ಬಾಹ್ಯಾಕಾಶದಲ್ಲಿ 'ಬೋನ್‌ ಲಾಸ್‌' ಸಂಕಷ್ಟಕ್ಕೆ ಈಡಾದ ಸುನೀತಾ ವಿಲಿಯಮ್ಸ್‌, ಗಗನಯಾತ್ರಿ ಭೂಮಿಗೆ ಬರೋದು ಯಾವಾಗ?

First Published | Aug 6, 2024, 5:32 PM IST

ಕೇವಲ 9 ದಿನಕ್ಕೆ ಮುಗಿಯಬೇಕಾಗಿದ್ದ ಬಾಹ್ಯಾಕಾಶ ಯಾನ 52 ದಿನವಾದರೂ ಮುಕ್ತಾಯವಾಗಿಲ್ಲ. ಸುನೀತಾ ವಿಲಿಯಮ್ಸ್‌ ಮರಳಿ ಭೂಮಿಗೆ ಬರಲು ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆಗಳೂ ಎದ್ದಿವೆ.
 

ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಯಿಂದಾಗಿ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ.
 

ಇತ್ತೀಚಿನ ವರದಿಗಳ ಪ್ರಕಾರ ಸುನಿತಾ ವಿಲಿಯಮ್ಸ್ ಬೋನ್‌ ಲಾಸ್‌ ಸಮಸ್ಯೆಗೆ ಒಳಗಾಗಿದ್ದಾರೆ. ಈ ಮುನ್ನ  ಅವರು ಜೂನ್‌ 14ರಂದು ಭೂಮಿಗೆ ವಾಪಸಾಗಬೇಕಿತ್ತು. ಬಳಿಕ ಜೂನ್‌ 26ಕ್ಕೆ ಅದು ಶಿಫ್ಟ್‌ ಆಗಿತ್ತು. ಈಗ ಅವರು ಭೂಮಿಗೆ ಮರಳುವ ದಿನಾಂಕ ಮತ್ತೆ ಮುಂದೂಡಿಕೆಯಾಗಬಹುದು ಎನ್ನಲಾಗಿದೆ.
 

Tap to resize

ಸ್ಟಾರ್‌ಲೈನರ್‌ ಗಗನನೌಕೆಯ ಸರ್ವೀಸ್‌ ಮಾಡ್ಯುಲ್‌ನಲ್ಲಿ ಹೀಲಿಯಂ ಸೋರಿಕೆಯ ಸಮಸ್ಯೆ ಆಗುತ್ತಿದೆ. ಬಾಹ್ಯಾಕಾಶ ನೌಕೆ ಕಾರ್ಯಾಚರಣೆಗಳಿಗೆ ಇದು ಪ್ರಮುಖ ವಿಚಾರವಾಗಿದೆ. ಈ ಕಾರಣಕ್ಕಾಗಿ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ವಿಲ್ಮೋರ್‌ ಹೆಚ್ಚಿನ ಕಾಲ ಐಎಸ್‌ಎಸ್‌ನಲ್ಲಿ ಉಳಿಯುವಂತಾಗಿದೆ.
 

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದೆ ಇರುವ ಕಾರಣ ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗಳನ್ನು ಹೋಲುವ ಸ್ನಾಯುವಿನ ದ್ರವ್ಯರಾಶಿ ಮತ್ತು ಮೂಳೆ ಸಾಂದ್ರತೆ ಎರಡರಲ್ಲೂ ದುರ್ಬಲತೆಗೆ ಇದು ಕಾರಣವಾಗುತ್ತದೆ.

ಸುನೀತಾ ವಿಲಿಯಮ್ಸ್ ಅವರಂತಹ ಗಗನಯಾತ್ರಿಗಳಿಗೆ, ಇದು ಕಾಳಜಿಯ ವಿಚಾರವಾಗಿದೆ. ಈ ಪರಿಣಾಮಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಕಠಿಣ ವ್ಯಾಯಾಮದ ನಿಯಮಗಳಿಗೆ ಬದ್ಧವಾಗಿದ್ದರೂ, ಬೋನ್‌ ಲಾಸ್‌ ದೀರ್ಘಕಾಲದ ಬಾಹ್ಯಾಕಾಶ ಕಾರ್ಯಾಚರಣೆಗಳ ಅನಿವಾರ್ಯ ಪರಿಣಾಮವಾಗಿದೆ.
 

ಮೈಕ್ರೋಗ್ರ್ಯಾವಿಟಿಯಲ್ಲಿ ಮೂಳೆಗಳನ್ನು ತೂಕವನ್ನು ಹೊರುವಷ್ಟು ಶಕ್ತವಾಗಿರುವುದಿಲ್ಲ. ಅವು ಭೂಮಿಯ ಮೇಲೆ ಅನುಭವಿಸುವ ಅದೇ ರೀತಿಯ ಒತ್ತಡಗಳಿಗೆ ಒಳಗಾಗದ ಕಾರಣ ಸಾಂದ್ರತೆಯನ್ನು ಕಳೆದುಕೊಳ್ಳುತ್ತವೆ.
 


