3I/ATLAS shock: ಬಾಬಾ ವಂಗಾ ಹೇಳಿದ್ದ ಏಲಿಯನ್ ಭವಿಷ್ಯ ನಿಜ ಆಗ್ತಿದೆಯಾ? ಭೂಮಿಯತ್ತ ದೌಡಾಯಿಸುತ್ತಿದೆ ವಿಚಿತ್ರ ವಸ್ತು!

Published : May 30, 2026, 11:32 AM IST

2026ರಲ್ಲಿ ಏಲಿಯನ್‌ಗಳೊಂದಿಗೆ ಮುಖಾಮುಖಿ ಸೇರಿದಂತೆ ಹಲವು ಜಾಗತಿಕ ಘಟನೆಗಳ ಬಗ್ಗೆ ಬಾಬಾ ವಂಗಾ ನೀಡಿದ್ದ ಭವಿಷ್ಯ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕೆ ಕಾರಣ, ಇತ್ತೀಚೆಗೆ ನಾಸಾ ಪತ್ತೆಹಚ್ಚಿರುವ 3I/ATLAS ಎಂಬ ನಿಗೂಢ ಬ್ಯಾಹ್ಯಾಕಾಶ ವಸ್ತು ಪತ್ತೆಯಾಗಿ.. ಇದರ ವಿಚಿತ್ರ ಲಕ್ಷಣಗಳ ಕಂಡು ನಾಸಾ ಬೆಚ್ಚಿಬಿತ್ತು!

PREV
15
ಅಯ್ಯೋ ಇದೇನಾ ಆ ಏಲಿಯನ್ ಸಿಗ್ನಲ್? ಬೆಚ್ಚಿಬಿದ್ದ ವಿಜ್ಞಾನಿಗಳು!

ಒಂದು ಕಡೆ ಬಾಬಾ ವಂಗಾ ಹೇಳಿದ್ದ ಭವಿಷ್ಯವಾಣಿಗಳು ಮತ್ತೆ ವೈರಲ್ ಆಗ್ತಿದ್ದರೆ, ಇನ್ನೊಂದು ಕಡೆ ಬಾಹ್ಯಾಕಾಶದಲ್ಲಿ ಪತ್ತೆಯಾಗಿರುವ 3I/ATLAS ಅನ್ನೋ ಈ ನಿಗೂಢ ವಸ್ತು ನಾಸಾ(NASA) ವಿಜ್ಞಾನಿಗಳ ತಲೆಬಿಸಿ ಮಾಡಿದೆ. ವಿಚಿತ್ರ ವಸ್ತು ಏನಪ್ಪಾ ಇದು ಅಂತ ವಿಜ್ಞಾನಿಗಳೇ ಗೊಂದಲಕ್ಕೆ ಬಿದ್ದಿದ್ದಾರೆ. ಇದುವರೆಗೆ ನೋಡಿರದ ರೀತಿಯಲ್ಲಿ ವರ್ತಿಸುತ್ತಿರುವ ಈ ವಸ್ತು, ಏಲಿಯನ್‌ಗಳ ತಂತ್ರಜ್ಞಾನ ಇರಬಹುದಾ? ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

25
3I/ATLAS:ಮ್ಯಾನ್‌ಹ್ಯಾಟನ್ ಗಿಂತ ದೊಡ್ಡದಿದೆ, ನಾಸಾ ಸೈಂಟಿಸ್ಟ್ ಶಾಕ್

ಹಾರ್ವರ್ಡ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞರೊಬ್ಬರು ಈ ವಸ್ತು ಸಹಜವಾಗಿ ರೂಪುಗೊಂಡ ಧೂಮಕೇತು ಅಥವಾ ಕ್ಷುದ್ರಗ್ರಹ ಅಲ್ಲ, ಬದಲಿಗೆ ಕೃತಕವಾಗಿ ನಿರ್ಮಿಸಲಾದ ಬಾಹ್ಯಾಕಾಶ ನೌಕೆಯಾಗಿರಬಹುದು ಎಂದು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು 33 ಬಿಲಿಯನ್ ಟನ್ ತೂಕವಿದ್ದು, ಮ್ಯಾನ್‌ಹ್ಯಾಟನ್ ನಗರದಷ್ಟು ದೊಡ್ಡದಿರುವ ಈ ವಸ್ತು ಏನನ್ನು ಹೊತ್ತು ತರುತ್ತಿದೆ ಎಂಬ ಪ್ರಶ್ನೆ ಈಗ ಸೈಂಟಿಸ್ಟ್‌ಗಳನ್ನಷ್ಟೇ ಅಲ್ಲ, ಜಗತ್ತನ್ನೇ ಕಾಡುತ್ತಿದೆ.

