ಪ್ರತಿ 2-3 ವರ್ಷಗಳಿಗೊಮ್ಮೆ ಉದ್ಯೋಗ ಬದಲಾಯಿಸುತ್ತಲೇ ಇರಬೇಕಂತೆ!

First Published | Feb 29, 2024, 12:00 PM IST

ಹಿಂದೆಲ್ಲಾ ಜನರು ಒಂದೇ ಕಂಪನಿಯಲ್ಲಿ ವರ್ಷಗಟ್ಟಲೆ ದುಡಿದು, ಅಲ್ಲೇ ನಿವೃತ್ತಿ ಪಡೆಯುತ್ತಿದ್ದರು. ಅದನ್ನೇ ವೃತ್ತಿಪರತೆ ಎಂದು ಸಹ ಹೇಳುತ್ತಿದ್ದರು. ಆದರೆ ಈಗ ಜನ 2-3 ವರ್ಷಗಳಿಗೊಮ್ಮೆ ಉದ್ಯೋಗ ಬದಲಾಯಿಸುತ್ತಿದ್ದಾರೆ ಇದು ಸರಿಯೇ? 
 

ವೃತ್ತಿಪರರು ತಮ್ಮ ಇಡೀ ವೃತ್ತಿಜೀವನವನ್ನು ಒಂದೇ ಕಂಪನಿಯಲ್ಲಿ ಕಳೆಯುವ ಮತ್ತು ಚಿನ್ನದ ಗಡಿಯಾರ ಮತ್ತು ಹೆಚ್ಚಿನ ಪಿಂಚಣಿ ಪಡೆಯುತ್ತಾ ಒಂದು ದಿನ ಅದೇ ಕಂಪನಿಯಲ್ಲಿ ನಿವೃತ್ತರಾಗುವಂತಹ (Retirement) ಕಾಲ ಯಾವತ್ತೋ ಹೋಗಿದೆ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ (Job Market), ವೃತ್ತಿಪರರು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿ ಉದ್ಯೋಗಗಳನ್ನು ಬದಲಾಯಿಸುತ್ತಿದ್ದಾರೆ. ಇದನ್ನು ಜನರು ಸರಿ ಅಂತ ಕೂಡ ಹೇಳ್ತಿದ್ದಾರೆ. 
 

ಕರಿಯರ್ ಎಕ್ಸ್ ಪರ್ಟ್ ಗಳು (career expert) ಸಹ ಹೇಳುವಂತೆ ನೀವು ಪ್ರತಿ 2 ಅಥವಾ 3 ವರ್ಷಗಳಿಗೊಮ್ಮೆ ಉದ್ಯೋಗವನ್ನು ಬದಲಾಯಿಸುತ್ತಲೇ ಇರಬೇಕಂತೆ. ಇದರಿಂದ ಉದ್ಯೋಗಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ ಎನ್ನುತ್ತಾರೆ. ಹಾಗಿದ್ರೆ ಹೀಗೆ 3 ವರ್ಷದೊಳಗೆ ಉದ್ಯೋಗ ಬದಲಾಯಿಸೋದರಿಂದ ಏನೆಲ್ಲಾ ಲಾಭ ಇದೆ ನೋಡೋಣ. 
 

Latest Videos


ಉದ್ಯೋಗ ಬದಲಾಯಿಸೋದರಿಂದ ಗಳಿಕೆಯ ಸಾಮರ್ಥ್ಯ ಹೆಚ್ಚುತ್ತೆ
ನಿಮ್ಮ ವಾರ್ಷಿಕ ಏರಿಕೆಯನ್ನು ಸಾಮಾನ್ಯವಾಗಿ ನಿಮ್ಮ ಕೆಲಸದ ಕಾರ್ಯಕ್ಷಮತೆಯಿಂದ ನಿರ್ಧರಿಸಲಾಗುತ್ತದೆ. ಫೋರ್ಬ್ಸ್ ಪ್ರಕಾರ, ಸರಾಸರಿ ಉದ್ಯೋಗಿ ಪ್ರತಿ ವರ್ಷ 3% ಹೆಚ್ಚಳವನ್ನು ನಿರೀಕ್ಷಿಸಬಹುದು. ಆದರೆ ನೀವು ಹೆಚ್ಚಿನ ಗಳಿಕೆಯ ಸಾಮರ್ಥ್ಯ ಪಡೆಯಬೇಕು ಅಂದ್ರೆ, 2-3 ವರ್ಷದೊಳಗೆ ಹೊಸ ಉದ್ಯೋಗಕ್ಕೆ ಸೇರಬೇಕು. ಇದರಿಂದ ನಿಮಗೆ ಹೆಚ್ಚಿನ ಸ್ಯಾಲರಿ (salary) ಸಿಗುತ್ತೆ. 

