ ಕೂದಲು ಉದ್ದ ಆಗುತ್ತೆ ಅಂತ ನಂಬುವ ಈ ಹಾವಿನ ವಿಶೇಷತೆ ಏನು?

Published : Aug 10, 2024, 12:46 PM ISTUpdated : Aug 18, 2024, 10:17 AM IST

ಸಾಮಾನ್ಯವಾಗಿ ಇಂಡಿಯನ್ ಗ್ರೀನ್ ಪಿಟ್ ವೈಪರ್ ಜಾತಿಯ ಹಾವು ನಿತ್ಯಹರಿದ್ವರ್ಣ ಹಾಗೂ ಹುಲ್ಲುಗಾವಲಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ಹಾವು ನೋಡಲು ಸಂಪೂರ್ಣ ಹಸಿರು ಬಣ್ಣದಾಗಿರುತ್ತದೆ. ಕಂದು, ಕಿತ್ತಳೆ, ಹಳದಿ, ಚಾಕೊಲೇಟ್, ಕಂದು ಬಣ್ಣದಲ್ಲಿಯೂ ಇರುತ್ತದೆ.

PREV
18
ಜಡೆ ತಾಗಿಸಿದ್ರೆ ಕೂದಲು ಉದ್ದ ಆಗುತ್ತೆ ಅಂತ ನಂಬುವ ಈ ಹಾವಿನ ವಿಶೇಷತೆ ಏನು?

ಕರ್ನಾಟಕದ ಮಲೆನಾಡಿನ ಪ್ರದೇಶಗಳಲ್ಲಿ ಹಸಿರು ವೈಟ್ ವೈಪರ್ ಕಂಡು ಬರುತ್ತದೆ. ಒಂದು ರೀತಿ ಹಾವು ಮಂದಗತಿಯಲ್ಲಿರುವ ಕಾರಣ ಮಕ್ಕಳು ಸಹ ಇದಕ್ಕೆ ಹೆದರಲ್ಲ. ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಹಾವು ಕಾಣಿಸಿಕೊಳ್ಳುವದರಿಂದ ಇಲ್ಲಿಯ ಜನರು ಇದನ್ನು ಕಂಡ್ರೆ ಭಯಬೀಳಲ್ಲ.

28

ಇಂದು ಅರಣ್ಯ ಪ್ರದೇಶವನ್ನು ಮಾನವರು ಅತಿಕ್ರಮಣ ಮಾಡಿಕೊಳ್ಳುತ್ತಿರುವ ಕಾರಣ ವಸತಿ ಪ್ರದೇಶಗಳಲ್ಲಿಯೂ ಹಾವು ಕಂಡು ಬರುತ್ತದೆ. ಮನೆಯ ಪರಿಸರದಲ್ಲಿರುವ ಗಿಡ, ಹೂವಿನ ಕುಂಡದಲ್ಲಿಯೂ ಪಿಟ್ ವೈಪರ್‌ಗಳು ಕಂಡು ಬರುತ್ತವೆ.

38

ಇತ್ತೀಚೆಗೆ ಕಳಸ ಪಟ್ಟದ ಕಳಸೇಶ್ವರ ದೇಗುಲದ ಬಳಿ ಬ್ಯಾಂಬೋ ಪಿಟ್ ವೈಪರ್ ಕಂಡು ಬಂದಿತ್ತು. ಇದು ತಿಳಿ ಹಸಿರು ಬಣ್ಣವನ್ನು ಹೊಂದಿದ್ದು, ಬ್ಯಾಂಬೋ ರೀತಿ ನೀಳ ಉದ್ದ ಹೊಂದಿತ್ತು. ಈ  ಅಪರೂಪದ ಹಾವನ್ನ ಉರಗ ತಜ್ಞ ರಿಜ್ವಾನ್ ಸೆರೆ ಹಿಡಿದಿದ್ದರು.

