Published : Aug 25, 2023, 07:08 PM ISTUpdated : Aug 25, 2023, 07:11 PM IST
ಹೊಸ ಸಿನಿಮಾ ಬ್ಯುಸಿಯಲ್ಲಿದ್ದರೂ ಮನೆಯವರ ಜೊತೆ ನಿಖಿಲ್ ಕುಮಾರಸ್ವಾಮಿ ಪೂಜೆಯಲ್ಲಿ ಭಾಗಿಯಾಗಿದ್ದು, ತಂದೆ ಕುಮಾರಸ್ವಾಮಿ, ತಾಯಿ ಅನಿತಾ ಹಾಗೂ ಪತ್ನಿ ರೇವತಿ ಜೊತೆ ಸೇರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಕುಟುಂಬದೊಂದಿಗೆ ನಟ ಹಾಗೂ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹಬ್ಬ ಆಚರಣೆ ಮಾಡಿದ್ದಾರೆ.
26
ಪತ್ನಿ, ಮಗ ಹಾಗೂ ಕುಟುಂದ ಜೊತೆ ನಿಖಿಲ್ ಕುಮಾರಸ್ವಾಮಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಪತ್ನಿ ರೇವತಿ ಹಾಗೂ ಮಗ ಅವ್ಯಾನ್ ದೇವ್ ಸಹ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
36
ಪೂಜೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಅಪ್ಪ ಮಗ ಮಿಂಚಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವ್ಯಾನ್ ದೇವ್ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
46
ಹೊಸ ಸಿನಿಮಾ ಬ್ಯುಸಿಯಲ್ಲಿದ್ದರೂ ಮನೆಯವರ ಜೊತೆ ನಿಖಿಲ್ ಕುಮಾರಸ್ವಾಮಿ ಪೂಜೆಯಲ್ಲಿ ಭಾಗಿಯಾಗಿದ್ದು, ತಂದೆ ಕುಮಾರಸ್ವಾಮಿ, ತಾಯಿ ಅನಿತಾ ಹಾಗೂ ಪತ್ನಿ ರೇವತಿ ಜೊತೆ ಸೇರಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.
56
ಪ್ರತಿ ಹಬ್ಬವನ್ನ ಮನೆಯವರ ಜೊತೆ ಸೇರಿ ಆಚರಣೆ ಮಾಡುವ ನಿಖಿಲ್ ಕುಮಾರ್, ವರಮಹಾಲಕ್ಷ್ಮಿ ಹಬ್ಬವನ್ನು ಸಹ ಅದ್ಧೂರಿಯಾಗಿ ಕುಟುಂಬದ ಜತೆ ಆಚರಿಸಿದ್ದಾರೆ.
66
ನಿಖಿಲ್ ಕುಮಾರಸ್ವಾಮಿ ಅವರ ಮನೆಯಲ್ಲಿ ಲಕ್ಷ್ಮಿಯ ವಿಗ್ರಹವಿಟ್ಟು ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದಾರೆ.