ಹಿಮಾಲಯದ ಅಡಿಯಲ್ಲಿ ಅಡಗಿರೋದು ಏನು? ತಿಳಿದರೆ ಶಾಕ್ ಆಗುತ್ತೀರಿ

First Published | Oct 13, 2024, 8:29 AM IST

ಹಿಮಾಲಯಗಳು ವಿಶ್ವದ ಅತ್ಯಂತದ ದೊಡ್ಡ ಹಾಗೂ ಎತ್ತರದ ಶಿಖರ ಪರ್ವತಗಳಾಗಿವೆ. ಹಿಮಾಲಯದಲ್ಲಿ ಏನಿದೆ? ಅದರ ಕಳಗೆ ಏನಾದರೂ ಇದೆಯಾ ಎಂಬುದರ ಬಗ್ಗೆ ಸದಾ ಸಂಶೋಧನೆಗಳು ನಡೆಯುತ್ತಿರುತ್ತವೆ.

ಹಿಮಾಲಯ ತನ್ನೊಡಲೊಳಗೆ ಹಲವು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಈ ಕುರಿತು ನಿರಂತರವಾಗಿ ಅಧ್ಯಯನಗಳು ನಡೆಯುತ್ತಲೇ ಇರುತ್ತವೆ. ಹಿಮಾಲಯದಡಿಯಲ್ಲಿ ನೀರಿನ ಭಂಡಾರವೇ ಇದೆ ಎಂದು ಹೇಳಲಾಗುತ್ತದೆ. ಸಮುದ್ರದಿಂದಲೇ ಹಿಮಾಲಯಗಳ ಉದ್ಧವವಾಗಿದೆ ಎಂಬ ಮಾತುಗಳನ್ನು ಕೆಲ ಅಧ್ಯಯನಕಾರರು ವಿವರಿಸುತ್ತಾರೆ.

Mountain

ಹಿಮಾಲಯದ ಕೆಳಗೆ ದೈತ್ಯ ಮತ್ತು ವಿಶಾಲವಾದ ಸಮುದ್ರವಿತ್ತು. ಈ ಸಮುದ್ರವನ್ನು ಟೆಥಿಸ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಟೆಕ್ಟೊನಿಕ್ ಪ್ಲೆಟೋಂ ಕಾರಣದಿಂದ ಸಮುದ್ರ ತನ್ನ ಅಸ್ತಿತ್ವ ಕಳೆದುಕೊಂಡಿತು. ನಂತರ ಹಂತ ಹಂತವಾಗಿ ಹಿಮಾಲಯ ಪರ್ವತಗಳಾಗಿ ಬೆಳೆದಿದೆ ಎಂದು ಕೆಲ ಹವಾಮಾನ ತಜ್ಞರು ಹೇಳುತ್ತಾರೆ.

Tap to resize

himalaya.j

ಕೆಲ ಸಂಶೋಧಕರ ಪ್ರಕಾರ, ಹಿಮಾಲಯದ ಅಡಿಯಲ್ಲಿ ಇಂದಿಗೂ ಸಮದ್ರ ಜೀವಂತವಾಗಿದೆ. ಸಮುದ್ರ ಜೀವಿಗಳ ಪಳೆಯುಳಿಕೆಗಳು ಹಿಮಾಲಯ ಪರ್ವತಗಳಲ್ಲಿ ಕಂಡುಬರುತ್ತವೆ. ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಸಮುದ್ರ ಇತ್ತು ಎಂಬುದಕ್ಕೆ ಜಲಚರ ಜೀವಿಗಳ ಪಳಿಯುಳಿಕೆ ಅಥವಾ ಕಳೆಬರವೇ ಸಾಕ್ಷಿಯಾಗಿದೆ ಎಂದು ತಮ್ಮ ವಾದವನ್ನು ಮಂಡಿಸುತ್ತಾರೆ.

ಇಷ್ಟು ಮಾತ್ರವಲ್ಲದೇ  ಹಿಮಾಲಯದ ಭೂವೈಜ್ಞಾನಿಕ ರಚನೆಯು ಇಲ್ಲಿ ಸಮುದ್ರವಿತ್ತು ಎಂಬುದನ್ನು ಸೂಚಿಸುತ್ತದೆ. ಹಿಮಾಲಯ ಭಾಗದಲ್ಲಿ ಈ ಬಗ್ಗೆ ಹಲವು ದಂತಕಥೆಗಳಿವೆ. ಈ ಕಥೆಗಳಲ್ಲಿಯೂ ಸಮುದ್ರ ಅಸ್ತಿತ್ವ ಕಳೆದುಕೊಂಡ ನಂತರ ಹಿಮಾಲಯ ಹುಟ್ಟಿದೆ ಎಂಬ ಮಾಹಿತಿ ಉಲ್ಲೇಖವಿದೆ.

ಹಿಮಾಲಯದ ಕೆಳಗೆ ಟೆಥಿಸ್ ಸಮುದ್ರವಿದೆ ಎಂಬುದನ್ನು ಹಲವರು ತಮ್ಮ ಅಧ್ಯಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಗೊಂಡ್ವಾನಾ ಲ್ಯಾಂಡ್ ಮತ್ತು ಲಾರೇಷಿಯಾ ಟೆಥಿಸ್ ಸಮುದ್ರವಿದ್ದು, ಆದರೆ ಇದು ಹೆಚ್ಚು ಆಳವನ್ನು ಹೊಂದಿಲ್ಲ ಎಂದು ಹೇಳಲಾಗುತ್ತದೆ. ಟೆಥಿಸ್ ಸಮುದ್ರವು ಸುಮಾರು 225 ಮಿಲಿಯನ್ ವರ್ಷಗಳ ಹಿಂದೆ ಭಾರತವನ್ನು ಏಷ್ಯಾದಿಂದ ಬೇರ್ಪಡಿಸಿತ್ತು ಎಂದು ಹೇಳಲಾಗುತ್ತದೆ. ಭಾರತೀಯ ಫಲಕವು ಏಷ್ಯನ್ ಪ್ಲೇಟ್ನೊಂದಿಗೆ ಡಿಕ್ಕಿಹೊಡೆದ ಕಾರಣ ಟೆಥಿಸ್ ಸಮುದ್ರ ಹಿಮದಿಂದ ಮುಚ್ಚಲ್ಪಟ್ಟಿದೆಯಂತೆ.

Latest Videos

click me!