ರಾಜನ್ ನಾಗೇಂದ್ರ ಹಾಡುಗಳಿಗೆ ಹೊಸತನದ ಸ್ಪರ್ಶ ; ಪುತ್ರ ಅನಂತ್ ವಿಭಿನ್ನ ಪ್ರಯತ್ನ!

Published : May 29, 2023, 04:10 PM ISTUpdated : May 29, 2023, 04:51 PM IST

ರಾಜನ್ ನಾಗೇಂದ್ರ ಹಾಡುಗಳನ್ನು ಪಾಲೀಶು ಮಾಡಿ ಹೊಸ ಸ್ಪರ್ಶ ನೀಡುತ್ತಿದ್ದಾರೆ ಪುತ್ರ ಅನಂತ್. ಲಹರಿ ಸಂಸ್ಥೆ ಸಾಥ್. 

PREV
16
ರಾಜನ್ ನಾಗೇಂದ್ರ ಹಾಡುಗಳಿಗೆ ಹೊಸತನದ ಸ್ಪರ್ಶ ; ಪುತ್ರ ಅನಂತ್ ವಿಭಿನ್ನ ಪ್ರಯತ್ನ!

'ರಾಜನ್ ನಾಗೇಂದ್ರ ಸಂಗೀತ ಸಂಯೋಜನೆಯ ಹಾಡುಗಳಿಗೆ ಹೊಸ ಸ್ಪರ್ಶ ನೀಡುವ ಪ್ರಯತ್ನದಲ್ಲಿದ್ದೇನೆ. ಅವರ ಹಾಡುಗಳು ಬಂಗಾರದಂಥವು. ಎಲ್ಲ ಕಾಲಕ್ಕೂ ಸಲ್ಲುತ್ತವೆ. ಅವುಗಳಿಗೆ ಪಾಲೀಶು ಮಾಡುವ ಕೆಲವನ್ನಷ್ಟೇ ಮಾಡುತ್ತೇನೆ'

26

 'ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವಾಯ್ಸ್‌ ಕಲ್ಚರ್ ಕಲಿಸಿ ಅವಕಾಶ ನೀಡಬೇಕು ಎನ್ನುವ ಕನಸು ತಂದೆಗಿತ್ತು. ಅವರ ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಅವರ ಪರಂಪರೆಯನ್ನು ಮುಂದುವರಿಸುವ ಉದ್ದೇಶ ನನ್ನದು ಎಂದು ಹಿರಿಯ ಸಂಗೀತ ನಿರ್ದೇಶಕ ರಾಜನ್ ಪುತ್ರ ಅನಂತ್ ಹೇಳಿದ್ದಾರೆ. 

36

ರಾಜನ್ ನಾಗೇಂದ್ರ ರಾಗ ಸಂಯೋಜನೆಯ ಹಾಡುಗಳನ್ನು ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ಹೊಸಬರಿಂದ ಹಾಡಿಸಿ ರೆಕಾರ್ಡಿಂಗ್ ಮಾಡಿ ಲೋಕಾರ್ಪಣೆ ಮಾಡಲು ಅನಂತ್ ಮುಂದಾಗಿದ್ದಾರೆ.

46

ಈ ಹಾಡುಗಳನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಲಹರಿ ಸಂಸ್ಥೆ ನಿರ್ವಹಿಸಲಿದೆ. ಇದನ್ನು ಲಹರಿ ವೇಲು ಸ್ಪಷ್ಟಪಡಿಸಿದ್ದಾರೆ. 

56

ಇತ್ತೀಚಿಗೆ ರಾಜನ್ ನಾಗೇಂದ್ರ ಆರಂಭಿಸಿದ್ದ ಸಪ್ತಸ್ವರಾಂಜನಿ ಇನ್ಸ್‌ಟಿಟ್ಯೂಟ್‌ ವತಿಯಿಂದ ರಾಜನ್ ಅವರ ಜನ್ಮದಿನನ್ನು ಆಚರಿಸಲಾಯಿತ್ತು. 

66

ಹಿರಿಯ ನಿರ್ದೇಶಕ ಭಾರ್ಗವ್ ರಾಜನ್ ನಾಗೇಂದ್ರ ಸಂಗೀತ ಸಂಯೋಜನೆ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರ ಸಾಹಿತಿ ಚಿ ಉದಯಶಂಕರ್ ಪುತ್ರ ಚಿ ಗುರುದತ್ತ್ ಉಪಸ್ಥಿತರಿದ್ದರು.

click me!

Recommended Stories