ಫೆಬ್ರವರಿ 28ರಂದು ಅಪರೂಪದ ಖಗೋಳ ವಿದ್ಯಮಾನ; ಆಕಾಶದಲ್ಲಿ ನಡೆಯಲಿದೆ 6 ಗ್ರಹಗಳ ವಿಸ್ಮಯ

Published : Feb 12, 2026, 08:24 AM IST

Astronomical Phenomenon: ಫೆಬ್ರವರಿ 28 ರಂದು ಆರು ಗ್ರಹಗಳು ಆಕಾಶದಲ್ಲಿ ಒಂದೇ ನೇರ ರೇಖೆಯಲ್ಲಿ ಕಾಣಿಸಿಕೊಳ್ಳುವ 'ಗ್ರಹಗಳ ಮೆರವಣಿಗೆ' ಎಂಬ ಅಪರೂಪದ ಖಗೋಳ ವಿದ್ಯಮಾನ ಸಂಭವಿಸಲಿದೆ. ಸೂರ್ಯಾಸ್ತದ ನಂತರ ಗೋಚರಿಸುವ ಈ ದೃಶ್ಯವನ್ನು ಭಾರತದಲ್ಲಿಯೂ ಕಾಣಲಿದೆ.

PREV
15
ಖಗೋಳ ವಿದ್ಯಮಾನ

ಫೆಬ್ರವರಿ ತಿಂಗಳಲ್ಲಿ ಅಪರೂಪದ ಖಗೋಳ ಘಟನೆ ಸಂಭವಿಸಲಿದೆ. ಈ ತಿಂಗಳು ಒಂದೇ ನೇರ ರೇಖೆಯಲ್ಲಿ ಆರು ಗ್ರಹಗಳು ಕಾಣಿಸಿಕೊಳ್ಳಲಿವೆ. ಈ ಅಪರೂಪದ ವಿದ್ಯಮಾನವನ್ನು ಖಗೋಳಶಾಸ್ತ್ರಜ್ಞರು 'ಗ್ರಹಗಳ ಮೆರವಣಿಗೆ' (Planetary parade) ಎಂದು ಕರೆಯುತ್ತಾರೆ. ಈ ಗ್ರಹಗಳ ಮೆರವಣಿಗೆ ಯಾವಾಗ ಸಂಭವಿಸುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

25
ಅಪರೂಪದ ಗ್ರಹಗಳ ಮೆರವಣಿಗೆ

ಈ ಅಪರೂಪದ ಗ್ರಹಗಳ ಮೆರವಣಿಗೆ ಸೂರ್ಯಾಸ್ತದ ನಂತರ ಒಂದೇ ಪ್ರದೇಶದಲ್ಲಿ ಕಾಣಿಸಿಕೊಳ್ಳಲಿವೆ. ಸೌರವ್ಯೂಹದ 6 ಗ್ರಹಗಳು ಒಟ್ಟಿಗೆ ಗುಂಪಾಗಿ ಗೋಚರಿಸುತ್ತವೆ. ಈ ಅದ್ಭುತವಾದ ವಿದ್ಯಮಾನ ನೋಡಲು ಖಗೋಳಶಾಸ್ತ್ರಜ್ಞರು ಕಾಯುತ್ತಿದ್ದಾರೆ. ಬರಿಗಣ್ಣಿನಿಂದ ಈ ಅದ್ಭುತ ನೋಡಬಹುದು.

35
ಫೆ.28ರಂದು ನಡೆಯಲಿರುವ ವಿದ್ಯಮಾನ

ನಾಸಾ ವರದಿ ಪ್ರಕಾರ, ಫೆಬ್ರವರಿ 28 ರ ಶನಿವಾರ ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ ಗೋಚರಿಲಿದೆ. ಇಂದಿನಿಂದ ಫೆಬ್ರವರಿ ಅಂತ್ಯದವರೆಗೆ, ಬುಧ, ಶುಕ್ರ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಇರುತ್ತವೆ. ಕೆಲವು ಗ್ರಹಗಳನ್ನು ಬರಿಗಣ್ಣಿನಿಂದ ನೋಡಲು ಸುಲಭವಾಗಿದ್ದರೆ, ಇತರ ಗ್ರಹಗಳನ್ನು ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ನೋಡಬೇಕಾಗುತ್ತದೆ.

45
ಫಳ ಫಳ ಅಂತ ಹೊಳೆಯಲಿದ್ದಾನೆ ಚಂದ್ರ

ಬುಧ ಮತ್ತು ಶುಕ್ರ ಗ್ರಹಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಶನಿ ಗ್ರಹ ಆಕಾಶದ ಬಾಗಿದ ಭಾಗದಲ್ಲಿರಲಿದೆ. ಫೆಬ್ರವರಿ 28ರ ಸಮೀಪದಲ್ಲಿ ಹುಣ್ಣಿಮೆ ಇರೋದರಿಂದ ಭೂಮಿಯ ಉಪಗಹ್ರ ಚಂದ್ರನು ಸಹ ಸಾಮಾನ್ಯಕ್ಕಿಂತ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಖಗೋಳ ಘಟನೆ ಕ್ಷಣಿಕವಾಗಿದೆ.

ಇದನ್ನೂ ಓದಿ: ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

55
ಭಾರತದಲ್ಲಿ ಎಲ್ಲೆಲ್ಲಿ ಗೋಚರ?

ಹವಾಮಾನ ಸ್ಪಷ್ಟವಾಗಿದ್ದರೆ ಮತ್ತು ನಿಮ್ಮ ವೀಕ್ಷಣೆಗೆ ಏನೂ ಅಡ್ಡಿಯಾಗದಿದ್ದರೆ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು. ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಪುಣೆ, ಜೈಪುರ, ಲಕ್ನೋ, ಅಹಮದಾಬಾದ್ ಮತ್ತು ಡೆಹ್ರಾಡೂನ್‌ನಂತಹ ನಗರಗಳಲ್ಲಿ ಈ ಅಪರೂಪದ ಆಕಾಶದ ವಿದ್ಯಮಾನ ನೋಡಬಹುದು.

ಇದನ್ನೂ ಓದಿ: Alien Life: ಅನ್ಯಗ್ರಹ ಜೀವಿಗಳಿಗಾಗಿ ಹುಡುಕಾಟ, ನೀರೊಂದೇ ಸಾಲದು, ಈ 2 ಅಂಶಗಳೂ ಬೇಕೇ ಬೇಕು!

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories