ಲವ್ 360ಯಲ್ಲಿ ಮೇಘಾ ಶೆಟ್ಟಿ ಹಿರೋಯಿನ್

First Published | Jul 15, 2021, 10:46 AM IST
  • ಸೀರಿಯಲ್‌ನಿಂದ ಸಿನಿಮಾಗೆ ಬಂದ ಮೇಘಾ ಶೆಟ್ಟಿ
  • ‘ಲವ್ 360’ ಚಿತ್ರಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿ
ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರಕ್ಕೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿ ಆಗಲಿದ್ದಾರೆ.
ಚಿತ್ರರಂಗಕ್ಕೆ ಈಗಷ್ಟೆ ಪರಿಚಯ ಆಗುತ್ತಿರುವ ಹೊಸ ನಟ ಪ್ರವೀಣ್ ಈ ಚಿತ್ರಕ್ಕೆ ನಾಯಕ.
Tap to resize

ಪ್ರೀ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ತಾರಾಗಣ ಆಯ್ಕೆ ಮಾಡಿಕೊಳ್ಳುವುದರಲ್ಲಿ ಶಶಾಂಕ್ ಬ್ಯುಸಿ ಆಗಿದ್ದಾರೆ.
ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೆ ನಾಯಕಿ ಆಗಿದ್ದಾರೆಮೇಘಾ.
ಶಶಾಂಕ್ ಅವರ ‘ಲವ್ 360’ ಚಿತ್ರಕ್ಕೂ ನಾಯಕಿ ಆಗಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ
ಸಿನಿಮಾದಲ್ಲಿ ಮೇಘಾ ಅವರಿಗೆ ಸಾಕಷ್ಟು ಆಫರ್‌ಗಳು ಆರಂಭದಿಂದಲೇ ಹರಿದುಬರುತ್ತಿತ್ತು.
ಧಾರಾವಾಹಿಯಲ್ಲಿ ಬ್ಯುಸಿಯಾದ ಕಾರಣ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ನಟಿ. ಆದರೆ ಈಗ ಜೊತೆಜೊತೆಯಲ್ಲಿ ಸೀರಿಯಲ್‌ಗೆ ಬಾಯ್ ಹೇಳಿ ಬೆಳ್ಳಿ ತೆರೆಗೆ ಧುಮುಕುವ ಸಿದ್ಧತೆಯಲ್ಲಿದ್ದಾರೆ

Latest Videos

click me!