ಚಂದ್ರನ ಮೇಲೆ ನಾಸಾ ಕಾಲಿಟ್ಟಿದ್ದು ನಿಜಾನಾ?; ಇಲ್ಲಿದೆ ಸಾಕ್ಷಿ..!

First Published | Sep 4, 2023, 9:00 AM IST

ನಮ್ಮ ಹೆಮ್ಮೆಯ ಚಂದ್ರಯಾನ 3 ಯಶಸ್ಸನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದರ ನಡುವೆ  ಅಮೆರಿಕಾದ ನಾಸಾದ ಚಂದ್ರಯಾನ ಸುಳ್ಳು ಎಂದು ಚರ್ಚೆ ಶುರುವಾಗಿದೆ. ಆದರೆ ಇದು ಎಷ್ಟು ನಿಜ? ಸುಳ್ಳಾಗಿದ್ದರೆ ಇಷ್ಟು ದಿನ ಸತ್ಯ ಹೊರ ಬರದೇ ಇರುತ್ತಿತ್ತಾ? ಈ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.

ಚಂದ್ರನ ಮೇಲೆ ಅಮೆರಿಕದ ಬಾವುಟ ಹಾರಾಟ ಹೇಗೆ ಸಾಧ್ಯ?

ಚಂದ್ರನ ಮೇಲೆ ಅಮೆರಿಕ ಬಾವುಟ ಹಾರಾಟದ ಚಿತ್ರವನ್ನು ನೀವು ನೋಡಿರಬಹುದು. ಆದರೆ ಚಂದ್ರನ ವಾತಾವರಣದಲ್ಲಿ ಗಾಳಿನೇ ಇಲ್ಲ. ಹಾಗಾಗಿ ಅಲ್ಲಿ ಯಾವುದೇ ಚಲನೆ ಆಗೋಕೆ ಸಾಧ್ಯ ಇಲ್ಲ. ಹೀಗಿರಬೇಕಾದರೆ ಚಂದ್ರನ ಮೇಲೆ ಬಾವುಟ ಹೇಗೆ ಹಾರಡಿತು ಎಂಬುದು ಹಲವರ ಪ್ರಶ್ನೆ. ಆದರೆ ಚಂದ್ರನ ಮೇಲೆ ಬಾವುಟ ಹಾರಡಿಲ್ಲ ಎಂದು ನಾಸಾ ಹೇಳಿದೆ. ಬಾವುಟವನ್ನು ಭೂಮಿಯಿಂದ ತೆಗೆದುಕೊಂಡು ಹೋಗುವಾಗ ಮುದುರಿ ಹೋಗಿತ್ತು. ಅಲ್ಲಿ ಚಾಲನೆ ಸಾಧ್ಯವಾಗದ ಕಾರಣ, ಅದು ಹೇಗೆ ಮುದುರಿದಿಯೋ ಅಲ್ಲಿ ಅದೇ ರೀತಿ ಕಂಡಿದೆ.

ಚಂದ್ರನ ಮೇಲೆ ಹೆಜ್ಜೆ ಗುರುತು ಮೂಡಿದ್ದು ನಿಜಾನಾ?

ಚಂದ್ರನ ಮೇಲೆ ಗಗನ ಯಾತ್ರಿಗಳ ಹೆಜ್ಜೆ ಮೂಡಿದ ಫೋಟೋ ನೀವು ನೋಡಿರಬಹುದು. ಚಂದ್ರನ ಮೇಲೆ ಯಾವುದೆ ತೇವಾಂಶವಿಲ್ಲ. ಗಗನಯಾತ್ರಿಗಳು ಚಂದ್ರಯಾನಕ್ಕೆ ಹೋದ ಸಂದರ್ಭದಲ್ಲಿ ಅವರು ಚಂದ್ರನ ಮೇಲೆ ಹೋದಾಗ ಅಲ್ಲಿ ಮೂಡಿದಂತಹ ಪಾದದ ಗುರುತುಗಳು ಸ್ಪಷ್ಟವಾಗಿ ಬೀಳಲು ಸಾಧ್ಯನಾ ಎನ್ನುವ ಗೊಂದಲಕ್ಕೆ ಜನರು ಒಳಗಾಗಿದ್ದಾರೆ. ಇದಕ್ಕೆ ನಾಸಾ ವಿಜ್ಞಾನಿಗಳು ಅಲ್ಲಿ ಬೂದು ಬಣ್ಣದ ಮಣ್ಣು ಇದೆ. ಹಾಗಾಗಿ ಕಾಲು ಇಟ್ಟಾಗ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ ಎಂದು ನಾಸಾ ಹೇಳಿದೆ.