35
3I/ATLAS: ಧೂಮಕೇತು ಅಲ್ಲ... ಹಾಗಿದ್ರೆ ಏನಿದು? ವಿಚಿತ್ರ ರಾಸಾಯನಿಕ ಪತ್ತೆ!

3I/ATLAS: ಸಾಮಾನ್ಯವಾಗಿ ಧೂಮಕೇತುಗಳು ಹಿಂಭಾಗದಲ್ಲಿ ಬೆಳಕಿನ ಬಾಲ ಬಿಡುತ್ತವೆ. ಆದರೆ ಈ 3I/ATLAS ಮಾತ್ರ ಮುಂಭಾಗದಿಂದಲೇ ಬೆಳಕು ಹೊರಸೂಸುತ್ತಿರುವಂತೆ ಕಾಣುತ್ತಿದೆ. ಅಷ್ಟೇ ಅಲ್ಲ, ಇದರಿಂದ ಹೊರಬರುತ್ತಿರುವ ನಿಕಲ್ ಟೆಟ್ರಾಕಾರ್ಬೊನಿಲ್ ಎಂಬ ರಾಸಾಯನಿಕ ಸಂಯುಕ್ತವನ್ನು ಇದುವರೆಗೆ ಯಾವುದೇ ಧೂಮಕೇತು ಅಥವಾ ಕ್ಷುದ್ರಗ್ರಹದಲ್ಲಿ ಪತ್ತೆಹಚ್ಚಿರಲಿಲ್ಲ. ಈ ಒಂದು ಸಂಗತಿಯೇ ವಿಜ್ಞಾನಿಗಳನ್ನು ಮತ್ತಷ್ಟು ಅಚ್ಚರಿಗೆ ದೂಡಿದೆ.

45
ಡಿಸೆಂಬರ್ 19ಕ್ಕೆ ಭೂಮಿಗೆ ಹತ್ತಿರ... ಬಾಬಾ ವಂಗಾ ಭವಿಷ್ಯ ನಿಜವಾಗುತ್ತಾ?

ನಾಸಾ ಪ್ರಕಾರ, ಡಿಸೆಂಬರ್ 19ರಂದು ಈ ನಿಗೂಢ ವಸ್ತು ಭೂಮಿಗೆ ಅತ್ಯಂತ ಸಮೀಪ ಬರಲಿದೆ. ಆದರೆ ಸುಮಾರು 240 ಮಿಲಿಯನ್ ಕಿಲೋಮೀಟರ್ ದೂರದಲ್ಲೇ ಸಾಗಲಿರುವುದರಿಂದ ಯಾವುದೇ ಅಪಾಯವಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ.

55
2026 ಏಲಿಯನ್‌ಗಳೊಂದಿಗೆ ಮುಖಾಮುಖಿ?

ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ '2026ರಲ್ಲಿ ಏಲಿಯನ್‌ಗಳೊಂದಿಗೆ ಮುಖಾಮುಖಿ' ಎಂಬ ಬಾಬಾ ವಂಗಾ ಭವಿಷ್ಯ ಮತ್ತೆ ಟ್ರೆಂಡಿಂಗ್ ಆಗಿದೆ. ಹಾಗಿದ್ರೆ ನಿಜವಾಗಿಯೂ ಏನಾದರೂ ದೊಡ್ಡ ರಹಸ್ಯ ಭೂಮಿಯತ್ತ ಬರುತ್ತಿದೆಯಾ? ಅಥವಾ ಇದು ಕೇವಲ ವಿಜ್ಞಾನದ ಮತ್ತೊಂದು ಕುತೂಹಲಕಾರಿ ಅಧ್ಯಾಯನಾ? ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡತೊಡಗಿದೆ!

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories