ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನ ಕಂಗಾಲಾಗಿದೆ. ಇದೀಗ ಇಸ್ರೋ ಪಾಕಿಸ್ತಾನದ ತಲೆನೋವು ಹೆಚ್ಚಿಸಿದೆ. ಇಸ್ರೋ ಇದೀಗ ಉಡಾವಣೆ ಮಾಡುತ್ತಿರುವ ಉಪಗ್ರಹ ಭಾರತದ ಗಡಿಯನ್ನೂ ಹಗಲು ರಾತ್ರಿ ಹದ್ದಿನ ಕಣ್ಣಿಟ್ಟು ಚಲನವಲನಗಳ ಮಾಹಿತಿ ನೀಡಲಿದೆ. ಭದ್ರತೆ ವಿಚಾರದಲ್ಲಿ ಈ ಉಪಗ್ರಹ ಅತ್ಯಂತ ಮಹತ್ವದ್ದಾಗಿದೆ.
PSLV (ಧ್ರುವ ಉಪಗ್ರಹ ಉಡಾವಣಾ ವಾಹನ) ಭಾನುವಾರ ಬೆಳಿಗ್ಗೆ 5:59 ಕ್ಕೆ EOS-09 ಉಡಾವಣೆ ಮಾಡಲಿದೆ. EOS-09 C-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಹೊಂದಿದೆ. ಇದು ಎಲ್ಲಾ ಹವಾಮಾನಗಳಲ್ಲೂ ಹಗಲು ಮತ್ತು ರಾತ್ರಿ ಭೂಮಿಯ ಮೇಲ್ಮೈಯ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯುತ್ತದೆ. ಆಕಾಶದಲ್ಲಿ ಮೋಡಗಳು ಇದ್ದರೂ, ವ್ಯತಿರಿಕ್ತ ಹವಾಮಾನ ಇದ್ದರೂ ಭೂಮಿಯ ಗಡಿಯಲ್ಲಿನ ಚಲನವಲನಗಳನ್ನು ಸ್ಪಷ್ಟವಾಗಿ ಗುರುತಿಸಲಿದೆ.