ಕಾಶ್ಮೀರದಲ್ಲಿ ರಕ್ಷಿತ್‌ ಶೆಟ್ಟಿ;ಕೊರೆಯುವ ಚಳಿಯಲ್ಲೂ ಚಾರ್ಲಿ ಹಂಗಾಮ!

First Published Dec 8, 2020, 9:25 AM IST

ಸಿನಿಮಾ ಮಂದಿಗೆ ಕೆಲವು ತಾಣಗಳೆಂದರೆ ಬಲು ಪ್ರೀತಿ. ಬ್ಯಾಂಕಾಕ್‌, ಪಟ್ಟಾಯ, ಸಿಂಗಾಪೂರ್‌, ರಾಜಸ್ಥಾನ ಮುಂತಾದವು. ಈ ಸಾಲಿಗೆ ಸೇರುವ ಮತ್ತೊಂದು ತಾಣ ಕಾಶ್ಮೀರ. 

ಪ್ರೇಮ ಕತೆ, ಮೆಲೋಡಿ ಹಾಡುಗಳು ಇದ್ದರೆ ಕಾಶ್ಮೀರಕ್ಕೆ ಹೋಗಬೇಕು ಎಂಬುದು ಅಲಿಖಿತ ನಿಯಮ.
undefined
ಕೊರೋನಾ, ಲಾಕ್‌ಡೌನ್‌ ಕಾರಣಕ್ಕೆ ಕಾಶ್ಮೀರ ಮರೆತಿದ್ದ ಕನ್ನಡ ಸಿನಿಮಾ ಮಂದಿ ಈಗ ತಣ್ಣಗೆ ಅತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
undefined
ಈಗಷ್ಟೆ ಜೋಗಿ ಪ್ರೇಮ್‌ ತಮ್ಮ ತಂಡದ ಸೇರಿ ‘ಏಕ್‌ ಲವ್‌ ಯಾ’ ಚಿತ್ರದ ಶೂಟಿಂಗ್‌ ಮುಗಿಸಿಕೊಂಡು ಬಂದಿದ್ದರೆ, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಕಾಶ್ಮೀರದಲ್ಲಿ ಸಂಚಾರ ಆರಂಭಿಸಿದ್ದಾರೆ.
undefined
ಅಲ್ಲಿನ ಚಳಿ, ಬಣ್ಣಗಳು, ಪ್ರಕೃತಿಯ ಸೌಂದರ್ಯಕ್ಕೆ ಫಿದಾ ಆಗಿರುವ ರಕ್ಷಿತ್‌ ಶೆಟ್ಟಿ‘777 ಚಾರ್ಲಿ’ ಚಿತ್ರದ ಒಂದು ಫೋಟೋ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
undefined
‘ಕಾಶ್ಮೀರದ ಬಣ್ಣಗಳು ಶ್ರೀಮಂತಿಕೆ ಮತ್ತು ದೈವತ್ವವನ್ನು ಕಣ್ಣಲ್ಲಿ ಮುದ್ರಿಸುತ್ತವೆ’ ಎಂದು ಕಾಶ್ಮೀರದಲ್ಲಿನ ತಮ್ಮ ಚಿತ್ರೀಕರಣದ ಅನುಭವವನ್ನು ಸಿಂಪಲ್‌ ಸ್ಟಾರ್‌ ಹಂಚಿಕೊಂಡಿದ್ದಾರೆ.
undefined
ಕಿರಣ್‌ ರಾಜ್‌ ಕೆ ನಿರ್ದೇಶನದ ಚಿತ್ರ ಇದಾಗಿದ್ದು, ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಾಶ್ಮೀರದಲ್ಲಿ ಶೂಟಿಂಗ್‌ ಮಾಡುತ್ತಿದೆ ಚಿತ್ರತಂಡ.
undefined
ಡಿಸೆಂಬರ್‌ ತಿಂಗಳು ಮುಗಿಯುವ ಹೊತ್ತಿಗೆ ‘777 ಚಾರ್ಲಿ’ ಶೂಟಿಂಗ್‌ ಮುಗಿಸಿ ರಕ್ಷಿತ್‌ ಶೆಟ್ಟಿ, ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ.
undefined
click me!