ಆಕಾಶಗಂಗೆಯ ಅದ್ಭುತ ದೃಶ್ಯ ಸೆರೆ ಹಿಡಿದ ಯೂಕ್ಲಿಡ್ ಟೆಲಿಸ್ಕೋಪ್, 6 ಕೋಟಿ ಅಧಿಕ ನಕ್ಷತ್ರಗಳ ನಿಗೂಢ ಲೋಕ

Published : Jun 26, 2026, 03:18 PM IST

ಬಾಹ್ಯಕಾಶ ದಿಟ್ಟಿಸಿ ನೋಡಿದರೆ ಪ್ರತಿ ಬಾರಿಯೂ ಕುತೂಹಲಕರ ಅಂಶಗಳು ಗೋಚರಿಸುತ್ತದೆ. ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಹೆಮ್ಮೆಯ ಆಕಾಶಗಂಗೆಯ (Milky Way) ರಹಸ್ಯ ಲೋಕವನ್ನು ತೆರೆದಿಡಲಾಗಿದೆ. 

PREV
14
6 ಕೋಟಿಗೂ ಅಧಿಕ ನಕ್ಷತ್ರಗಳ ಲೋಕ

ಮಿಲ್ಕೆ ವೇ ಎಂದೇ ಗುರುತಿಸಿಕೊಂಡಿರು ಅಕಾಶಗಂಗೆಯ ಅದ್ಭುತ ಲೋಕ ಅನಾವರಣಗೊಂಡಿದೆ. ಯೂಕ್ಲಿಡ್ ಟೆಲಿಸ್ಕೋಪ್ ಮೂಲಕ ಅದ್ಭುತ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಟೆಲಿಸ್ಕೋಪ್ ಮೂಲಕ ಅಕಾಶಗಂಗೆಯ ಗ್ಯಾಲಕ್ಚಟಿಕ್ ಬಲ್ಜ್ (Galactic Bulge) ಅಧ್ಯಯನ ಮಾಡಲಾಗಿದೆ. ವಿಶೇಷ ಅಂದರೆ ಬರೋಬ್ಬರಿ 6 ಕೋಟಿಗೂ ಅಧಿಕ ನಕ್ಷತ್ರಗಳು, ನಕ್ಷತ್ರ ಪುಂಜಗಳನ್ನು ಒಳಗೊಂಡ ಅದ್ಭುತ ಚಿತ್ರಣವನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.

24
26 ಗಂಟೆ ಫೋಟೋ ಕ್ಲಿಕ್

ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ವಸ್ತುಗಳ, ಶಕ್ತಿಗಳ ಅಧ್ಯಯನಕ್ಕಾಗಿ ಅಭಿವೃದ್ಧಿಪಡಿಸಿದ ಕ್ಲಿಡ್ ಟೆಲಿಸ್ಕೋಪ್ ಮೂಲಕ ಅಧ್ಯಯನ ನಡೆಸಲಾಗಿದೆ. ಬರೋಬ್ಬರಿ 26 ಗಂಟೆಗಳ ಕಾಲ ಆಕಾಶಗಂಗೆಯತ್ತ ಟೆಲಿಸ್ಕೋಪ್ ಇಟ್ಟು 9 ಪ್ರತ್ಯೇಕ ಚಿತ್ರಗಳನ್ನು ತೆಗೆದು ಜೋಡಿಸಲಾಗಿದೆ. ಈ ಟೆಲಿಸ್ಕೋಪ್ ಮೂಲಕ ಆಕಾಶದಲ್ಲಿ 22 ಪೂರ್ಣ ಚಂದ್ರ ಆಕ್ರಮಿಸಿಕೊಳ್ಳುವಷ್ಟು ಸ್ಥಳವನ್ನು ಸಂಪೂರ್ಣವಾಗಿ ಸೆರೆ ಹಿಡಿಯಲಾಗಿದೆ.

34
ಅನ್ಯಗ್ರಹಗಳು ಪತ್ತೆ

ಆಕಾಶಗಂಗೆಯ ಕೇಂದ್ರಭಾಗದಲ್ಲಿ ನಕ್ಷತ್ರಗಳು ಅತ್ಯಂತ ದಟ್ಟವಾಗಿ ತುಂಬಿಕೊಂಡಿರುವುದರಿಂದ, ಅಲ್ಲಿ ಅನ್ಯಗ್ರಹಗಳನ್ನು (ನಮ್ಮ ಸೌರಮಂಡಲದ ಆಚೆಗಿನ ಗ್ರಹಗಳು) ಪತ್ತೆಹಚ್ಚುವುದು ಖಗೋಳಶಾಸ್ತ್ರಜ್ಞರಿಗೆ ಒಂದು ದೊಡ್ಡ ಸವಾಲಾಗಿತ್ತು. ಆದರೆ, ಯೂಕ್ಲಿಡ್‌ನ ಈ ಹೈ-ರೆಸಲ್ಯೂಶನ್ ಚಿತ್ರವು ಆ ಭಾಗದಲ್ಲಿರುವ ಗ್ರಹಗಳನ್ನು ಹುಡುಕಲು 'ಮೈಕ್ರೋಲೆನ್ಸಿಂಗ್' (Microlensing) ತಂತ್ರಜ್ಞಾನಕ್ಕೆ ಭಾರಿ ನೆರವು ನೀಡಲಿದೆ. ಈಗಾಗಲೇ ಈ ಚಿತ್ರದಲ್ಲಿ ವಿಜ್ಞಾನಿಗಳಿಗೆ ತಿಳಿದಿರುವ 51 ಗ್ರಹಗಳ ವ್ಯವಸ್ಥೆಗಳು (Planetary Systems) ಪತ್ತೆ ಹಚ್ಚಿದ್ದಾರೆ.

44
ನ್ಯಾನ್ಸಿ ಗ್ರೇಸ್ ರೋಮ್ ಸ್ಪೇಸ್ ಟೆಲಿಸ್ಕೋಪ್

ವಿಜ್ಞಾನಿಗಳ ಪ್ರಕಾರ, ಯೂಕ್ಲಿಡ್ ನೀಡಿರುವ ಈ ಅದ್ಭುತ ಚಿತ್ರವು ನಾಸಾ ಶೀಘ್ರದಲ್ಲೇ ಉಡಾವಣೆ ಮಾಡಲಿರುವ 'ನ್ಯಾನ್ಸಿ ಗ್ರೇಸ್ ರೋಮನ್ ಸ್ಪೇಸ್ ಟೆಲಿಸ್ಕೋಪ್' (Nancy Grace Roman Space Telescope) ಮಿಷನ್‌ಗೆ ದಿಕ್ಸೂಚಿಯಂತೆ ಕೆಲಸ ಮಾಡಲಿದೆ. ರೋಮನ್ ಟೆಲಿಸ್ಕೋಪ್ ಆಕಾಶಗಂಗೆಯ ಆಳದಲ್ಲಿ ಅಡಗಿರುವ ತಣ್ಣನೆಯ, ಮಂಜುಗಡ್ಡೆಯಿಂದ ಕೂಡಿದ ಗ್ರಹಗಳು ಹಾಗೂ ನಕ್ಷತ್ರಗಳಿಲ್ಲದೆ ಒಂಟಿಯಾಗಿ ಅಲೆಯುವ 'ರೋಗ್ ಪ್ಲಾನೆಟ್ಸ್' (Rogue Planets) ಹುಡುಕಲು ಹೊರಡುತ್ತಿದೆ. ಇದಕ್ಕೆ ಯೂಕ್ಲಿಡ್‌ನ ಈ ಡೇಟಾ ಬಳಕೆಯಾಗಲಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories