ತುಂಬಾ ಮಕ್ಕಳು ಎರಡು ವರ್ಷ ತುಂಬುವ ಮೊದ್ಲೇ ಅಮ್ಮ, ತಾತ ಅಂತ ಚಿಕ್ಕ ಚಿಕ್ಕ ಪದಗಳನ್ನ ಹೇಳ್ತಾರೆ. ಸ್ಪಷ್ಟವಾಗಿ ಹೇಳದಿದ್ರೂ.. ಮಾತಾಡೋಕೆ ಪ್ರಯತ್ನಿಸ್ತಾರೆ. ಆದ್ರೆ ಕೆಲವು ಮಕ್ಕಳು ನಾಲ್ಕೈದು ವರ್ಷ ಆದ್ರೂ.. ಬಾಯಿಂದ ಒಂದು ಮಾತು ಬರಲ್ಲ. ಯಾವ ಪದಗಳನ್ನೂ ಹೇಳಲ್ಲ. ಇದು ಪೋಷಕರನ್ನು ಚಿಂತೆಗೀಡು ಮಾಡುತ್ತದೆ.
ಆದರೆ ತಂದೆ ತಾಯಿಗಳು ಮಾಡೋ ಕೆಲವು ತಪ್ಪುಗಳಿಂದಲೇ ಮಕ್ಕಳಿಗೆ ಮಾತು ತಡವಾಗಿ ಬರುತ್ತೆ ಅಂತಾರೆ ವೈದ್ಯರು, ಒಂದು ವೇಳೆ ನಿಮಗೆ ಎರಡು ಮೂರು ತಿಂಗಳ ಮಗುವಿದ್ರೆ ಈ ವಿಷ್ಯದಲ್ಲಿ ಇಂಥ ತಪ್ಪುಗಳನ್ನ ಮಾಡ್ಬೇಡಿ. ಹೀಗ್ ಮಾಡಿದ್ರೆ ನಿಮ್ಮ ಮಕ್ಕಳು ಕೂಡ ತುಂಬಾ ತಡವಾಗಿ ಮಾತಾಡೋ ಸಾಧ್ಯತೆ ಇದೆ. ಅದಕ್ಕೆ ಮಕ್ಕಳು ಬೇಗ ಮಾತಾಡ್ಬೇಕಂದ್ರೆ ತಂದೆ ತಾಯಿಗಳು ಏನ್ ಮಾಡ್ಬೇಕು ಅಂತ ಈಗ ತಿಳ್ಕೊಳ್ಳೋಣ ಬನ್ನಿ.
ಘನ ಆಹಾರ
ಕೆಲವರು ಮಕ್ಕಳಿಗೆ 6 ತಿಂಗಳು ಆದ ತಕ್ಷಣ ಘನ ಆಹಾರ, ಧಾನ್ಯಗಳನ್ನ ತಿನ್ನಿಸ್ತಾರೆ. ಆದ್ರೆ ತುಂಬಾ ಜನ ತಾಯಂದಿರು ತಮ್ಮ ಮಗುವಿಗೆ ಹಣ್ಣು, ಬೇಳೆ, ಧಾನ್ಯಗಳನ್ನ ತಿನ್ನಿಸ್ತಾರೆ. ಆದ್ರೆ ಇದ್ರಿಂದ ಜಗಿಯೋ ಸ್ನಾಯುಗಳು ಸರಿಯಾಗಿ ಬೆಳವಣಿಗೆ ಆಗಲ್ಲ. ಮಗು ಆಹಾರವನ್ನು ಕಚ್ಚಿ ಜಗಿದಾಗ ನಾಲಿಗೆ ಸ್ನಾಯುಗಳು ಬಲಿಷ್ಠ ಆಗುತ್ತೆ. ಇದ್ರಿಂದ ಅವರು ಮಾತಾಡೋ ಕೌಶಲ್ಯ ಬೇಗ ಬೆಳವಣಿಗೆ ಆಗುತ್ತೆ.
