ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ, ಮತ್ತು ಪ್ರತಿ ಹೊಸ ಪ್ರಗತಿಯೊಂದಿಗೆ, ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದ ಕೆಲಸಗಳನ್ನು ನಾವು ಮಾಡಲು ಸಾಧ್ಯವಾಗುತ್ತದೆ. ಪ್ರತಿ ಉದಯವು ಈ ಜಗತ್ತಿಗೆ ಹೊಸದನ್ನು ತರುತ್ತದೆ. ಜಗತ್ತಿಗೆ ಹೊಸ ಸಂಶೋಧನೆ ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ನಾಸಾ, ಹಿಂದೊಮ್ಮೆ ಬಾಹ್ಯಾಕಾಶದಲ್ಲಿ ಹೂ ಅರಳಿದ್ದ ಚಿತ್ರವನ್ನು ಪ್ರಕಟಿಸಿತ್ತು.
2016ರಲ್ಲಿ ಪ್ರಕಟ ಮಾಡಿದ್ದ ಒಂದು ಚಿತ್ರ ಇಡೀ ವಿಶ್ವವನ್ನೇ ಅಚ್ಚರಿಗೆ ನೂಕಿತ್ತು. ಯಾಕೆಂದರೆ, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿತ್ತು.
ನಾಸಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿತ್ತು. ಈ ಫೋಟೋ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಹೂವಿನಾದ ಆರೆಂಜ್ ಜಿನ್ನಿಯಾದ ಕ್ಲೋಸ್‌ಅಪ್ ಫೋಟೋ ಆಗಿತ್ತು. ಹೂವಿನ ಹಿನ್ನಲೆಯಲ್ಲಿ ಭೂಮಿಯನ್ನು ಕಾಣಬಹುದಾಗಿತ್ತು. ಈ ಹೂವಿನ ಬೆಳವಣಿಗೆಯು VEG-01 ಪ್ರಯೋಗದ ಒಂದು ಭಾಗವಾಗಿದೆ ಎಂದು ನಾಸಾ ತಿಳಿಸಿತ್ತು.
ಹೂವು ಬೆಳೆಸಿದ್ದರ ಹಿಂದೆ ಕಾರಣವೂ ಇತ್ತು. ಐಎಸ್‌ಎಸ್‌ನಲ್ಲಿನ ವೆಗ್ಗ-01 ಸೌಲಭ್ಯದ ಕಕ್ಷೆಯ ಮೇಲಿನ ಕಾರ್ಯಾಚರಣೆ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ಮೊಳಕೆ ಬೆಳವಣಿಗೆ ಹೇಗಾಗುತ್ತದೆ, ಜೊತೆಗೆ ಸಸ್ಯಗಳು ಮತ್ತು ಸೌಲಭ್ಯದ ಮೇಲಿನ ಸೂಕ್ಷ್ಮಜೀವಿಯ ಸಸ್ಯವರ್ಗದ ಸಂಯೋಜನೆಯನ್ನು ಕೇಂದ್ರೀಕರಿಸಿತ್ತು. ಜಿನ್ನಿಯಾಗಳನ್ನು 60 ದಿನಗಳವರೆಗೆ ಬೆಳೆಸಲಾಯಿತು ಮತ್ತು ಈ ಅವಧಿಯಲ್ಲಿ ಹಲವು ಹೂವುಗಳು ಅರಳಿದ್ದವು.
"ಈ ಜಿನ್ನಿಯಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವೆಗ್ಗಿ ಸೌಲಭ್ಯದ ಭಾಗವಾಗಿ ಕಕ್ಷೆಯಲ್ಲಿ ಬೆಳೆಸಲಾಯಿತು" ಎಂದು ನಾಸಾ ತಿಳಿಸಿತ್ತು. ವಿಜ್ಞಾನಿಗಳು 1970 ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಟ ಪ್ರಯೋಗವನ್ನು 2015 ರಲ್ಲಿ ನಾಸಾ ಗಗನಯಾತ್ರಿ ಕೆಜೆಲ್ ಲಿಂಡ್‌ಗ್ರೆನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಾರಂಭಿಸಿದರು.
ಬಗೆಬಗೆಯ ಊಟವಿದ್ರೂ ಜಾಸ್ತಿ ತಿನ್ನೋಕ್ಕಾಗಲ್ಲ, ಬಾಹ್ಯಾಕಾಶದಲ್ಲಿ ಸುನೀತಾ ಏನು ಆಹಾರ ತಿಂತಿದ್ರು?
ನಮ್ಮ ಬಾಹ್ಯಾಕಾಶ ಉದ್ಯಾನವು ಕೇವಲ ಪ್ರದರ್ಶನಕ್ಕಾಗಿ ಅಲ್ಲ: ಸಸ್ಯಗಳು ಕಕ್ಷೆಯಲ್ಲಿ ಹೇಗೆ ಬೆಳೆಯುತ್ತವೆ ಎಂಬುದನ್ನು ಕಲಿಯುವುದು ಭೂಮಿಯಿಂದ ಹೊರಗೆ ಬೆಳೆಗಳನ್ನು ಹೇಗೆ ಬೆಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಚಂದ್ರ, ಮಂಗಳ ಮತ್ತು ಅದರಾಚೆಗೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ತಾಜಾ ಆಹಾರದ ಅಮೂಲ್ಯ ಮೂಲವನ್ನು ಒದಗಿಸುತ್ತದೆ." ಎಂದು ನಾಸಾ ತಿಳಿಸಿತ್ತು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಗಗನಯಾತ್ರಿಗಳು ಟೊಮೆಟೊ, ಲೆಟಿಸ್ ಮತ್ತು ಇತರ ಕೆಲವು ತರಕಾರಿಗಳನ್ನು ಸಹ ಬೆಳೆದಿದ್ದಾರೆ.
Sunita Williams: 5476 ಬಾರಿ ಭೂಮಿಗೆ ಸುತ್ತು, 121 ದಶಲಕ್ಷ ಮೈಲಿ ಪ್ರಯಾಣ, ಬೆಂಕಿಯುಂಡೆಯಲ್ಲಿ ಬಂದ ಸುನಿತಾ ಸಾಮಾನ್ಯಳಲ್ಲ!