ಉದ್ಯೋಗ ಬದಲಾಯಿಸುವುದರಿಂದ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗುತ್ತೆ
ನೀವು ಒಂದೇ ಸಂಸ್ಥೆಯಲ್ಲಿ ಇದ್ದಾಗ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳೊಂದಿಗೆ ಸ್ಪಂದಿಸೋಕೆ ಕಷ್ಟವಾಗುತ್ತದೆ. ಸ್ವಯಂ-ಸುಧಾರಣೆಯ ಅಗತ್ಯವೂ ಕ್ರಮೇಣ ಕಡಿಮೆಯಾಗಬಹುದು ಮತ್ತು ನಿಮ್ಮ ವೃತ್ತಿಪರ ಕೌಶಲ್ಯಗಳು (professional skills) ಸಹ ಹಿಂದೆ ಬೀಳಬಹುದು. ಆದರೆ ವೃತ್ತಿ ಬದಲಾವಣೆಯಿಂದ ವೃತ್ತಿ ಜೀವನದಲ್ಲಿ ಮತ್ತು ನಿಮ್ಮ ವೈಯಕ್ತಿಕ ಜೀವನದಲ್ಲಿ ಪ್ರಗತಿ ಉಂಟಾಗುತ್ತದೆ. 

ಉದ್ಯೋಗ ಬದಲಾಯಿಸುವುದರಿಂದ ಕಾರ್ಯಕ್ಷಮತೆ, ಬದ್ಧತೆ ಹೆಚ್ಚುತ್ತೆ
ಗ್ಯಾಲಪ್ ಸಂಸ್ಥೆಯ ಪ್ರಕಾರ, ಸರಿಸುಮಾರು 70% ಉದ್ಯೋಗಿಗಳು ತಮ್ಮ ಕೆಲಸಕ್ಕೆ ಬದ್ಧರಾಗಿಲ್ಲ ಮತ್ತು ಅವರ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತಿಲ್ಲ. ಇಂಕ್. ನಿಯತಕಾಲಿಕದ ಮತ್ತೊಂದು ವರದಿಯು ಜನರು ತಮ್ಮ ಕೆಲಸವನ್ನು ತೊರೆಯಲು ಪ್ರಮುಖ ಕಾರಣವೆಂದರೆ ಬೇಸರ ಎಂದು ತಿಳಿಸಿದೆ. ಉದ್ಯೋಗ ಬದಲಾವಣೆಯಿಂದ (changing jobs)ಕೆಲಸ ಮಾಡುವ ಆಸಕ್ತಿ, ಬದ್ಧತೆ (Committment) ಕೂಡ ಹೆಚ್ಚುತ್ತದೆ. 

