Unmarried Couplesಗೆ ಇವೆಲ್ಲಾ ಗೊತ್ತಿದ್ದರೆ, ಲೈಫಲ್ಲಿ ಯಡವಟ್ಟಾಗೋಲ್ಲ!

First Published | Nov 14, 2022, 4:48 PM IST

ಈ ಪ್ರೇಮಿಗಳು ಫೋನ್, ಮೆಸೇಜ್ ನಲ್ಲಿ ಪ್ರೀತಿಸುತ್ತಿದ್ದರೇನೆ ಸರಿ, ಯಾಕಂದ್ರೆ ಅವರು ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ರೆ ಸಮಸ್ಯೆ ಎದುರಿಸಬೇಕಾಗಿ ಬರುತ್ತೆ. ಇಂತಹ ಘಟನೆಗಳನ್ನು ನಾವು ಸಹ ಅನೇಕ ಬಾರಿ ನೋಡಿದ್ದೀವಿ. ಈ ಅವಿವಾಹಿತ ಕಪಲ್ಸ್ ಹಲವಾರು ಸಂದರ್ಭಗಳಲ್ಲಿ ಒಂದಿಲ್ಲೊಂದು ಕಾರಣಗಳಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ಅನ್ ಮ್ಯಾರೀಡ್ ಕಪಲ್ಸ್ ಸಹ ಕೆಲವು ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕೆಲವೇ ಕೆಲವೇ ಜನರಿಗೆ ಗೊತ್ತು. ಈ ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ಯಾರು ಬೇಕಾದರೂ ಬುದ್ಧಿವಂತರಾಗಬಹುದು.  

ಅನೇಕ ಚಲನಚಿತ್ರಗಳಲ್ಲಿ ಅನ್ ಮ್ಯಾರೀಡ್ ಕಪಲ್ಸ್ (unmarried couples) ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದದ್ದನ್ನು ನೋಡಿರಬಹುದು. ನೀವು ಮಸಾನ್ ಚಿತ್ರ ನೋಡಿದ್ದರೆ, ದೀಪಕ್ ಚೌಧರಿ (ವಿಕ್ಕಿ ಕೌಶಲ್) ಮತ್ತು ದೇವಿ ಪಾಠಕ್ (ರಿಚಾ ಚಡ್ಡಾ) ಪರಸ್ಪರ ಭೇಟಿಯಾಗಲು ಹೋಟೆಲ್ ಗೆ ಹೋಗ್ತಾರೆ. ಆದರೆ ಅಲ್ಲಿ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ಅವರನ್ನು ಹಿಡಿಯುತ್ತಾರೆ. ಇದರ ನಂತರ, ಪೊಲೀಸರು ದೇವಿ ಪಾಠಕ್ ಗೆ ಅನೇಕ ರೀತಿಯ ನಿಯಮಗಳನ್ನು ಹೇಳುವ ಮೂಲಕ ಕಿರುಕುಳ ನೀಡುತ್ತಾರೆ. ಇಂತಹ ಕತೆ ಹೊಂದಿರುವ ಅನೇಕ ಚಿತ್ರಗಳನ್ನು ಎಲ್ಲಾ ಭಾಷೆಯಲ್ಲೂ ನೋಡಿರಬಹುದು.
 

ನೈಜ ಜೀವನದಲ್ಲಿಯೂ ಅನೇಕ ಬಾರಿ, ಅನೇಕ ಅವಿವಾಹಿತ ಕಪಲ್ಸ್ ಈ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು, ಕೆಲವು ನಿಯಮಗಳು ಇವೆ. ಈ ನಿಯಮಗಳನ್ನು ತಿಳಿದುಕೊಂಡರೆ, ನೀವು ಬುದ್ಧಿವಂತರಾಗುವುದಲ್ಲದೆ, ನಿಮ್ಮ ಸಂಗಾತಿಯೊಂದಿಗೆ (partner) ನೆಮ್ಮದಿಯಾಗಿ ಬಾಳಲು ಸಾಧ್ಯವಾಗುತ್ತೆ.  ಇಂದು ನಾವು ನಿಮಗೆ ಕೆಲವು ನಿಯಮಗಳನ್ನು ಹೇಳುತ್ತಿದ್ದೇವೆ, ಅದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