ಬೋನ್‌ ಲಾಸ್‌ನಿಂದ ಬೋನ್‌ ಟಿಶ್ಯುಗಳು ತೆಳ್ಳಗೆ ಆಗುತ್ತದೆ. ಇದರಿಂದ ಮೂಳೆ ಮುರಿತ ಬೇಗ ಆಗುತ್ತದೆ. ಬಾಹ್ಯಾಕಾಶದಲ್ಲಿ ಅವಧಿಗಿಂತ ಹೆಚ್ಚಿನ ಕಾಲ ಇರುವ ಕಾರಣ ಸುನೀತಾ ವಿಲಿಯಮ್ಸ್‌ಗೆ ಈ ಸಮಸ್ಯೆ ಎದುರಾಗಬಹುದು ಎನ್ನಲಾಗುದೆ. ಭೂಮಿಯ ಮೇಲೆ ಮೂಳೆಯ ಬಲ ಇಳಿಕೆಯಾಗುವ ದುಪ್ಪಟ್ಟು ವೇಗದಲ್ಲಿ ಬಾಹ್ಯಾಕಾಶದಲ್ಲಿ ಮೂಳೆ ಬಲ ಕಳೆದುಕೊಳ್ಳುತ್ತದೆ.
 

Boeing Starliner

ಜೂನ್‌ 6 ರಂದು ಐಎಸ್‌ಎಸ್‌ ಸೇರಿಕೊಂಡ ಸ್ಟಾರ್‌ಲೈನರ್‌, ಜೂನ್‌ ಮಧ್ಯಭಾಗದಲ್ಲಿ ಭೂಮಿಗೆ ಮರಳಬೇಕಿತ್ತು. ಆದರೆ, ಸರ್ವೀಸ್‌ ಮಾಡ್ಯುಲ್‌ನಲ್ಲಿ ಹೀಲಿಯಂ ಲೀಕ್‌ಅನ್ನು ಪತ್ತೆ ಮಾಡಲಾಗಿದೆ. 
 

ಇದೇ ಕಾರಣಕ್ಕೆ ಬಾಹ್ಯಾಕಾಶ ಯಾನ ಕೂಡ ವಿಸ್ತರಣೆಯಾಗಿದೆ.  ಈ ತಾಂತ್ರಿಕ ಅಡಚಣೆಯು ಗಗನಯಾತ್ರಿಗಳ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಬಾಹ್ಯಾಕಾಶ ಪ್ರಯಾಣದ ಸಂಕೀರ್ಣತೆಗಳು ಮತ್ತು ಅನಿರೀಕ್ಷಿತ ಸವಾಲುಗಳನ್ನು ಎತ್ತಿ ತೋರಿಸಿದೆ.
 

ಮೈಕ್ರೊಗ್ರಾವಿಟಿ ಗಗನಯಾತ್ರಿಗಳಿಗೆ ಹಲವಾರು ಆರೋಗ್ಯ ಸವಾಲುಗಳನ್ನು ಒದಗಿಸುತ್ತದೆ, ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಉಳಿದಷ್ಟೂ ಇದು ಜಾಸ್ತಿ ಆಗುತ್ತದೆ. ಅತ್ಯಂತ ಮಹತ್ವದ ಸಮಸ್ಯೆಗಳೆಂದರೆ ಫ್ಲ್ಯೂಡ್‌ ರಿಡಿಸ್ಟ್ರಿಬ್ಯೂಷನ್‌, ಇದು ಮುಖದ ಪಫಿನೆಸ್ ಮತ್ತು ಕಾಲುಗಳಲ್ಲಿ  ಫ್ಲ್ಯೂಡ್‌  ಪ್ರಮಾಣ ಕಡಿಮೆ ಆಗುವ ಸಮಸ್ಯೆ ಆಗುತ್ತದೆ.
 

ಈ ಬದಲಾವಣೆಗಳು ಹೃದಯರಕ್ತನಾಳದ ಕಾರ್ಯವನ್ನು ಅಡ್ಡಿಪಡಿಸಬಹುದು ಮತ್ತು ಭೂಮಿಗೆ ಹಿಂದಿರುಗಿದ ನಂತರ ರಕ್ತದೊತ್ತಡ ನಿಯಂತ್ರಣವನ್ನು ಸಂಕೀರ್ಣಗೊಳಿಸಬಹುದು.

Sunita Williams

ಮೈಕ್ರೊಗ್ರಾವಿಟಿ ಮೂತ್ರಪಿಂಡದ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಫ್ಲ್ಯೂಡ್‌ ರಿಡಿಸ್ಟ್ರಿಬ್ಯೂಷನ್‌  ಮತ್ತು ಬದಲಾದ ಚಯಾಪಚಯವು ಮೂತ್ರದಲ್ಲಿನ ಕ್ಯಾಲ್ಸಿಯಂ ಮಟ್ಟಗಳ ಹೆಚ್ಚಳದಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

Latest Videos

click me!