ಸೂರ್ಯನ ಮೇಲ್ಮೈನಲ್ಲಿ ಭೀಕರ ಸ್ಫೋಟ, ಸೋಮವಾರ ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರ ಬಿರುಗಾಳಿ

Published : Jun 07, 2026, 10:58 PM IST

ನಾಸಾ ಮಹತ್ವದ ಎಚ್ಚರಿಕೆ ನೀಡಿದೆ. ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಜೂನ್ 8 ರಂದು ಭೂಮಿಗೆ ಸೌರ ಬಿರುಗಾಳಿ ಅಪ್ಪಳಿಸಲಿದೆ. ಭಾರತದ ಕೆಲ ಪ್ರದೇಶಗಳಿಗೂ ಸೌರ ಕಾಂತೀಯ ಬಿರುಗಾಳಿ ಭೀತಿ  ಇದೆ ಎಂದು ನಾಸಾ ಮಹತ್ವದ ಎಚ್ಚರಿಕೆ ನೀಡಿದೆ.

PREV
16
ಸೂರ್ಯನ ಮೇಲ್ಮೈನಲ್ಲಿ ಭಾರಿ ಸ್ಫೋಟ

ಸೌರಮಂಡಲದಲ್ಲಿನ ಅಪರೂಪದ ವಿದ್ಯಮಾನದಿಂದ ಭೂಮಿಯಲ್ಲಿ ಕೆಲ ಮಹತ್ತರ ಬದಲಾವಣೆಗಳು ನಡೆಯಲಿದೆ ಎಂದು ನಾಸಾ ಹೇಳಿದೆ. ಸೂರ್ಯ ಮೇಲ್ಮೈನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಹೊರಹೊಮ್ಮಿದ ಸೌರಜ್ವಾಲೆ ಭೂಮಿಯತ್ತ ಧಾವಿಸುತ್ತಿದೆ ಎಂದು ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ.

26
ಜೂನ್ 8ಕ್ಕೆ ಭೂಮಿ ಅಪ್ಪಳಿಸುವ ಸಾಧ್ಯತೆ

ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ಜಿಯೋಮ್ಯಾಗ್ನೆಟಿಕ್ (ಭೂಕಾಂತೀಯ) ಬಿರುಗಾಳಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಜೂನ್ 8 ರ ಸೋಮವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದಿದೆ. ಭಾರತದ ಉತ್ತರ ಭಾಗ ಸೇರಿದಂತೆ ವಿಶ್ವದ ಹಲವೆಡೆ ಅಕಾಶದಲ್ಲಿ ಬೆಳಕಿನ ಚಿತ್ತಾರ, ಭೂಕಾಂತೀಯ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.

36
ಸೌರ ಮಂಡಲದಲ್ಲಿ ಭಾರಿ ಬದಲಾವಣೆ

ಸೂರ್ಯನ ಮೇಲ್ಮೈನಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚಿನ ಸ್ಫೋಟಗಳು ಸಂಭವಿಸಿದೆ. ಆದರೆ ಜೂನ್ 6ರಂದು ಸೂರ್ಯ ಮೇಲ್ಮೈನಲ್ಲಿ ಆಕ್ಟಿವ್ ರೀಜನ್ 4461' (Active Region 4461) ನಲ್ಲಿ ಪ್ರಬಲವಾದ M1.8 ಶ್ರೇಣಿಯ ಸ್ಫೋಟ ಸಂಭವಿಸಿದೆ.ಇದರಿಂದ ದಟ್ಟವಾದ ಕಾಂತಿಯ ಕಿರಣಗಳು, ಸೌರ ಕಣಗಳು ಮಿಂಚಿನ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ.

46
ಸೌರ ಬಿರುಗಾಳಿ ಭೂಮಿಗೆ ಅಪ್ಪಳಿಸಿದರೆ ಏನಾಗುತ್ತೆ?

ಭೂಮಿಗೆ ಅಪ್ಪಳಿಸುವಾಗ ಇದರ ವೇಗ ಸಾಮರ್ಥ್ಯ ಕುಗ್ಗಿದರೆ ಜಿ3 ಶ್ರೇಣಿಯ ಅಪ್ಪಳಿಕೆ ಸಾಧ್ಯತೆ ಇದೆ. ಆದರೆ ಪರಿಸ್ಥಿತಿ ಭಿನ್ನವಾದರೆ ಜಿ4 ಶ್ರೇಣಿ ಅಂದರೆ ಅತ್ಯಂತ ಬಲವಾದ ಮಟ್ಟಕ್ಕೆ ತಲುಪಲಿದೆ. ಈ ಸೌರ ಬಿರುಗಾಳಿಯಿಂದ ಉಪಗ್ರಹ ಸಂಪರ್ಕ, ಜಿಪಿಎಸ್, ಪವರ್ ಗ್ರಿಡ್ ಮೇಲೆ ಭಾರಿ ಪರಿಣಾಮ ಬೀರಲಿದೆ

56
ಆಗಸದಲ್ಲಿ ಬೆಳಕಿನ ಚಿತ್ತಾರ, ಬಣ್ಣ ಬದಲು

ಈ ಸೌರ ಬಿರುಗಾಳಿಯಿಂದ ಆಗಸದಲ್ಲಿ ಬೆಳಕಿನ ಚಿತ್ತಾರಗಳು ನಡೆಯುವ ಸಾಧ್ಯತೆ ಇದೆ. ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯುವ ಆಸಕ್ತರಿಗೆ ಅದ್ಭುತ ದೃಶ್ಯಗಳು ಸಿಗಲಿದೆ. ಆಗಸ ಹಲವು ಬಣ್ಣಗಳಿಗೆ ತಿರುಗುವು ಸಾಧ್ಯತೆ ಇದೆ ಎಂದು ನಾಸಾ ವಿಜ್ಞಾನಿ ಡಾ. ತಮಿತಾ ಸ್ಕೋವ್ ಹೇಳಿದ್ದಾರೆ.

66
ಭಾರತದ ಹಿಮಾಲಯ ಭಾಗದಲ್ಲಿ ಬಣ್ಣ ಬದಲು

ಭಾರತದ ಉತ್ತರ ಭಾಗದ ಹಿಮಾಲಯದ ಉನ್ನತ ಪ್ರದೇಶಗಳು, ಹಿಮಾಲಯ ಪರ್ವತ ಶ್ರೇಣಿಗಳು ಹಾಗೂ ಕೆಲ ಭಾಗಗಳಲ್ಲಿ ಆಗಸದ ಬಣ್ಣ ಬದಲಾಗಲಿದೆ. ಬೆಳಕಿನ ಚಿತ್ತಾರಗಳು ಮೂಡಲಿದೆ. ಇತ್ತ ಯೂರೋಪ್, ಆಸ್ಟ್ರೇಲಿಯಾದ ಆಗಸದಲಲ್ಲಿ ಹಲವು ಬಣ್ಣಗಳು ಮೂಡಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories