ತೋಳ ಗ್ರಹಣದಲ್ಲಿ ಹೀಗೆ ಕಂಡ ಚಂದ್ರ: ಇವ ಆಕಾಶದಲ್ಲೇ ಸುರ ಸುಂದರ!
First Published | Jan 12, 2020, 4:02 PM ISTಜನವರಿ 10ರ ರಾತ್ರಿ 10.37ಕ್ಕೆ ಸಂಭವಿಸಿದ 2020ನೇ ವರ್ಷದ ಮೊದಲ ಚಂದ್ರ ಗ್ರಹಣವನ್ನು ತೋಳ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಭೂಮಿಯ ನೆರಳು ಕಾಣಿಸಿಕೊಂಡಿತ್ತು. ಶೇಕಡಾ 90ರಷ್ಟು ಭಾಗ ಚಂದ್ರನ ಮೇಲ್ಮೈಯನ್ನು ಭೂಮಿಯ ನೆರಳಿನ ಹೊರಭಾಗ ಮಾತ್ರ ಆವರಿಸಿಕೊಂಡಿತ್ತು. ಪೆನ್ಯೂಂಬ್ರಲ್ ಲೂನಾರ್ ಎಕ್ಲಿಫ್ಸ್ ಅಥವಾ ವುಲ್ಫ್ ಲೂನಾರ್ ಎಕ್ಲಿಫ್ಸ್ ಎಂದೇ ಹೆಸರಾದ ಗ್ರಹಣ ಯೂರೋಪ್, ಆಫ್ರಿಕಾ, ಏಷಿಯಾ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಪ್ರೇಲಿಯಾದಲ್ಲಿ ಗೋಚರಿಸಿತ್ತು. ಈ ಚಂದ್ರಗ್ರಹಣದ ಕೆಲ ಮನಮೋಹಕ ಫೋಟೋಗಳು ಇಲ್ಲಿವೆ.