Tap to resize

1. ಲಿವ್-ಇನ್ ರಿಲೇಶನ್ ಶಿಪ್ ಕಾನೂನು

ಮದ್ವೆ ಆಗದೇ ಒಟ್ಟಿಗೆ ವಾಸಿಸೋದು, ಅಂದರೆ ಲಿವ್-ಇನ್- ರಿಲೇಶನ್ ಶಿಪ್ (live in relationship)ನಲ್ಲಿ ಇರೋದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಮನ್. 2013 ರಲ್ಲಿ, ಸುಪ್ರೀಂ ಕೋರ್ಟ್ ಲಿವ್-ಇನ್ ಸಂಬಂಧಗಳ ಬಗ್ಗೆ ಆದೇಶ ನೀಡುತ್ತಾ, "ಇಬ್ಬರು ವಯಸ್ಕರು (ಹುಡುಗ ಅಥವಾ ಹುಡುಗಿ), ಇದರಲ್ಲಿ ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರು, ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸಬಹುದು ಎಂದು ಆದೇಶ ನೀಡಿತ್ತು.

ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ, ಇಬ್ಬರೂ ಸಂಗಾತಿಗಳು ಇಚ್ಛಾನುಸಾರ ದೈಹಿಕ ಸಂಬಂಧ (physical relationship) ಹೊಂದಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿರುತ್ತಾರೆ. ಹದಿನೈದು ವರ್ಷಗಳ ಹಿಂದೆ, 2006 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿಯು ವಯಸ್ಕನಾದ ನಂತರ ಬದುಕಲು ಅಥವಾ ಮದುವೆಯಾಗಲು ಸ್ವತಂತ್ರನಾಗಿದ್ದಾನೆ ಎಂದು ತೀರ್ಪು ನೀಡಿತು. ಆದರೆ ಗಂಡ ಮತ್ತು ಹೆಂಡತಿ ವಿಚ್ಛೇದನ ಪಡೆದಾಗ ಪತಿ ಹೆಂಡತಿಗೆ ಖರ್ಚುಗಳನ್ನು ನೀಡುವಂತೆಯೇ, ಲಿವ್-ಇನ್ ಸಂಬಂಧವು ಕೊನೆಗೊಂಡಾಗ ನ್ಯಾಯಾಲಯವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ದಂಡವನ್ನು ಸಹ ವಿಧಿಸಬಹುದು. 

2. ಹೋಟೆಲ್ ವಾಸ್ತವ್ಯದ ನಿಯಮಗಳು

ಪ್ರೇಮಿಗಳು ಹೋಟೆಲ್‌ನಲ್ಲಿ ಉಳಿಯಲು ಅವಕಾಶವಿಲ್ಲ (staying in hotel) ಎಂಬ ಸುದ್ದಿ ನಿಮಗೆ ತಿಳಿದಿರಬಹುದು. ಆದರೆ ಭಾರತೀಯ ಕಾನೂನು ವಯಸ್ಕ ಮದುವೆಯಾಗದ ಜೋಡಿಗಳಿಗೆ ಎಲ್ಲಿಗಾದರೂ ಹೋಗಿ ಯಾವುದೇ ಹೋಟೆಲ್ ನಲ್ಲಿ ಉಳಿಯುವ ಹಕ್ಕನ್ನು ನೀಡುತ್ತದೆ. ವಯಸ್ಸಿಗೆ ಬಂದ ಜೋಡಿಗಳು ಒಟ್ಟಿಗೆ ಹೋಟೆಲ್ ಗಳಲ್ಲಿ ಉಳಿಯುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಆದರೆ ಇದಕ್ಕಾಗಿ, ಇಬ್ಬರೂ ಜೋಡಿಗಳು ತಮ್ಮ ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆಗಳ ಪ್ರತಿಯನ್ನು ನೀಡಬೇಕಾಗುತ್ತದೆ. ಅನೇಕ ಹೋಟೆಲ್‌ಗಳಲ್ಲಿ ಸ್ಥಳೀಯ ಐಡಿಗಳನ್ನು ಸ್ವೀಕರಿಸಲಾಗುವುದಿಲ್ಲ, ಆದ್ದರಿಂದ ಹೋಟೆಲ್‌ನಲ್ಲಿ ಉಳಿಯುವ ಮೊದಲು ನಿಯಮಗಳು ಮತ್ತು ಷರತ್ತುಗಳನ್ನು ಓದಲು ಮರೆಯದಿರಿ. 

3. ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳುವ ನಿಯಮಗಳು

ನೀವು ಮದುವೆಯಾಗದಿದ್ದರೂ ಸಹ, ನೀವು ಯಾವುದೇ ಸಾರ್ವಜನಿಕ ಸ್ಥಳದಲ್ಲಿ (public places) ಕುಳಿತುಕೊಳ್ಳಬಹುದು. ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ, ಯಾರಾದರೂ ಸಾರ್ವಜನಿಕವಾಗಿ ಅಶ್ಲೀಲ ಕೃತ್ಯಗಳನ್ನು ಮಾಡಿದರೆ, ಅವನಿಗೆ 3 ತಿಂಗಳವರೆಗೆ ಶಿಕ್ಷೆ ವಿಧಿಸಬಹುದು. ಆದರೆ ಈ ವಿಭಾಗವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅನೇಕ ಬಾರಿ ಕಂಡುಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಅಂತಹ ಯಾವುದೇ ಕೆಲಸವನ್ನು ಮಾಡಬಾರದು. ನೀವು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮಾತನಾಡುತ್ತಿದ್ದರೆ, ಪೊಲೀಸರು ನಿಮ್ಮನ್ನು ಬಂಧಿಸಲು ಸಾಧ್ಯವಿಲ್ಲ.

4. ನಿಂದನಾತ್ಮಕ ಪದಗಳನ್ನು ಬಳಸುವ ಬಗ್ಗೆ

ಇಬ್ಬರು ಸಂಬಂಧದಲ್ಲಿದ್ದರೆ, ಅವರಲ್ಲಿ ಜಗಳ, ಕೋಪ ಎಲ್ಲವೂ ಕಾಮನ್, ಈ ಸಮಯದಲ್ಲಿ ಕೆಲವೊಮ್ಮೆ ಜೋಡಿಗಳು ಒಬ್ಬರನ್ನೊಬ್ಬರು ನಿಂದನಾತ್ಮಕ ಪದಗಳನ್ನು ಬಳಸುತ್ತಾರೆ. ಆದರೆ ಇದು ತಪ್ಪಾಗುತ್ತದೆ. ಹುಡುಗಿಯ ಮೇಲೆ ಪ್ರೇಮಿಯು ಯಾವುದೇ ಕೆಟ್ಟ, ನಿಂದನಾತ್ಮಕ ಪದ ಪ್ರಯೋಗ (abusive language) ಮಾಡಿದ್ರೆ ಅದು ಕಾನೂನು ಬಾಹಿರವಾಗುತ್ತದೆ (Unlawful Act). ಅಂತಹ ಪರಿಸ್ಥಿತಿಯಲ್ಲಿ, ಕೌಟುಂಬಿಕ ಹಿಂಸೆಯಿಂದ (Domestic Violence) ಮಹಿಳೆಯರ ರಕ್ಷಣೆ ಕಾಯ್ದೆ 2005 ರ ಪ್ರಕಾರ, ಬಾಲಕಿ ರಕ್ಷಣೆಯನ್ನು ಕೇಳಬಹುದು.

5. ದೈಹಿಕ ಸಂಬಂಧಗಳ ನಿಯಮಗಳು

ಭಾರತದ ಸಂವಿಧಾನವು ಆರ್ಟಿಕಲ್ 21 ರ ಮೂಲಕ ಖಾಸಗಿತನದ ಹಕ್ಕನ್ನು (right to privacy) ಒದಗಿಸುತ್ತದೆ. ಸರಳವಾಗಿ ಹೇಳುವುದಾದರೆ, ದಂಪತಿ ಖಾಸಗಿ ಸ್ಥಳದಲ್ಲಿ ಪರಸ್ಪರ ದೈಹಿಕ ಸಂಬಂಧಗಳನ್ನು (physical relationship) ಮಾಡಿಕೊಳ್ಳಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ.  2017-2018 ರಲ್ಲಿ ಎರಡು ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಪುನರುಚ್ಚರಿಸಿತ್ತು. 

Latest Videos

click me!