94 ಲಕ್ಷದ ಕೆಲಸ ಬಿಟ್ಟು, ನೀವೆಷ್ಟು ಸಂಪಾದಿಸ್ತೀರಿ? ಎಂದು ಜನರನ್ನು ಕೇಳುತ್ತಲೇ ಮಿಲೇನಿಯರ್ ಆದ ಜೋಡಿ

First Published Jan 23, 2024, 4:56 PM IST

27 ವರ್ಷದ ಹನ್ನಾ ವಿಲಿಯಮ್ಸ್ ಮತ್ತು ಆಕೆಯ ಪತಿ ಜೇಮ್ಸ್ ಡೇನಿಯಲ್ಸ್ ಸಾಮಾಜಿಕ ಮಾಧ್ಯಮದಲ್ಲಿ 'ನೀವು ಎಷ್ಟು ಸಂಪಾದಿಸುತ್ತೀರಿ?' ಅನ್ನೋ ಒಂದು ಸಿಂಪಲ್ ಪ್ರಶ್ನೆ ಕೇಳುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
 

ಜನರು ಹಣ ಗಳಿಸೋಕೆ (money making) ಏನೇನೋ ಮಾರ್ಗಗಳನ್ನು ಬಳಸ್ತಾರೆ ಅಲ್ವಾ? ಕೆಲವರು ತುಂಬಾ ಕಷ್ಟ ಪಟ್ಟು, ಹಗಲು ರಾತ್ರಿ ದುಡಿದು ಹಣ ಸಂಪಾದನೆ ಮಾಡಿದ್ರೆ, ಇನ್ನೂ ಕೆಲವರು ಕುಳಿತಲ್ಲೇ ಹಣ ಮಾಡ್ತಾರೆ. ಅದೇ ರೀತಿ, ಹೆಚ್ಚು ಕಷ್ಟಪಡದೇ ಒಂದೇ ಒಂದು ಪ್ರಶ್ನೆ ಕೇಳುವ ಮೂಲಕ ಬಿಲೇನಿಯರ್ ಆದ ಕಪಲ್ಸ್ ಕಥೆ ಹೇಳ್ತೀವಿ ಕೇಳಿ. 
 

ಶ್ರೀಮಂತರಾಗಲು, ಕಷ್ಟಪಟ್ಟು ಕೆಲಸ ಮಾಡಲು, ತಮ್ಮ ಇಡೀ ಜೀವನವನ್ನು ಕಳೆಯಲು ಜನರು ಏನು ಬೇಕಾದರೂ ಮಾಡ್ತಾರೆ, ಆದರೂ ಲಕ್ಷಾಂತರ ರೂಪಾಯಿ ಸಂಗ್ರಹಿಸೋದು ದೂರದ ಮಾತು. ಆದರೆ 27 ವರ್ಷದ ಹುಡುಗಿಯೊಬ್ಬಳು 'ನೀವು ಎಷ್ಟು ಸಂಪಾದಿಸುತ್ತೀರಿ?' ಎಂದು ಜನರನ್ನು ಕೇಳುವ ಮೂಲಕ ಮಿಲಿಯನೇರ್ (millionaire) ಆಗಿದ್ದಾಳೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಚಿತ. ಪ್ರಶ್ನೆ ಕೇಳುವ ಮೂಲಕ ಆಕೆ ಹೇಗೆ ಮಿಲೇನಿಯರ್ ಆದಳು ಅನ್ನೋದನ್ನು ತಿಳಿಯೋಣ.

ಡೈಲಿ ಮೇಲ್ )Daily mail) ವರದಿಯ ಪ್ರಕಾರ, ಬ್ರಿಟನ್‌ನಲ್ಲಿ ವಾಸಿಸುವ ಹನ್ನಾ ವಿಲಿಯಮ್ಸ್ ಮತ್ತು ಅವರ ಪತಿ ಜೇಮ್ಸ್ ಡೇನಿಯಲ್ಸ್ ಫೋಟೋಗ್ರಾಫರ್ ಆಗಿದ್ದಾರೆ. 2 ವರ್ಷಗಳ ಹಿಂದೆ, ಇವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು, ರೀಲ್ಸ್‌ಗಳನ್ನು ಮಾಡುವ ಮೂಲಕ ಜನರು  ಸಾವಿರಾರು ಮತ್ತು ಮಿಲಿಯನ್ ಗಳಿಸುತ್ತಿದ್ದಾರೆ ಅನ್ನೋದು ಅವರಿಗೆ ತಿಳಿದು ಬಂತು. 
 

ಆವಾಗ್ಲೇ ಹನ್ನಾಳಿಗೆ ಈ ಆಲೋಚನೆ ಹೊಳೆಯಿತು. ಹೀಗೆ ನಾವು ಸಹ ಏನಾದರು ಮಾಡಿ ಹಣ ಮಾಡಬೇಕು ಎಂದು ಅವರು ಯೋಚಿಸೋಕೆ ಆರಂಭಿಸಿದರು. ಇಬ್ಬರೂ ಪ್ಲ್ಯಾನ್ ಮಾಡಿ ಮತ್ತು ಬೀದಿಯಲ್ಲಿರುವ ಅಪರಿಚಿತರನ್ನು  'ನಿಮ್ಮ ಖರ್ಚುಗಳನ್ನು ನಿರ್ವಹಿಸಲು ನೀವು ಏನು ಮಾಡುತ್ತೀರಿ?' (What do you to to make  money) "ನೀವು ಎಷ್ಟು ಸಂಪಾದಿಸುತ್ತೀರಿ? (how much you earn) ಎಂದು ಪ್ರಶ್ನೆ ಮಾಡಲು ಆರಂಭಿಸಿದರು. 
 