Tap to resize

ನಾಸಾ ತೆಗೆದ ಫೋಟೋದಲ್ಲಿ ನಕ್ಷತ್ರಗಳು ಏಕೆ ಇಲ್ಲ..?

ಅಮೆರಿಕದ ಚಂದ್ರನ ಬಳಿ ಹೋಗಿದ್ದರೆ ಅಲ್ಲಿ ನಕ್ಷತ್ರಗಳು ಕಾಣಿಸಬೇಕು. ಆದರೆ ಅವು ಎಲ್ಲಿ ಹೋದವು ಎಂಬುದು ಹಲವರ ವಾದ. ನಾಸಾ ತೆಗೆದ ಒಂದು ಫೋಟೋದಲ್ಲಿಯೂ ಕೂಡ, ನಕ್ಷತ್ರ ಕಾಣಲ್ಲ. ಅಲ್ಲಿ ಫೋಟೋ ತೆಗೆದಾಗ ಹಗಲು ಇತ್ತು. ಹಾಗಾಗಿ ಅಲ್ಲಿ ನಕ್ಷತ್ರಗಳು ಕಂಡಿರಲಿಲ್ಲ ಎಂದು ಅಮೆರಿಕ ಹೇಳಿದೆ. ಬದಲಾಗಿ ಈಗಿರುವ ಹಾಗೆ ಮೊದಲು ಟೆಕ್ನಾಲಜಿ ಫಾಸ್ಟ್ ಇರಲಿಲ್ಲ. ಕ್ಯಾಮೆರಾ ಕ್ಲಿಯರ್ ಆಗಿರದ ಕಾರಣ, ನಕ್ಷತ್ರಗಳು ಕಾಣದೆ ಕೂಡ ಇರಬಹುದು‌‌. ಚಂದ್ರನಲ್ಲಿ ಮಾನವ ಮೊದಲ ಹೆಜ್ಜೆಯಿಟ್ಟಿರುವುದನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಲೂನಾರ್  ಕ್ಯಾಮೆರಾ ಸೆರೆಹಿಡಿಯಲಾಗಿತ್ತು.

ಅನುಮಾನಕ್ಕೆ ಉತ್ತರ ಕೊಟ್ಟ ಯುಎಸ್

1969 ರಲ್ಲಿ ಅಮೆರಿಕ ಮಾನವನನ್ನು ಚಂದ್ರನ ಅಂಗಳಕ್ಕೆ ಕಳುಹಿಸಿತ್ತು. ಆದರೆ ಅಮೆರಿಕ ಈ ಬಗ್ಗೆ ಸುಳ್ಳು ಹೇಳುತ್ತಿದೆ ಎಂಬ ಅಪವಾದಗಳೂ ಕೇಳಿಬಂದಿದ್ದವು. ಆದರೆ ಅಪೋಲೋ ಸರಣಿಯ 6 ಲ್ಯೂನಾರ್ ಮಾಡ್ಯೂಲ್‌ಗಳು ಚಂದ್ರನ ಮೇಲೆ ಇಳಿದ ಗುರುತುಗಳು, ಅವರು ಚಂದ್ರನ ಮೇಲೆ ನೆಟ್ಟ ಧ್ವಜ, ಗಗನಯಾತ್ರಿಗಳ ಹೆಜ್ಜೆ ಗುರುತು ಎಲ್ಲವನ್ನೂ 2009 ರಲ್ಲಿ ನಾಸಾ ಕಳುಹಿಸಿದ ಆರ್ಬಿಟರ್ ಉಪಗ್ರಹ ತೆಗೆದ ಹೈ ಡೆಫಿನಿಶನ್ ಫೋಟೋಗಳು ಸ್ಪಷ್ಟವಾಗಿ ದಾಖಲಿಸಿವೆ. ಇದರ ನಡುವೆ ಇದು ಸುಳ್ಳು ಆಗಿದ್ದರೆ ಮೊದಲಿನಿಂದಲೂ ಈ ವಿಚಾರವಾಗಿ ಅಮೆರಿಕಾಗೆ ಪೈಪೋಟಿ ನೀಡುತ್ತಿದ್ದ ರಷ್ಯಾ ಸುಮ್ಮನೆ ಬಿಡುತ್ತಿತ್ತಾ ? ಈ ವಿಚಾರವನ್ನು ಎಂದೋ ಬಯಲಿಗೆ ಎಳೆಯುತ್ತಿತ್ತು.

Latest Videos

click me!