ಭೂಮಿಗೆ ಕಳೆದ 20 ವರ್ಷಗಳಲ್ಲಿ ಅಪ್ಪಳಿಸಿದ ಅತಿದೊಡ್ಡ ಸೌರಮಾರುತ, 'ಬಣ್ಣಗಳಿಂದ ತುಂಬಿಕೊಂಡ ಆಕಾಶ'!

First Published | May 11, 2024, 5:32 PM IST


ಎರಡು ದಶಕಗಳಲ್ಲೇ ಭೂಮಿಗೆ ಅತ್ಯಂತ ದೊಡ್ಡದಾದ ಸೌರ ಮಾರುತ ಅಪ್ಪಳಿಸಿದೆ.  ಮೇ 10 ರಂದು ಜಗತ್ತಿನ ವಿವಿಧ ಭಾಗಗಳಲ್ಲಿ ಸೌರ ಮಾರುತದ ಚಿತ್ರಗಳು ದಾಖಲಾಗಿದ್ದು, ರಾತ್ರಿಯ ಆಕಾಶ ಬಣ್ಣಗಳಿಂದ ಚಿತ್ತಾರಗೊಂಡಿದೆ.
 

ವಿಶ್ವದ ಅತ್ಯಂತ ಶಕ್ತಿಶಾಲಿ ಸೌರ ಮಾರುತವು 20 ವರ್ಷಗಳ ನಂತರ ಶುಕ್ರವಾರ, ಮೇ 10 ರಂದು ಭೂಮಿಗೆ ಅಪ್ಪಳಿಸಿತು. ಸೋಲಾರ್‌ ಸ್ಟ್ರೋಮ್‌ನಿಂದಾಗಿ (solar storm ) ಟ್ಯಾಸ್ಮೆನಿಯಾದಿಂದ ಬ್ರಿಟನ್ ವರೆಗೆ ಆಕಾಶದಲ್ಲಿ ಬಲವಾದ ಮಿಂಚು ದಾಖಲಾಗಿದೆ.

ಅನೇಕ ಉಪಗ್ರಹಗಳು ಮತ್ತು ಪವರ್ ಗ್ರಿಡ್‌ಗಳಿಗೂ ಹಾನಿಯಾದ ವರದಿಗಳಿವೆ.ಸೌರ ಮಾರುತದಿಂದಾಗಿ ಪ್ರಪಂಚದ ಅನೇಕ ಸ್ಥಳಗಳಲ್ಲಿ ಅರೋರಾದ ಘಟನೆಗಳು ಸಹ ಕಂಡುಬರುತ್ತವೆ. ಈ ವೇಳೆ ಸೌರ ಮಾರುತದ ಕಾರಣದಿಂದ ಆಕಾಶವು ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಂಡಿತು.
 

Tap to resize

ಅಮೆರಿಕದ ವೈಜ್ಞಾನಿಕ ಸಂಸ್ಥೆ 'ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್' (NOAA) ಪ್ರಕಾರ, ಈ ಸೌರಮಾರುತದ ಪರಿಣಾಮವು ವಾರದ ಕೊನೆಯವರೆಗೂ ಇರುತ್ತದೆ.
 

ಇದನ್ನು ಮುಖ್ಯವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಕಾಣಬಹುದು. ಆದರೆ ಅದು ಬಲಿಷ್ಠವಾಗಿದ್ದರೆ ಬೇರೆ ಬೇರೆ ಕಡೆಗಳಲ್ಲಿ ಕಾಣಬಹುದು. ಪ್ರಪಂಚದಾದ್ಯಂತದ ಉಪಗ್ರಹ ನಿರ್ವಾಹಕರು, ಏರ್‌ಲೈನ್‌ಗಳು ಮತ್ತು ಪವರ್ ಗ್ರಿಡ್ ಆಪರೇಟರ್‌ಗಳು ಈ ಕುರಿತಾಗಿ ಅಲರ್ಟ್ ಆಗಿದ್ದಾರೆ.

ಸೌರ ಮಾರುತಕ್ಕೆ ಕಾರಣವೇನೆಂದರೆ, ಸೂರ್ಯನಿಂದ ಕರೋನಲ್ ಮಾಸ್ ಎಜೆಕ್ಷನ್. ವಾಸ್ತವವಾಗಿ, ಕರೋನಲ್ ಮಾಸ್ ಎಜೆಕ್ಷನ್ ಸಮಯದಲ್ಲಿ, ಸೂರ್ಯನಿಂದ ಬರುವ ಕಣಗಳು ಭೂಮಿಯ ಕಾಂತಕ್ಷೇತ್ರವನ್ನು ಪ್ರವೇಶಿಸುತ್ತವೆ.
 

ಕಣಗಳು ಭೂಮಿಗೆ ಪ್ರವೇಶಿಸಿದ ನಂತರ, ಪ್ರತಿಕ್ರಿಯೆ ಸಂಭವಿಸುತ್ತದೆ, ಅದರ ಕಾರಣದಿಂದಾಗಿ ಕಣಗಳು ಪ್ರಕಾಶಮಾನವಾದ ವರ್ಣರಂಜಿತ ದೀಪಗಳಾಗಿ ಗೋಚರಿಸುತ್ತವೆ. ಸರಳವಾಗಿ ಹೇಳುವುದಾದರೆ, ಕರೋನಲ್ ಮಾಸ್ ಎಜೆಕ್ಷನ್ ಎಂದರೆ ಸೂರ್ಯನ ಮೇಲ್ಮೈಯಿಂದ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಬಿಡುಗಡೆ.
 

ಸೌರ ಮಾರುತಗಳು ಭೂಮಿಯ ಮೇಲಿನ ಕಾಂತಕ್ಷೇತ್ರದ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಬಿರುಗಾಳಿಗಳಿಂದ ವಿದ್ಯುತ್ ಜಾಲ ಕೂಡ ಹಾಳಾಗುತ್ತದೆ. ಇದು ಭಾರತದ ಲಡಾಖ್‌ನಲ್ಲಿ ಕಾಣಿಸಿಕೊಂಡ ಸೌರಮಾರುತದ ದೃಶ್ಯ.
 

ಇದಲ್ಲದೆ, ವಿಮಾನಗಳಲ್ಲಿ ಟರರ್ಬುಲೆನ್ಸ್‌ ಸಮಸ್ಯೆ ಕೂಡ ಕಾಡುತ್ತದೆ. ಈ ಕಾರಣದಿಂದಾಗಿ, NASA ತನ್ನ ಗಗನಯಾತ್ರಿಗಳಿಗೆ ಸೌರಮಾರುತದ ಸಮಯದಲ್ಲಿ ಬಾಹ್ಯಾಕಾಶ ನಿಲ್ದಾಣದ ಒಳಗೆ ಉಳಿಯಲು ಸಲಹೆ ನೀಡುತ್ತದೆ.
 

ಈ ಸೌರ ಮಾರುತವು ಅಕ್ಟೋಬರ್ 2003 ರಲ್ಲಿ ಸಂಭವಿಸಿದ "ಹ್ಯಾಲೋವೀನ್ ಸ್ಟಾರ್ಮ್" ನಂತರ ಎರಡನೇ ಪ್ರಮುಖ ಸೌರ ಮಾರುತ ಎನಿಸಿದೆ. ಹ್ಯಾಲೋವೀನ್ ಸೌರಮಾರುತವು ಸ್ವೀಡನ್‌ ಸಂಪೂರ್ಣ ಕತ್ತಲು ಉಂಟುಮಾಡಿತು. ಸೌರಮಾರುತದಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಗ್ರಿಡ್‌ಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೆ ಈಡಾಗಿದ್ದವು.

ಇದೀಗ ವಿಜ್ಞಾನಿಗಳು ಕೂಡ ಈ ಸೌರ ಮಾರುತದ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಎಂಇ ಕಣಗಳು ಭೂಮಿಯನ್ನು ಸೇರಬಹುದು ಎಂದು ಹೇಳಿದ್ದಾರೆ. ಈವರೆಗಿನ  ಪ್ರಪಂಚದ ಅತ್ಯಂತ ಶಕ್ತಿಶಾಲಿ ಸೌರ ಮಾರುತದ ಬಗ್ಗೆ ಮಾತನಾಡುವುದಾದರೆ, ಅದು 1859 ರಲ್ಲಿ ಭೂಮಿಗೆ ಅಪ್ಪಳಿಸಿತು. ಅದರ ಹೆಸರು ಕ್ಯಾರಿಂಗ್ಟನ್ ಈವೆಂಟ್. ಈ ಚಂಡಮಾರುತದಿಂದಾಗಿ ಟೆಲಿಗ್ರಾಫ್ ಲೈನ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ವು. ಹಲವು ಟೆಲಿಗ್ರಾಫ್ ಲೈನ್‌ಗಳಿಗೂ ಬೆಂಕಿ ಹತ್ತಿಕೊಂಡಿತು.

Latest Videos

click me!