ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸಿರಿ; ಯಾರು ಆ ನಟ?

Published : Jun 14, 2024, 12:59 PM IST

ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸಿರಿ. ಕೈ ಹಿಡಿದಿರುವ ಹುಡುಗ ಕೂಡ ನಟನೇ....

PREV
18
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸಿರಿ; ಯಾರು ಆ ನಟ?

 ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಸಿರಿ ಮತ್ತು ನಟ ಪ್ರಭಾಕರ್ ಬೋರೇಗೌಡ ಇಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

28

ಸೋಷಿಯಲ್ ಮೀಡಿಯಾದಲ್ಲಿ ಸಿರಿ ಮತ್ತು ಪ್ರಭಾಕರ್ ಬೋರೇಗೌಡ ಮದುವೆಯಾಗಿರುವ ಫೋಟೋ ಮತ್ತು ಸಣ್ಣ ಪುಟ್ಟ ವಿಡಿಯೋ ವೈರಲ್ ಆಗುತ್ತಿದೆ.

38

ಎರಡು ದಿನಗಳ ಹಿಂದೆ ಸಿರಿ ನಿವಾಸದಲ್ಲಿ ಅರಿಶಿಣ ಶಾಸ್ತ್ರಿ ನಡೆದಿದೆ. ಬಿಳಿ ಸೀರೆಯಲ್ಲಿ ಸಿರಿ ಕುಳಿತುಕೊಂಡು ಮಡಿಲಿನಲ್ಲಿ ಪುಟ್ಟ ಕಂದಮ್ಮ ಇರುವ ಫೋಟೋ ವೈರಲ್ ಆಗಿತ್ತು.

48

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ.

58

ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಸರಳವಾಗಿ ನಡೆದಿದೆ. ಕ್ರೀಮ್ ಆಂಡ್ ಪರ್ಪಲ್‌ ಕಾಂಬಿನೇಷನ್‌ ಸೀರೆಯಲ್ಲಿ ಸಿರಿ ಕಾಣಿಸಿಕೊಂಡಿದ್ದಾರೆ.

68

ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರುದ್ರ ಗರುಡ ಪುರಣದ ಸಣ್ಣ ತುಣುಕು ಶೇರ್ ಮಾಡಿಕೊಂಡಿದ್ದಾರೆ ಪ್ರಭಾಕರ್.

78

 ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ದಿನವೂ ಪೋಸ್ಟ್‌ ಹಂಚಿಕೊಂಡಿದ್ದಾರೆ. 'ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು' ಎಂದು ಪ್ರಭಾಕರ್ ಬರೆದುಕೊಂಡಿದ್ದರು. 

88

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಇದು ಅರೇಂಜ್ಡ್‌ ಆರ್‌ ಲವ್ ಮ್ಯಾರೇಜ್? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಅನ್ನೋ ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಳ್ಳುತ್ತಿದೆ. ಇದಕ್ಕೆ ನವದಂಪತಿಗಳೇ ಉತ್ತರ ಕೊಡಬೇಕು. 

Read more Photos on
click me!

Recommended Stories