ಉದ್ಯೋಗ ಬದಲಾವಣೆಯಿಂದ ಕೌಶಲ್ಯ (Skill), ಜವಾಬ್ಧಾರಿ ಹೆಚ್ಚುತ್ತೆ 
ಪ್ರತಿ 2-3 ವರ್ಷಗಳಿಗೊಮ್ಮೆ ಕಂಪನಿಗಳನ್ನು ಬದಲಾಯಿಸುವುದರಿಂದ ಸವಾಲಿನ ಯೋಜನೆಗಳನ್ನು ತೆಗೆದುಕೊಳ್ಳಲು, ನಿಮ್ಮ ಕೌಶಲ್ಯಗಳನ್ನು (skills) ನಿರಂತರವಾಗಿ ಬೆಳೆಸಲು ಮತ್ತು ಹೆಚ್ಚಿನ ಫಲಿತಾಂಶಗಳನ್ನು ಪಡೆಯಲು ಹೊಸದನ್ನು ಟ್ರೈ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಉತ್ತಮ ರಿಸಲ್ಟ್ ಸಾಮಾನ್ಯವಾಗಿ ಉತ್ತಮ ಅವಕಾಶಗಳಿಗೆ ಕಾರಣವಾಗುತ್ತವೆ. ಇದಲ್ಲದೆ, ಹೆಚ್ಚಿನ ಕೆಲಸದ ಅನುಭವವನ್ನು ಹೊಂದಲು ಸಹ ಇದು ನೆರವಾಗುತ್ತದೆ. 

ಪ್ರೊಫೆಷನಲ್ ನೆಟ್ ವರ್ಕ್ (Professional Network) ಬಿಲ್ಡ್ ಮಾಡಲು ಸಹಾಯ ಮಾಡುತ್ತೆ
ನೀವು ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದಷ್ಟೂ, ನಿಮ್ಮ ರೆಸ್ಯೂಮ್ (resume)ಹೆಚ್ಚು ಸ್ಟ್ರಾಂಗ್ ಆಗುತ್ತೆ ಮತ್ತು ಹೆಚ್ಚಿನ ಜನರು ನಿಮ್ಮನ್ನು ತಿಳಿದುಕೊಳ್ಳುತ್ತಾರೆ. ನೆನಪಿಡಿ, ನೆಟ್ವರ್ಕಿಂಗ್‌ನಲ್ಲಿ - ನಿಮಗೆ ಯಾರು ತಿಳಿದಿದ್ದಾರೆ ಎಂಬುದು ಮುಖ್ಯವಲ್ಲ, ಅವರಿಗೆ ನೀವು ಯಾರು, ನಿಮ್ಮ ಕೆಪಾಸಿಟಿ ಏನು ಅನ್ನೋದು ತಿಳಿದಿರಬೇಕು. ಒಂದೇ ಸಂಸ್ಥೆಯಲ್ಲಿ ಹೆಚ್ಚು ಕಾಲ ಉಳಿಯೋದರಿಂದ ನೆಟ್ ವರ್ಕ್ ಬಿಲ್ಡ್ (professional network) ಮಾಡಲು ಸಾಧ್ಯವಿಲ್ಲ. ಇದರಿಂದ ದೊಡ್ಡ ಅವಕಾಶದಿಂದ ನೀವು ವಂಚಿತರಾಗಬಹುದು.

ಉದ್ಯೋಗ ಬದಲಾವಣೆಯಿಂದ ಬೇಗನೆ ಪ್ರೊಮೋಷನ್ ಸಿಗುತ್ತೆ
ನಿಮ್ಮ ಪ್ರಸ್ತುತ ಕಂಪನಿಯಲ್ಲಿ ನೀವು ಬಯಸುವ ಬಡ್ತಿಯನ್ನು (promotion) ಪಡೆಯದಿರಬಹುದು, ಆದರೆ ಉದ್ಯೋಗಗಳನ್ನು ಬದಲಾಯಿಸುವುದರಿಂದ ನಿಮ್ಮ ಮುಂದಿನ ವೃತ್ತಿಜೀವನದ ನಡೆಗೆ ನಿಮ್ಮನ್ನು ಸರಿಯಾಗಿ ಹೇಗೆ ಇರಿಸಿಕೊಳ್ಳಬೇಕು ಎಂದು ನಿಮಗೆ ತಿಳಿದಿದ್ದರೆ, ಕಡಿಮೆ ಸಮಯದಲ್ಲಿ ನಿಮಗೆ ಪ್ರೊಮೋಷನ್ ಸಿಗೋದು ಖಚಿತ. 
 

click me!