ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ನಡೆಯುವ ಅನೇಕ ವಿಷಯಗಳಿಂದ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಆದರೆ ಹೆಚ್ಚಿನ ಒತ್ತಡ ಅನುಭವಿಸುವುದು ಕೆಲಸದ ಸ್ಥಳದಲ್ಲಿಯೇ. ಅನೇಕರು ಆಫೀಸ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅಲ್ಲಿ ಅವಕಾಶಗಳ ಜೊತೆಗೆ ಜವಾಬ್ದಾರಿಗಳೂ ಇರುತ್ತವೆ. ಜವಾಬ್ದಾರಿಗಳು ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತದೆ. ದೈಹಿಕ ಶ್ರಮದ ಕೊರತೆಯೂ ಒತ್ತಡಕ್ಕೆ ಕಾರಣವಾಗುತ್ತದೆ.
ಆಫೀಸ್‌ನಲ್ಲಿ ಒತ್ತಡ
ಆಫೀಸ್‌ನಲ್ಲಿ ಒತ್ತಡ, ಆಯಾಸ, ಟೆನ್ಷನ್ ಬರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಈ ಸಲಹೆಗಳನ್ನು ಪಾಲಿಸಿದರೆ ಆರೋಗ್ಯವಾಗಿರಬಹುದು. ಆಫೀಸ್‌ನಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ಹೀಗೆ ಮಾಡಿದ್ರೆ ಒತ್ತಡ ದೂರ
ಚೆನ್ನಾಗಿ ನಿದ್ದೆ ಮಾಡಿ
ದಿನಕ್ಕೆ 7-8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ಆದರೆ ಒತ್ತಡದಲ್ಲಿದ್ದಾಗ ನಿದ್ದೆ ಸರಿಯಾಗಿ ಬರುವುದಿಲ್ಲ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ. ರಾತ್ರಿ ಮೊಬೈಲ್ ನೋಡದಿರುವುದು ಒಳ್ಳೆಯದು.
ಪೌಷ್ಟಿಕ ಆಹಾರ ಸೇವಿಸಿ:
ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮುಂತಾದ ಪೌಷ್ಟಿಕ ಆಹಾರ ಸೇವಿಸಬೇಕು. ಇವು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಮನಸ್ಸನ್ನು ಆರೋಗ್ಯವಾಗಿಡುತ್ತವೆ.
ವ್ಯಾಯಾಮ ಮಾಡಿ:
ವ್ಯಾಯಾಮ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕನಿಷ್ಠ 20 ನಿಮಿಷ ನಡೆದರೆ ಒತ್ತಡ, ಟೆನ್ಷನ್ ಕಡಿಮೆಯಾಗುತ್ತದೆ.
ಧ್ಯಾನ ಮಾಡಿ:
ಧ್ಯಾನ ಮಾಡುವುದರಿಂದ ಅನೇಕ ಲಾಭಗಳಿವೆ. ಧ್ಯಾನ ಮನಸ್ಸನ್ನು ಏಕಾಗ್ರತೆಯಿಂದ ಇಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಶಾಂತಿಯನ್ನು ನೀಡುತ್ತದೆ.
ಮಿತಿ ಹಾಕಿಕೊಳ್ಳಿ:
ಅನೇಕರು 24 ಗಂಟೆಯೂ ಆಫೀಸ್ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಇದರಿಂದ ಒತ್ತಡ ತುಂಬಾ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಮಿತಿ ಹಾಕಿಕೊಳ್ಳಬೇಕು. ಒಂದು ಸಮಯದೊಳಗೆ ಕೆಲಸ ಮುಗಿಸಬೇಕು. ನಂತರ ನಮಗಾಗಿ ಸಮಯ ಕೊಡಬೇಕು. ಆಗ ಮರುದಿನ ಉತ್ಸಾಹದಿಂದ ಕೆಲಸ ಮಾಡಬಹುದು.
ಮನೆಯವರ ಜೊತೆ ಮಾತನಾಡಿ:
ಆಫೀಸ್‌ನಲ್ಲಿ ಒತ್ತಡ ಹೆಚ್ಚಾದರೆ ಮನೆಯವರ ಜೊತೆ, ಸ್ನೇಹಿತರ ಜೊತೆ ಮಾತನಾಡಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ.