ಅವರು ವಾರಕ್ಕೆ 80 - 90 ಗಂಟೆ ವರ್ಕ್‌ ಮಾಡ್ತಾರೆ: 70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ

First Published | Oct 30, 2023, 4:07 PM IST

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತಮ್ಮ ಪತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರಿಗೆ "ವಾರಕ್ಕೆ 70 ಗಂಟೆಗಳ" ಕೆಲಸದ ಸೂತ್ರದ ಸಲಹೆ ದೇಶದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ಈ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಹೇಳಿಕೆಗೆ ಸಾಕಷ್ಟು ಪರ - ವಿರೋಧ ಅಭಿಪ್ರಾಯ ಬರುತ್ತಿದ್ದಂತೆ ಪತ್ನಿ ಸುಧಾಮೂರ್ತಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ವಾರಕ್ಕೆ 70 ಗಂಟೆಗಳ" ಕೆಲಸದ ಸೂತ್ರದ ಸಲಹೆ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ಸುಧಾಮೂರ್ತಿ ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತಮ್ಮ ಪತಿ ವಾರಕ್ಕೆ 80 ರಿಂದ 90 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಮತ್ತು ತಮ್ಮ ಅನುಭವವನ್ನು ಮಾತ್ರ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

Tap to resize

ಅವರು ವಾರಕ್ಕೆ 80ರಿಂದ 90 ಗಂಟೆ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಅದಕ್ಕಿಂತ ಕಮ್ಮಿ ಏನು ಅನ್ನೋದು ಅವರಿಗೆ ಗೊತ್ತಿಲ್ಲ. ಅವರು ನಿಜವಾದ ಶ್ರಮವನ್ನು ನಂಬುತ್ತಾರೆ ಮತ್ತು ಅವರು ಹಾಗೆ ಜೀವಿಸುತ್ತಿದ್ದಾರೆ.

ಹೀಗಾಗಿ ತನಗೆ ಅನಿಸಿದ್ದನ್ನು ಹೇಳಿದ್ದಾರೆ ಎಂದು ಸುಧಾ ಮೂರ್ತಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ತನ್ನ ಪತಿ ಉತ್ಸಾಹ ಮತ್ತು "ನಿಜವಾದ ಕಠಿಣ ಪರಿಶ್ರಮ" ದಲ್ಲಿ ನಂಬುತ್ತಾರೆ ಎಂದೂ ಸುಧಾಮೂರ್ತಿ ಹೇಳಿಕೊಂಡಿದ್ದಾರೆ.

ಅಲ್ಲದೆ, ಈ ದಿನಗಳಲ್ಲಿ ಕಾರ್ಪೊರೇಟ್ ಸೆಟ್-ಅಪ್‌ಗಳಲ್ಲಿ ಕೆಲಸಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲು ಪ್ರಯತ್ನಿಸಿದ್ದೀರಾ ಎಂದು ಕೇಳಿದಾಗ, “ಜನರು ವಿಭಿನ್ನ ಅಭಿವ್ಯಕ್ತಿ ವಿಧಾನಗಳನ್ನು ಹೊಂದಿದ್ದಾರೆ. ಆದರೆ ಅವರು ಹಾಗೆ ಬದುಕಿಕಿದ್ದಾರೆ, ಮಾತಿನಂತೆ ನಡೆದುಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ’’ ಎಂದು ಸುಧಾಮೂರ್ತಿ ಉತ್ತರಿಸಿದ್ದಾರೆ.

ನಾರಾಯಣ ಮೂರ್ತಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡ ನಂತರ ಮತ್ತು ಯುವಕರಿಗೆ 70 ಗಂಟೆಗಳ ಕೆಲಸದ ವಾರಗಳನ್ನು ಸೂಚಿಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಕೋಲಾಹಲ ಉಂಟುಮಾಡಿದೆ.

ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಈ ಹಿನ್ನೆಲೆ ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ.

ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಮಾಡಿದಂತೆ ದೇಶದ ಯುವಕರು ಕೆಲಸ ಮಾಡ್ಬೇಕು ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗೆ ಸಂವಾದದಲ್ಲಿ ನಾರಾಯಣ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ವಿನಂತಿಯೆಂದರೆ, ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ, ಎಂದು ನಮ್ಮ ಯುವಕರು ಹೇಳಬೇಕು ಎಂದು 77 ವರ್ಷ ವಯಸ್ಸಿನ ನಾರಾಯಣ ಮೂರ್ತಿ ತಿಳಿಸಿದ್ದರು.

ಆದರೆ, ಸಾಮಾಜಿಕ ಮಾಧ್ಯಮ ತಜ್ಞರು, ವೈದ್ಯಕೀಯ ವೃತ್ತಿಪರರು ಮತ್ತು ಇತರರು ಅಂತಹ ದಿನಚರಿಗಳು ಹೃದಯ ಸಮಸ್ಯೆಗಳು ಮತ್ತು ಒತ್ತಡ-ಸಂಬಂಧಿತ ತೊಡಕುಗಳಿಗೆ ಕಾರಣವಾಗುತ್ತವೆ ಎಂದು ಸೂಚಿಸಿದ್ದಾರೆ. ಅಲ್ಲದೆ, ದೀರ್ಘಾವಧಿಯು ಕಳಪೆ ಗುಣಮಟ್ಟದ ಕೆಲಸ ಮತ್ತು ಕಳಪೆ ವೈಯಕ್ತಿಕ ಜೀವನಕ್ಕೆ ಕಾರಣವಾಗಬಹುದು ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ. 
 

Latest Videos

click me!