ವಿಜಯಪುರದಲ್ಲಿ ಖಗೋಳ ವಿಸ್ಮಯ; ಇದು ಬರಗಾಲ? ಮಳೆ ಸೂಚನೆನಾ? ಏನಿದು ಸನ್ ಹ್ಯಾಲೋ ಚಮತ್ಕಾರ?

Published : Jun 21, 2026, 11:48 AM IST

ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾಮದಲ್ಲಿ ಸೂರ್ಯನ ಸುತ್ತ ಬಂಗಾರದ ಉಂಗುರಾಕಾರದ ವಿಸ್ಮಯ ಕಂಡುಬಂದಿದೆ. 'ಸನ್ ಹ್ಯಾಲೋ' ಎಂದು ಕರೆಯಲ್ಪಡುವ ಈ ಪ್ರಕೃತಿ ವಿಸ್ಮಯವು ವಾತಾವರಣದಲ್ಲಿನ ನೀರಿನ ಕಣಗಳಿಂದ ಉಂಟಾಗುತ್ತದೆ.

PREV
15
ಸೂರ್ಯನ ಸುತ್ತ ಬಂಗಾರದ ಬಣ್ಣದಲ್ಲಿ ಉಂಗುರಾಕಾರ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಸೂರ್ಯನ ಸುತ್ತ ಬಂಗಾರದ ಬಣ್ಣದಲ್ಲಿ ಉಂಗುರಾಕಾರ ಕಂಡುಬಂದಿದ್ದು, ಈ ವಿಸ್ಮಯ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

25
ಪ್ರಕೃತಿ ವಿಸ್ಮಯ

ಸೂರ್ಯನ ಸುತ್ತಲು ಉಂಗುರಾಕಾರ ಕಂಡು ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಸಂಭ್ರಮಿಸಿದರು. ಪ್ರಕೃತಿ ವಿಸ್ಮಯವನ್ನು ಮಕ್ಕಳಿಗೆ ತೋರಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ ಅವರು ಈ ಕುರಿತು ಅಗತ್ಯ ಜ್ಞಾನ ನೀಡಿದರು.

35
ಸನ್ ಹ್ಯಾಲೋ

ವಾತಾವರಣದ ಮೇಲ್ಭಾಗದಲ್ಲಿರುವ ನೀರಿನ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ ‘ಸನ್ ಹ್ಯಾಲೋ (Sun Halo) ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ. 

45
ಸೂರ್ಯನ ಸುತ್ತ 22 ಡಿಗ್ರಿ ತ್ರಿಜ್ಯ

ಈ ಉಂಗುರದ ಒಳಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಹೊರಭಾಗವು ತಿಳಿ ನೀಲಿ ಬಣ್ಣವನ್ನು ಹೊಂದಿರುತ್ತದೆ. ಇದು ಸೂರ್ಯನ ಸುತ್ತ 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತದೆ ಎಂದು ಪರಮೇಶ್ವರ ಗುದ್ಯಾಳ ಅವರು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

55
ಮಳೆ ಸೂಚನೆ

ಹವಾಮಾನ ಮುನ್ಸೂಚನೆಯ ಪ್ರಕಾರ, ಇಂತಹ ಸೂರ್ಯನ ಉಂಗುರಗಳು ಕಾಣಿಸಿಕೊಂಡರೆ ಮುಂದಿನ ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಈ ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರ ನೋಡಿ ಮಳೆಗಾಗಿ ಕಾಯುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories