Chandrayaan-3: ಸಾಫ್ಟ್ ಲ್ಯಾಂಡಿಂಗ್‌ ಲೈವ್‌ಸ್ಟ್ರೀಮ್ ನೋಡೋದೇಗೆ? ಲ್ಯಾಂಡಿಂಗ್ ಸವಾಲಾಗಿರೋಕೆ! ಇಲ್ನೋಡಿ..

Published : Aug 22, 2023, 05:14 PM ISTUpdated : Aug 22, 2023, 05:25 PM IST

ಚಂದ್ರನ ಮೇಲ್ಮೈಯಲ್ಲಿ ಭಾರತವು 'ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು' ನೀವು ವೀಕ್ಷಿಸುವ ಮೊದಲು ಈ ವಿವರಗಳನ್ನು ನೋಡಿ..

PREV
19
Chandrayaan-3: ಸಾಫ್ಟ್ ಲ್ಯಾಂಡಿಂಗ್‌ ಲೈವ್‌ಸ್ಟ್ರೀಮ್ ನೋಡೋದೇಗೆ? ಲ್ಯಾಂಡಿಂಗ್ ಸವಾಲಾಗಿರೋಕೆ! ಇಲ್ನೋಡಿ..

ಚಂದ್ರಯಾನ-3 ಮಿಷನ್ ಯಶಸ್ವಿಯಾದರೆ, ಭಾರತಕ್ಕೆ ಮಾತ್ರವಲ್ಲದೆ ಜಾಗತಿಕವಾಗಿ ವಿಜ್ಞಾನ ಸಮುದಾಯಕ್ಕೂ ಗಣನೀಯ ಸಾಧನೆಯಾಗಲಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತದೆ. ಇದು ಯಶಸ್ವಿಯಾದ್ರೆ, ಭಾರತವು ದಕ್ಷಿಣ ಧ್ರುವದಲ್ಲಿ ಇಳಿಯುವ ಮೊದಲ ದೇಶವಾಗಲಿದೆ. ಚಂದ್ರನ ಮೇಲ್ಮೈಯಲ್ಲಿ ಭಾರತವು 'ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು' ನೀವು ವೀಕ್ಷಿಸುವ ಮೊದಲು ಈ ವಿವರಗಳನ್ನು ನೋಡಿ..
 

29

ಚಂದ್ರಯಾನ-3 ಮಿಷನ್ ಎಂದರೇನು?
ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಭಾರತದ ಮೂರನೇ ಪ್ರಯತ್ನವಾಗಿದೆ. ಇದು ಮೂರು ಉದ್ದೇಶಗಳನ್ನು ಹೊಂದಿದೆ: ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು, ಚಂದ್ರನ ಮೇಲೆ ರೋವರ್ ರೋವಿಂಗ್ ಅನ್ನು ಪ್ರದರ್ಶಿಸಲು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು.
 

39

ಚಂದ್ರಯಾನ-3 ಮಿಷನ್ ಏಕೆ ಮುಖ್ಯ?
ಚಂದ್ರಯಾನ-3 ಮಿಷನ್ ಮಹತ್ವದ್ದಾಗಿದೆ. ಏಕೆಂದರೆ ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಮೊದಲ ದೇಶವಾಗಲಿದೆ. ಈ ಪ್ರದೇಶವು ಕತ್ತಲೆಯಾಗಿದೆ ಮತ್ತು ಹೆಪ್ಪುಗಟ್ಟಿದ ನೀರು ಹಾಗೂ ಅಮೂಲ್ಯ ಖನಿಜಗಳ ಸಂಗ್ರಹವನ್ನು ಹೊಂದಿದೆ ಎಂದು ನಂಬಲಾಗಿದೆ. ಭಾರತವು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಲಿದೆ. ಯುಎಸ್, ಚೀನಾ ಮತ್ತು ಸೋವಿಯತ್ ಒಕ್ಕೂಟ ಮಾತ್ರ ಈ ಸಾಧನೆ ಮಾಡಿದೆ.

49

ಚಂದ್ರಯಾನ-3 ಉಡಾವಣೆ ಮತ್ತು ಪೇಲೋಡ್
ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹುಬಲಿ ಲಾಂಚ್ ವೆಹಿಕಲ್ ಮಾರ್ಕ್-III (LVM-3) ನಲ್ಲಿ ಉಡಾವಣೆ ಮಾಡಲಾಯಿತು. ಇದು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಹೊಂದಿರುವ ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿತ್ತು.
 

59

ಚಂದ್ರಯಾನ-3 ಚಂದ್ರನನ್ನು ಹೇಗೆ ತಲುಪಿತು?
ಉಡಾವಣಾ ರಾಕೆಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಗೆ ಸೇರಿಸಿತು ಮತ್ತು ಬಹು ಕುಶಲತೆಯ ನಂತರ, ಇಸ್ರೋ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಿತು. ಮತ್ತೊಮ್ಮೆ, ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಹತ್ತಿರ ತರಲು ಅನೇಕ ಕುಶಲತೆಗಳನ್ನು ಮಾಡಲಾಗಿದೆ. ಕಳೆದ ವಾರ, ಲ್ಯಾಂಡರ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸಿತು. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23 ರಂದು ಲ್ಯಾಂಡರ್ ಚಂದ್ರನ ಅಂಗಳಕ್ಕೆ ಬೀಳಲಿದೆ.

69

ಚಂದ್ರಯಾನ-3 ಲ್ಯಾಂಡರ್ ಚಂದ್ರಯಾನ-2ಕ್ಕಿಂತ ಹೇಗೆ ಭಿನ್ನವಾಗಿದೆ?
ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಪ್ರಕಾರ, ವಿಕ್ರಮ್ ಲ್ಯಾಂಡರ್‌ನ ಸಂವೇದಕಗಳು ಮತ್ತು ಎಂಜಿನ್ ವಿಫಲವಾದರೂ ಸಹ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯಬಹುದು. ಚಂದ್ರಯಾನ-2 ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸೈಲೆಂಟಾಗಿ ಹೋಗಿದ್ದು, ಇದರ ಪರಿಣಾಮವಾಗಿ ಮಿಷನ್ ವಿಫಲವಾಗಿದೆ.

79

ಆತಂಕದ ನಿಮಿಷಗಳು
ವಿಕ್ರಮ್ ಅನ್ನು ಲಂಬವಾಗಿ ಇಳಿಸುವುದು ಇಸ್ರೋಗೆ ದೊಡ್ಡ ಸವಾಲಾಗಿದೆ. ಲ್ಯಾಂಡರ್ ಸುಮಾರು 1.68km/s (6,048km/hour) ವೇಗದಲ್ಲಿ ಚಂದ್ರನ ಕಡೆಗೆ ಅಡ್ಡಲಾಗಿ ಚಲಿಸುತ್ತದೆ. ಇಸ್ರೋ ತನ್ನ ದಿಕ್ಕನ್ನು ಲಂಬವಾಗಿ ಬದಲಾಯಿಸುತ್ತದೆ ಮತ್ತು ಲ್ಯಾಂಡಿಂಗ್‌ಗೂ ಮೊದಲು ಅದನ್ನು ಗರಿಷ್ಠ 10.8 ಕಿಮೀ/ಗಂಟೆಗೆ ತರುತ್ತದೆ. ಇಡೀ ಕಾರ್ಯಾಚರಣೆಯು ಸುಮಾರು 17 ನಿಮಿಷಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಇದನ್ನು ಕುಖ್ಯಾತವಾಗಿ '17 ನಿಮಿಷಗಳ ಟೆರರ್‌' ಎಂದು ಕರೆಯಲಾಗುತ್ತದೆ.

89

ಚಂದ್ರಯಾನ-3 ಲ್ಯಾಂಡಿಂಗ್ ಲೈವ್‌ಸ್ಟ್ರೀಮ್
ಚಂದ್ರಯಾನ-3 ಮಿಷನ್ ನಿಗದಿತ ಹಂತದಲ್ಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗಾಗಿ ವ್ಯವಸ್ಥೆಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ ಎಂದು ಇಸ್ರೋ ಹೇಳಿದೆ. ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (MOX)/ISTRAC ನಲ್ಲಿ ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು ಆಗಸ್ಟ್ 23, 2023 ರಂದು 5.20 pm IST ಗೆ  ಪ್ರಾರಂಭವಾಗುತ್ತದೆ. 

99

ಚಂದ್ರಯಾನ-3 ಲ್ಯಾಂಡಿಂಗ್ ನಂತರ ಏನಾಗುತ್ತದೆ?
ಚಂದಿರನ ಅಂಗಳನ ಮೇಲೆ ಇಳಿಯುವ ಸ್ವಲ್ಪ ಮೊದಲು, ಲ್ಯಾಂಡಿಂಗ್ ಮೇಲ್ಮೈಯನ್ನು ಪರಿಶೀಲಿಸಲು ಲ್ಯಾಂಡರ್ ಮೇಲ್ಮೈ ಮೇಲೆ ಸುಳಿದಾಡುತ್ತದೆ. ಒಮ್ಮೆ ಅದು ಇಳಿದ ನಂತರ, ಅದು ಧೂಳು ನೆಲೆಗೊಳ್ಳಲು ಅವಕಾಶ ನೀಡುತ್ತದೆ ಮತ್ತು ನಂತರ ಪ್ರಗ್ಯಾನ್ ರೋವರ್ ಮುಕ್ತವಾಗಿ ತಿರುಗಾಡಲು, ವಸ್ತುಗಳನ್ನು ಸಂಗ್ರಹಿಸಲು ಮತ್ತು ಪ್ರಯೋಗಗಳನ್ನು ಕೈಗೊಳ್ಳಲು ಅವಕಾಶ ನೀಡುತ್ತದೆ. ಲ್ಯಾಂಡರ್ ಮತ್ತು ರೋವರ್ ಸೌರಶಕ್ತಿಯಿಂದ ಚಾಲಿತವಾಗಿದ್ದು, ಒಂದು ಚಂದ್ರನ ದಿನದವರೆಗೆ (ಸುಮಾರು 14 ಭೂಮಿಯ ದಿನಗಳು) ಕಾರ್ಯನಿರ್ವಹಿಸುತ್ತವೆ.
 

Read more Photos on
click me!

Recommended Stories