ತುಂಬಾ ಜನ ತಾಯಂದಿರು ತಮ್ಮ ಮಗುವಿಗೆ ಫುಡ್ ತಿನ್ನಿಸೋಕೆ ಸಿಪ್ಪರ್ ಕಪ್ ಗಳನ್ನ ಜಾಸ್ತಿ ಉಪಯೋಗಿಸ್ತಾರೆ. ಆದ್ರೆ ಸಿಪ್ಪಿ ಕಪ್ ನಿಂದ ನೀರು ಕುಡಿಯೋದ್ರಿಂದ ಮಗು ನುಂಗೋ ಪ್ರಕ್ರಿಯೆ ಬೆಳವಣಿಗೆ ನಿಧಾನವಾಗುತ್ತದೆ. ಇದ್ರಿಂದ ನಿಮ್ಮ ಮಕ್ಕಳು ತುಂಬಾ ತಡವಾಗಿ ಮಾತಾಡ್ತಾರೆ. ಅದಕ್ಕೆ ಇಂಥದ್ದನ್ನ ಮಕ್ಕಳಿಗೆ ಅಭ್ಯಾಸ ಮಾಡ್ಸಬಾರ್ದು.
ತಾಯಂದಿರು ತಮ್ಮ ಮಕ್ಕಳಿಗೆ ಆಹಾರ ತಿನ್ನಿಸಿದಾಗ ಬಾಯಲ್ಲಿ ಹಾಗೂ ಬಾಯಿ ಸುತ್ತ ಆಹಾರ ಅಂಟಿಕೊಳ್ಳುತ್ತೆ. ಇದು ತುಂಬಾ ಸಹಜ. ಆದ್ರೆ ತಾಯಂದಿರು ತಕ್ಷಣ ಮಕ್ಕಳ ಬಾಯನ್ನ ಸ್ವಚ್ಛ ಮಾಡ್ತಾರೆ. ಆದ್ರೆ ತಕ್ಷಣ ಬಾಯನ್ನ ಕ್ಲೀನ್ ಮಾಡ್ಬೇಡಿ ಅಂತಾರೆ ತಜ್ಞರು. ಬಾಯಿಗೆ, ತುಟಿಗೆ ಅಂಟಿಕೊಂಡ ಫುಡ್ ನ ಮಗು ನಾಲಿಗೆಯಿಂದ ನೆಕ್ಕಿ ಸ್ವಚ್ಛ ಮಾಡಿಕೊಳ್ಳಲಿ. ಹೀಗೆ ಮಾಡುವುದರಿಂದ ಮಕ್ಕಳು ತಮ್ಮ ನಾಲಿಗೆ ಉಪಯೋಗಿಸಿದಾಗ ಅವರ ಅಂಗುಳ ಬೆಳವಣಿಗೆ ಆಗುತ್ತೆ. ಇದ್ರಿಂದ ಅವ್ರು ಮಾತಾಡೋದು ಸುಲಭ ಆಗುತ್ತೆ.
ಮಕ್ಕಳು ಸಾಮಾನ್ಯವಾಗಿ 11 ರಿಂದ 14 ತಿಂಗಳ ವಯಸ್ಸಲ್ಲಿ ಮಾತಾಡೋದು ಶುರು ಮಾಡ್ತಾರೆ. ಹಾಗೇ ಮಕ್ಕಳಿಗೆ ವರ್ಷದ ಮೇಲೆ ವಯಸ್ಸು ಆದಾಗ ಅವ್ರು ದಿನಕ್ಕೆ ಕನಿಷ್ಠ 40 ಪದಗಳನ್ನ ಮಾತಾಡೋದು ಸಾಮಾನ್ಯ. ಇದರ ಜೊತೆಗೆ, ಮಗು ಪ್ರತಿದಿನ ಮಾತುಗಳನ್ನ ಕೇಳೋ ಮೂಲಕ ಕೂಡ ಕೆಲವು ಹೊಸ ಪದಗಳನ್ನ ಕೇಳಿ ಕಲ್ತುಕೊಳ್ಳುತ್ತೆ. ಅದಕ್ಕೆ ಮಕ್ಕಳ ಜೊತೆ ಜಾಸ್ತಿ ಮಾತಾಡ್ಬೇಕು.