ಇವರ ಪ್ರಶ್ನೆಗೆ ಜನರು ಹೇಳೋ ಉತ್ತರಗಳನ್ನು ವೀಡಿಯೊ ಮಾಡಿ, ಅವುಗಳನ್ನು ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಹೀಗೆ ಒಂದೇ ಒಂದು ಪ್ರಶ್ನೆ ಕೇಳಿ, ಅದನ್ನೇ ವಿಡಿಯೋ ಮಾಡುವ ಮೂಲಕ ಹನ್ನಾ ವಿಲಿಯಮ್ಸ್ ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಅನ್ನೋದು ಮಾತ್ರ ನಿಜಾ. 
 

8.24 ಕೋಟಿ ಗಳಿಕೆ
ಹನ್ನಾ ವಿಲಿಯಮ್ಸ್ ಅವರು ಕೇವಲ ಒಂದು ವರ್ಷದಲ್ಲಿ, ಈ ಪ್ರಶ್ನೆಯಿಂದ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8.24 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರಂತೆ. ಟಿಕ್ಟಾಕ್, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ(social media) ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹನ್ನಾ ಸ್ವತಃ ತನ್ನ ಗಳಿಕೆಯನ್ನು ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಬ್ರಾಂಡ್ ಸ್ಯಾಲರಿ ಟ್ರಾನ್ಸಪರೆಂಟ್ ಸ್ಟ್ರೀಟ್ ಅವರಿಗೆ ಅತಿದೊಡ್ಡ ಜಾಹೀರಾತನ್ನು ಕೂಡ ನೀಡಿದೆಯಂತೆ. 
 

ನಾರ್ದರ್ನ್ ವರ್ಜೀನಿಯಾ ಕಮ್ಯುನಿಟಿ ಕಾಲೇಜ್ ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದ ಪದವೀಧರರಾದ ವಿಲಿಯಮ್ಸ್ ಡೇಟಾ ವಿಶ್ಲೇಷಕರಾಗಿ ಕೆಲಸ ಮಾಡಿದರು. ಅವರು ಪ್ರತಿವರ್ಷ 94 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುತ್ತಿದ್ದರು, ಆದರೆ 2022ರಲ್ಲಿ, ಅವರು ಕೆಲಸ ತೊರೆದು ಸಾಮಾಜಿಕ ಮಾಧ್ಯಮ ಬ್ರಾಂಡ್ ಸ್ಯಾಲರಿ ಟ್ರಾನ್ಸ್ ಪರೆಂಟ್ ಸ್ಟ್ರೀಟ್ನೊಂದಿಗೆ (social media brand salary transparent street) ಒಪ್ಪಂದಕ್ಕೆ ಸಹಿ ಹಾಕಿದರು.
 

ಕೆಲಸ ಬಿಡಲು ಹಿಂಜರಿದಿದ್ದ ಜೋಡಿ
27 ವರ್ಷದ ಹನ್ನಾ, "ಆರಂಭದಲ್ಲಿ ನಾವು ಕೆಲಸ ಬಿಡಲು ಸ್ವಲ್ಪ ಹಿಂಜರಿಯುತ್ತಿದ್ದೆವು. ಆದರೆ ನಂತರ ಏನೇ ಆಗಲಿ, ಅದು ನಮ್ಮದಾಗುತ್ತದೆ ಎಂದು ನಾನು ಭಾವಿಸಿದೆ. ನಷ್ಟ ಅಥವಾ ಲಾಭ, ಏನೇ ಆದರೂ ಅದನ್ನು ಎದುರಿಸೋಕೆ ನಾವು ಸಿದ್ಧ ಎಂದು  ಭಾವಿಸಿ ಈ ಹೊಸ ಯೋಜನೆಗೆ ಮುನ್ನುಡಿ ಬರೆದರು.

ಹಣ ಸಂಪಾದಿಸುವಲ್ಲಿ ಅನೇಕ ಸಮಸ್ಯೆಗಳಿರುತ್ತವೆ. ಅನೇಕ ಬಾರಿ ಅನನ್ಯ ಆಲೋಚನೆಗಳು ಸಹ ಬರುತ್ತವೆ, ಅವುಗಳನ್ನು ನಾವು ಹಂಚಿಕೊಳ್ಳುತ್ತೇವೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಹನ್ನಾ ಈ ಕುರಿತು ಹೇಳಿಕೆ ನೀಡಿ ಈ ಕಲ್ಪನೆಯು ಇಷ್ಟು ಅದ್ಭುತವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕೇವಲ 2 ವರ್ಷಗಳಲ್ಲಿ, ನಾವು 2.7 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದೇವೆ. ಹನ್ನಾ ಮತ್ತು ಡೇನಿಯಲ್ ಜೊತೆಯಾಗಿ ಮಾಡಿದ ನೂರಾರು ವಿಡಿಯೋಗಳನ್ನು ಸುಮಾರು ಒಂದು ಬಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.  
 

click me!