48
ನೀರನ್ನು ದೇಹದಿಂದ ಹೀರಿಕೊಳ್ಳುವ ಹಾವು

ಇದೊಂದು ವಿಶೇಷ ಸರೀಸೃಪ ಕಚ್ಚಿದ್ರೆ ಸಾವು ಸಂಭವಿಸಲ್ಲ. ಈ ಹಾವು ಕಚ್ಚಿದರೆ ಪ್ರಜ್ಞೆ ತಪ್ಪುತ್ತಾರೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವು ಸಹ ಸಂಭವಿಸಬಹುದು. ಆದ್ದರಿಂದ ಎಚ್ಚರಿಕೆಯಿಂದಿರಬೇಕು ಎಂದು ರಿಜ್ವಾನ್ ಸಲಹೆ ನೀಡಿದ್ದರು. ಇನ್ನು ವಿಶೇಷವಂದ್ರೆ ತಲೆ ಮೇಲೆ ಬಿದ್ದ ನೀರನ್ನು ದೇಹದಿಂದ ಹೀರಿಕೊಳ್ಳುವ ಏಕೈಕ ಉರಗ ಇದಾಗಿದೆ.

58

ತಮ್ಮ ಬಣ್ಣದ ಸಹಾಯದಿಂದಲೇ ಹಸಿರು ಗಿಡಗಳಲ್ಲಿ ಈ ಹಾವು ಇದ್ದರೂ ಗುರುತಿಸಲು ಆಗಲ್ಲ. ಬಹುತೇಕರು ಹಸಿರು ಪ್ರದೇಶಗಳಲ್ಲಿಯೇ ವಾಸವಾಗಿದ್ದು, ಹಕ್ಕಿ, ಕಪ್ಪೆ ಮತ್ತು ಹಲ್ಲಿಗಳನ್ನು ಬೇಟೆಯಾಡುತ್ತವೆ. 

68
ವಿವಿಧ ಬಗೆಯ ಪಿಟ್ ವೈಪರ್

ಹಾರ್ಸ್‌ಶೂ ಪಿಟ್ ವೈಪರ್, ಗೂನು-ಮೂಗಿನ ಪಿಟ್ ವೈಪರ್, ಅಂಡಮಾನ್ ಪಿಟ್ ವೈಪರ್, ಮೆಡೋ ಪಿಟ್ ವೈಪರ್, ಪೋಪ್ಸ್ ಪಿಟ್ ವೈಪರ್, ಸಲಾಜರ್ಸ್ ಪಿಟ್ ವೈಪರ್, ಹಿಮಾಲಯನ್ ಪಿಟ್ ವೈಪರ್, ಕೆಂಪು ಬಾಲದ ಪಿಟ್ ವೈಪರ್ ಸೇರಿದಂತೆ 12 ಜಾತಿಗಳನ್ನು ಹೊಂದಿವೆ. ಬಣ್ಣ ಹಾಗೂ ಅವಳ ರಚನೆಯ ಮೇಲೆ ಪಿಟ್ ವೈಪರ್ ವಿಂಗಡನೆ ಮಾಡಲಾಗುತ್ತದೆ.

78

ಕೇರಳ, ನೀಲಗಿರಿ ಹಿಲ್ಸ್, ಅಂಡಮಾನ್ ನಿಕೋಬಾರ್, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಗಳಲ್ಲಿ ಕಂಡು ಬರುತ್ತವೆ. ಸುಮಾರು 16,000 ಅಡಿ ಎತ್ತರದ ಪ್ರದೇಶದಲ್ಲಿಯೂ ಹಿಮಾಲಯನ್ ಪಿಟ್ ವೈಪರ್‌ಗಳು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ, ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿಯೂ ಕಾಣಸಿಗುತ್ತವೆ.

88

ನಮ್ಮ ಕರ್ನಾಟಕ ಭಾಗದಲ್ಲಿ ಈ ಹಾವನ್ನು ಸ್ಪರ್ಶಿಸಿದ್ರೆ ಜಡೆ ಉದ್ದ ಆಗುತ್ತೆ ಎಂಬ ನಂಬಿಕೆಯಾಗಿದೆ. ಈ ಹಾವು ಕಾಣಿಸಿಕೊಂಡ್ರೆ ಮಹಿಳೆಯರು ತಮ್ಮ ಜಡೆಯ ತುದಿಯನ್ನು ಪಿಟ್‌ ವೈಪರ್‌ಗೆ ತಾಗಿಸುತ್ತಿದ್ದರು. ಈ ಮೂಢನಂಬಿಕೆ ಎಂದು ಉರಗ ತಜ್ಞರು ಹೇಳಿದ್ದಾರೆ.

click me!

Recommended Stories