ಕೊರೋನಾಕ್ಕೆ ಲಸಿಕೆ, ಅಚ್ಚರಿ ಮಾಹಿತಿ ನೀಡಿದ ಭಾರತೀಯ ವಿಜ್ಞಾನಿ

First Published | Jun 2, 2020, 3:12 PM IST

ನವದೆಹಲಿ(ಜೂ. 02) ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಕೆಲಸ ಜಾರಿಯಲ್ಲಿದೆ. ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ಒಂದು ತಿಂಗಳು ಬಹಳ ಪ್ರಮುಖ ಎಂದು ಭಾರತ್ ಬಯೋಟೆಕ್ ನ  ಚೀಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಕೃಷ್ಣ ಮೋಹನ್ ಎಲ್ಲಾ ತಿಳಿಸಿದ್ದಾರೆ. 

ಕೊರೋನಾಕ್ಕೆ ಲಸಿಕೆ ಕಂಡುಹಿಡಿಯುವ ಕೆಲಸ ಎಲ್ಲಿಗೆ ಬಂತು? ಇದು ಎಲ್ಲರ ಮುಂದೆ ಇರುವ ಪ್ರಶ್ನೆ. ಅದಕ್ಕೆ ಉತ್ತರ ಎಂಬಂತೆ ಭಾರತೀಯ ವಿಜ್ಞಾನಿಯೊಬ್ಬರು ಅಚ್ಚರಿ ಮಾಹಿತಿ ನೀಡಿದ್ದಾರೆ.
ಯುಎಸ್‌ ಎಯ ವಿಸ್ಕಾಸನ್ಯುನಿವರ್ಸಿಟಿ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ರಿರ್ಸಚ್ ಮತ್ತು ಥಾಮಸ್ ಜಫರ್ ಸನ್ ಯುನಿವರ್ಸಿಟಿ ಫಿಲಿಡಲ್ಫಿಯಾದ ಸಂಯೋಜನೆಯಲ್ಲಿ ಲಸಿಕೆ ತಯಾರು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Tap to resize

ನಾನೊಬ್ಬ ವಿಜ್ಞಾನಿಯಾಗಿ ವಿಜ್ಞಾನದಲ್ಲಿ ನಂಬಿಕೆಯಿಟ್ಟು ಹೇಳುತ್ತಿದ್ದೇನೆ. ಮುಂದಿನ ತಿಂಗಳಿನಲ್ಲಿ ಒಂದು ಪಾಸಿಟಿವ್ ರಿಸಲ್ಟ್ ಬರಲಿದೆ ಎಂದು ಕೃಷ್ಣ ಮೋಹನ್ ಹೇಳಿದ್ದಾರೆ.
ಯಾರೂ ಏನೇ ಹೇಳಿದರೂ ನಮ್ಮ ಕಂಪನಿ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. 60 ಮಿಲಿಯನ್ ಲಸಿಕೆ ತಯಾರು ಮಾಡುವ ಗುರಿ ಹೊಂದಿದೆ. ವಿಜ್ಞಾನದ ರೀತಿ ಯೋಚನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪಾಸಿಟಿವ್ ದಿಕ್ಕಿನಲ್ಲಿ ಸಾಗದೆ ಇದ್ದಿದ್ದರೆ ನಾನು ಈ ಮಾತುಗಳನ್ನು ಆಡುತ್ತಲೇ ಇರಲಿಲ್ಲ. ನಂಬರ್ ಗಳನ್ನು ಈ ಸಂದರ್ಭದಲ್ಲಿ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮನುಷ್ಯರ ಮೇಲೆ ಲಸಿಕೆ ಪ್ರಯೋಗ ಮಾಡಲು ಕನಿಷ್ಠ ಆರು ತಿಂಗಳು ಬೇಕೆಂದು ಐಸಿಎಂಆರ್ ಹೇಳಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ವಿಜ್ಞಾನಿ, ನಾವು ವಿಜ್ಞಾನದೊಂದಿಗೆ ಸಾಗಬೇಕು, ಮಾನವರ ಮೇಲೆ ಪ್ರಯೋಗಕ್ಕೆ ಸಂಬಂಧಿಸಿ ಈಗ ಯಾವ ಕಮೆಂಟ್ ಮಾಡಲಾರೆ ಎಂದು ಹೇಳಿದರು.
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದು ಲಕ್ಷದ ತೊಂಭತ್ತು ಸಾವಿರ ಗಡಿ ದಾಟಿದೆ. ದಿನವೊಂದಕ್ಕೆ ಎಂಟರಿಂದ ಹತ್ತು ಸಾವಿರ ಪಾಸಿಟಿವ್ ಕೇಸುಗಳು ದಾಖಲಾಗುತ್ತಿವೆ. ಕೊರೋನಾ ದುಷ್ಪರಿಣಾಮ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೇ ಇದೀಗ ಏಳನೇ ಸ್ಥಾನ!
ಕೊರೋನಾ ವೈರಸ್ ಲಸಿಕೆ ಬಗ್ಗೆ ಪಾಸಿಟಿವ್ ಮಾಹಿತಿ ನೀಡಿದ ವಿಜ್ಞಾನಿ

Latest Videos

click me!