ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree Ramu) ಪುತ್ರಿ ಆರಾಧನಾ ರಾಮ್, ಈಗಾಗಲೇ ಕಾಟೇರ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಾಗಿದ್ದು, ಕನ್ನಡಿಗರ ಮನಸು ಗೆಲ್ಲುವಲ್ಲಿ ಸಹ ಯಶಸ್ವಿಯಾಗಿದ್ದಾರೆ.
ಮಗಳ ಬಳಿಕ ಮಗ ಸಹ ಸಿನಿಮಾಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆಯೇ ಎನ್ನುವ ಗುಸು ಗುಸು ಕೂಡ ಕೇಳಿ ಬರ್ತಿದೆ. ಯಾಕಂದ್ರೆ ಇತ್ತೀಚೆಗಷ್ಟೇ ನಟಿ ಮಾಲಾಶ್ರೀ ತಮ್ಮ ಮಗ ವರ್ಕ್ ಔಟ್ ಮಾಡುವ ಫೊಟೋ ಅಪ್ ಲೋಡ್ ಮಾಡಿದ್ದರು. ಇದನ್ನು ನೋಡಿದ ಜನ ಸದ್ಯದಲ್ಲಿ ಆರ್ಯನ್ ಸಿನಿಮಾ ಇಂಡಷ್ಟ್ರಿಗೆ ಬರಲಿದ್ದಾರೆ ಎನ್ನುವ ಗುಸು ಗುಸು ಸಹ ಕೇಳಿ ಬರುತ್ತಿದೆ.
ಇದೀಗ ಆರ್ಯನ್ ರಾಮು ತಮ್ಮ 20ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ನಟಿ ತಾಯಿ ಮಾಲಾಶ್ರೀ ಹಾಗೂ ಸಹೋದರಿ ಆರಾಧನಾ ರಾಮ್ (Aradhana Ram) ಆರ್ಯನ್ ಗೆ ಪ್ರೀತಿಯಿಂದ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೊಗಳನ್ನು ಶೇರ್ ಮಾಡಿರುವ ಮಾಲಾಶ್ರೀ (Malashree) ಹ್ಯಾಪಿ ಬರ್ತ್ ಡೇ ನನ್ನ ಮಗ, ನೀನು ಬೆಸ್ಟ್ ಮಗ, ನೀನು ನನ್ನ ಜೀವನದಲ್ಲಿ ಇರೋದಕ್ಕೆ ನಾನು ಧನ್ಯಳಾಗಿದ್ದೇನೆ ಎಂದು ಮುದ್ದಾಗಿ ವಿಶ್ ಮಾಡಿದ್ದಾರೆ.
ಇನ್ನು ಸಹೋದರಿ ಆರಾಧನಾ ರಾಮ್ ಕೂಡ ತಮ್ಮ ಜೊತೆಗಿನ ಟ್ರಾವೆಲ್ ಫೋಟೊ ಶೇರ್ ಮಾಡಿದ್ದು, ಹ್ಯಾಪಿಯೆಸ್ಟ್ ಬರ್ತ್ ಡೇ ಲಿಟಲ್ ಬ್ರದರ್ (Little Brother), ನಿನಗೆ 20 ವರ್ಷ ಆಗೋಯ್ತು ಅನ್ನೋದನ್ನ ನಂಬೋದಕ್ಕೆ ಸಾಧ್ಯ ಆಗ್ತಿಲ್ಲ. ನಾನೀಗ ಅಧಿಕೃತವಾಗಿ ವಯಸ್ಸಾದವರಂತೆ ಫೀಲ್ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.
ಆರ್ಯನ್ ಬಾಕ್ಸಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಮಾಲಾಶ್ರೀ ಫ್ಯಾನ್ಸ್, ಆರ್ಯನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಬಗ್ಗೆ ಪ್ರಶ್ನಿಸಿದ್ದರು. ಆರ್ಯನ್ ನೋಡೊದಕ್ಕೆ ಹ್ಯಾಂಡ್ಸಮ್ ಆಗಿದ್ದು, ಹೈಟ್ ಎಲ್ಲವೂ ಸಖತ್ತಾಗಿದೆ, ಇವರು ಸದ್ಯ ಕಾಲೇಜು ಓದುತ್ತಿದ್ದು, ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರಬಹುದು.